ದಸರಾ ವಸ್ತುಪ್ರದರ್ಶನದಲ್ಲಿ ಅರಳುತ್ತಿದೆ `ಹಸಿರು ಕರ್ನಾಟಕ’

ಮೈಸೂರು: ಮನೆಗೊಂದು ಮರ, ಊರಿಗೊಂದು ವನ’ ನಿರ್ಮಿಸುವ ಮೂಲಕ ರಾಜ್ಯವನ್ನು ಹಸಿರುಮಯ ವಾಗಿಸುವ ‘ಹಸಿರು ಕರ್ನಾಟಕ’ ಯೋಜ ನೆಗೆ ಒತ್ತು ನೀಡುವಂತಹ ಮಳಿಗೆಯೊಂದು ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧಗೊಳ್ಳುತ್ತಿದೆ.

ಅರಣ್ಯ ಇಲಾಖೆ ಮಳಿಗೆಯಲ್ಲಿ ಈ ಬಾರಿ `ಹಸಿರು ಕರ್ನಾಟಕ’ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಉತ್ತಮ ಮಳೆಯಾದರೆ ಕಾಡು ಸಮೃದ್ಧಿಯಾಗಿ, ಗ್ರಾಮೀಣ ಜನರ ಬದುಕು ಹಸನಾಗು ತ್ತದೆ. ರೈತರು ನೆಮ್ಮದಿಯಿಂದ ಬೆಳೆದರೆ ನಗರ ಪ್ರದೇಶದ ಜನರೂ ನೆಮ್ಮದಿ ಜೀವನ ನಡೆಸಲು ಸಾಧ್ಯ. ಈ ಕಲ್ಪನೆಯೊಂದಿಗೆ ಮಳಿಗೆ ನಿರ್ಮಾಣಗೊಳ್ಳುತ್ತಿದೆ.

ಮಳೆಯಾಗಿ ಭೂಮಿ ತಂಪಾದರೆ ಗಿಡ, ಮರ, ಪ್ರಾಣಿ ಸಂಕುಲ, ಬೆಳೆ ಸಮೃದ್ಧಿ ಯಾಗಿ ಬೆಳೆಯುತ್ತದೆ, ಮನುಷ್ಯರ ಜೀವ ನವೂ ಸಮೃದ್ಧಿಯಿಂದ ಕೂಡಿರುತ್ತದೆ. ಇದು ಹಸಿರು ಕರ್ನಾಟಕದ ಕಲ್ಪನೆ. ಈ ಕಾರ್ಯಕ್ರಮದಡಿ ಸಣ್ಣಪುಟ್ಟ ಬೋಳು ಗುಡ್ಡಗಳು, ಗೋಮಾಳಗಳು, ಸರ್ಕಾರಿ ಜಮೀನು, ಇಲಾಖೆ ಕಚೇರಿ ಆವರಣ, ಶಾಲಾ -ಕಾಲೇಜು ಆವರಣ, ರೈತರ ಜಮೀನು ಮತ್ತು ಹಂತ ಹಂತವಾಗಿ ಮನೆಗಳ ಅಂಗಳದಲ್ಲಿ ಮರ ಗಿಡಗಳನ್ನು ಬೆಳೆಸುವ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸುವುದು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು, ಶಾಲಾ ಕಾಲೇಜು ಗಳು, ಸಾರ್ವಜನಿಕರು, ಸ್ವಯಂ ಸೇವಕರು ಸಕ್ರಿಯವಾಗಿ ಭಾಗವಹಿಸಿ ಯೋಜನೆ ಯಶಸ್ವಿಗೊಳಿಸುವುದು ಇದರ ಉದ್ದೇಶ.

ರಾಜ್ಯದಲ್ಲಿ 5.50 ಕೋಟಿ ಸಸಿ ನೆಡುವ ಗುರಿಯೊಂದಿಗೆ ಹಸಿರು ಕರ್ನಾಟಕ ಯೋಜನೆಗೆ ಆ.15ರಂದು ರಾಜ್ಯ ಸರ್ಕಾರ ಚಾಲನೆ ನೀಡಿತ್ತು. ರಾಜ್ಯದಲ್ಲಿ ಶೇ.21ರಷ್ಟು ಅರಣ್ಯವಿದ್ದು, ಇದನ್ನು ಶೇ.33ಕ್ಕೆ ಹೆಚ್ಚಿ ಸುವ ಉದ್ದೇಶ ಹೊಂದಲಾಗಿದೆ ಎಂದು ಅರಣ್ಯ ಸಚಿವ ಎಂ.ಶಂಕರ್ ಇತ್ತೀಚೆಗೆ ಹೇಳಿದ್ದರು. ಅಭಿವೃದ್ಧಿ ಹೆಸರಿನಲ್ಲಿ ಗಿಡ, ಮರಗಳನ್ನು ಕಡಿದು ಕಾಡು ನಾಶ ಮಾಡ ಲಾಗುತ್ತಿದೆ. ಕಲ್ಲು ಗಣಿಗಳ ಸ್ಫೋಟದಿಂದ ಭೂಮಿ ಸಡಿಲವಾಗುತ್ತಿದೆ. ಹೀಗಾಗಿ ಅನಾ ಹುತಗಳು ಸಂಭವಿಸುತ್ತವೆ. ಇದಕ್ಕೆ ಇತ್ತೀ ಚಿನ ಕೊಡಗು, ಕೇರಳದಲ್ಲಿ ನಡೆದ ದುರಂತ ಸ್ಪಷ್ಟ ನಿದರ್ಶನವಾಗಿದೆ.

ಈ ಹಿನ್ನೆಲೆಯಲ್ಲಿ `ಹಸಿರು ಕರ್ನಾ ಟಕ’ದ ಮೂಲಕ ರಾಜ್ಯವನ್ನು ಹಸಿರು ಮಾಡುವ ಪ್ರಯತ್ನಕ್ಕೆ ಪೂರಕವಾಗಿ ದಸರಾ ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವ ಜನರಿಗೆ, ಈ ಕುರಿತು ಮಾಹಿತಿ ನೀಡುವ ಪ್ರಯತ್ನವಾಗಿ ಈ ಮಳಿಗೆ ನಿರ್ಮಾಣ ವಾಗುತ್ತಿದೆ. ಬರಡು ಭೂಮಿಯಲ್ಲಿ ಸಸಿ ಗಳನ್ನು ನೆಟ್ಟು ನೀರು ಹಾಕಿ ಪೋಷಿಸಿದರೆ ಅದು ಮರವಾಗುತ್ತದೆ. ಹಸಿರು ಕರ್ನಾ ಟಕ ಸಾಧ್ಯವಾಗುತ್ತದೆ ಎಂಬುದನ್ನು ಈ ಮಳಿಗೆ ಸಾರಲಿದೆ.

ಕಾವಾ ಕಲಾವಿದ ಅನಿಲ್ ಭೋಗಶೆಟ್ಟಿ ಮತ್ತು ತಂಡ ಕಳೆದ ಒಂದು ವಾರದಿಂದ ಮಳಿಗೆ ನಿರ್ಮಾಣ ಕಾರ್ಯದಲ್ಲಿ ನಿರತ ರಾಗಿದ್ದು, ಶೇ.75ರಷ್ಟು ಕೆಲಸ ಮುಗಿದಿದೆ. ನಾಳೆ ವೇಳೆಗೆ ಪೂರ್ಣಗೊಳ್ಳಲಿದೆ ಎನ್ನು ತ್ತಾರೆ. ಮಳಿಗೆಯ ಮುಂದಿನ ಎಡಭಾಗ ದಲ್ಲಿ ಜಲಪಾತದಿಂದ ನೀರು ಬಿದ್ದು, ಜಲಪಾತದ ಕೆಳಗಿನ ಪ್ರದೇಶವೆಲ್ಲಾ ಹಸಿರಿ ನಿಂದ ಕಂಗೊಳಿಸುತ್ತಿದೆ. ಆನೆ, ಜಿಂಕೆ ಇನ್ನಿತರ ವನ್ಯಪ್ರಾಣಿಗಳಿಂದ ತುಂಬಿದೆ. ಬಲಭಾಗದಲ್ಲಿ ಹಳ್ಳಿಗಳ ಚಿತ್ರಣ ತೋರಿಸ ಲಾಗಿದ್ದು, ಇಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮೀಣ ಜನರು ಸಸಿಗಳನ್ನು ನೆಡು ತ್ತಿದ್ದು, ಇದು ಮರವಾಗಿ ಬೆಳೆದರೆ, ಮಳೆ, ಬೆಳೆಯಿಂದ ರೈತರು ಸಮೃದ್ಧಿಯಾದರೆ, ನಗರ-ಪಟ್ಟಣಗಳ ಜನರು ಸಮೃದ್ದಿ ಯಾಗಿ ಜೀವಿಸಬಹುದು ಎಂಬುದನ್ನು ಕಲಾವಿದರು ಚೆನ್ನಾಗಿ ನಿರೂಪಿಸಿದ್ದಾರೆ.

ವಸ್ತುಪ್ರದರ್ಶನ ನೋಡಲು ಬರುವ ಸಾರ್ವಜನಿಕರು, ಪ್ರವಾಸಿಗರಿಗೆ `ಹಸಿರು ಕರ್ನಾಟಕ’ದ ಕಲ್ಪನೆಯನ್ನು ತುಂಬುವ ಜೊತೆಗೆ ಅವರು ಈ ಯೋಜನೆಯಲ್ಲಿ ಸಕ್ರಿಯವಾಗಿ ಕರ್ನಾಟಕವನ್ನು ಹಸಿರಾಗಿಸು ವಲ್ಲಿ ಉತ್ತೇಜನ ನೀಡುವ ರೀತಿಯಲ್ಲಿ ಮಳಿಗೆ ನಿರ್ಮಿಸಲಾಗಿದೆ. ಅಲ್ಲದೆ ಇಲ್ಲಿ ಸೆಲ್ಫಿ ಸ್ಪಾಟ್ ಸಹ ವ್ಯವಸ್ಥೆಗೊಳಿಸಲಾಗಿದ್ದು, ಸಾರ್ವಜನಿ ಕರು ಸೆಲ್ಫಿ ತೆಗೆದುಕೊಳ್ಳಲು ಅವಕಾಶವಿದೆ.