Tag: Dasara Exhibition

ಈ ಬಾರಿಯೂ ದಸರಾ ವಸ್ತುಪ್ರದರ್ಶನದ ಉದ್ಘಾಟನೆಗೆ ಅಪೂರ್ಣ ಮಳಿಗೆಗಳ ಸ್ವಾಗತ
ಮೈಸೂರು

ಈ ಬಾರಿಯೂ ದಸರಾ ವಸ್ತುಪ್ರದರ್ಶನದ ಉದ್ಘಾಟನೆಗೆ ಅಪೂರ್ಣ ಮಳಿಗೆಗಳ ಸ್ವಾಗತ

September 27, 2019

ಮೈಸೂರು,ಸೆ.26(ಎಂಟಿವೈ)- ನವ ರಾತ್ರಿ ಆರಂಭಕ್ಕೆ ಕೇವಲ ಮೂರೇ ದಿನ ಬಾಕಿಯಿದ್ದರೂ ದಸರಾ ವಸ್ತು ಪ್ರದರ್ಶನ ದಲ್ಲಿ ಮಳಿಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ ಇದ್ದು, ಈ ಬಾರಿಯೂ ಖಾಲಿ ಮಳಿಗೆ ಯೊಂದಿಗೆ ವಸ್ತು ಪ್ರದರ್ಶನ ಉದ್ಘಾಟನೆ ಗೊಳ್ಳುವುದು ಖಾತರಿಯಾಗಿದೆ. ವಿವಿಧ ಕಾರಣಗಳಿಂದ ಈ ಬಾರಿ ದಸರಾ ವಸ್ತು ಪ್ರದರ್ಶನದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿತ್ತು. ಈ ನಡುವೆ ಬೆಂಗಳೂರು ಮೂಲದ ಸಂಸ್ಥೆಯೊಂದು 8.25 ಕೋಟಿ ರೂ.ಗೆ ಬಿಡ್ ಕೂಗಿ, ಟೆಂಡರ್ ಪಡೆದಿತ್ತು. ವಸ್ತು ಪ್ರದರ್ಶನ `ಎ’ ಬ್ಲಾಕ್‍ನಲ್ಲಿ…

ಜ.15ರವರೆಗೆ ದಸರಾ ವಸ್ತುಪ್ರದರ್ಶನ ವಿಸ್ತರಣೆ
ಮೈಸೂರು

ಜ.15ರವರೆಗೆ ದಸರಾ ವಸ್ತುಪ್ರದರ್ಶನ ವಿಸ್ತರಣೆ

January 8, 2019

ಮೈಸೂರು: ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಏರ್ಪಡಿಸಿ ರುವ ದಸರಾ ವಸ್ತುಪ್ರದರ್ಶನವನ್ನು ಜನವರಿ 15ರವರೆಗೆ ವಿಸ್ತರಿಸಲಾಗಿದೆ. ಪೂರ್ವ ನಿಗದಿ ಪ್ರಕಾರ ಇಂದು (ಜ.7) ವಸ್ತುಪ್ರದರ್ಶನ ಮುಕ್ತಾಯವಾಗಬೇಕಿತ್ತಾ ದರೂ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮುಂದುವರೆಸುವಂತೆ ನಿರ್ದೇಶನ ನೀಡಿರುವುದರಿಂದ ಜ.15ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಪ್ರವಾಸಿಗರು ಹಾಗೂ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದರಿಂದ ಹಾಗೂ ಅವಧಿ ವಿಸ್ತರಿಸುವಂತೆ ಗುತ್ತಿಗೆದಾರರೂ ಮನವಿ ಮಾಡಿದ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ಅವಧಿ ವಿಸ್ತರಿಸುವಂತೆ ಜಿಲ್ಲಾ…

`ಕರ್ನಾಟಕ ವಿವಿಗಳ ಸಮಗ್ರ ಮಾಹಿತಿ ಕಣಜ’  ಉನ್ನತ ಶಿಕ್ಷಣ ಇಲಾಖೆ ಮಳಿಗೆ
ಮೈಸೂರು

`ಕರ್ನಾಟಕ ವಿವಿಗಳ ಸಮಗ್ರ ಮಾಹಿತಿ ಕಣಜ’ ಉನ್ನತ ಶಿಕ್ಷಣ ಇಲಾಖೆ ಮಳಿಗೆ

December 2, 2018

ಮೈಸೂರು: ಕರ್ನಾಟಕದಲ್ಲಿರುವ ಎಲ್ಲಾ ವಿಶ್ವವಿದ್ಯಾನಿಲಯಗಳ ಕುರಿತ ಸಮಗ್ರ ಮಾಹಿತಿ ಮೈಸೂರಿನಲ್ಲಿ ಒಂದೇ ಸೂರಿನಡಿ ಲಭ್ಯವಾಗಲಿದೆ. ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಇದೇ ಮೊದಲ ಬಾರಿಗೆ ಮೈದಳೆದಿರುವ ಉನ್ನತ ಶಿಕ್ಷಣ ಇಲಾಖೆ ಮಳಿಗೆಯಲ್ಲಿ ರಾಜ್ಯದ 19 ವಿಶ್ವವಿದ್ಯಾ ನಿಲಯಗಳ ಪರಿಚಯ, ಇತಿಹಾಸ, ಧ್ಯೇಯೋದ್ದೇಶ, ಸಾಧನೆಯ ಅನಾವರಣವಾಗಿದೆ. ಉನ್ನತ ಶಿಕ್ಷಣದ ಬಗ್ಗೆ ಮೂಗು ಮುರಿಯುವವರ ಮನಸ್ಸಿನಲ್ಲೂ ಹೆಚ್ಚೆಚ್ಚು ಓದಬೇಕೆಂಬ ಆಶಯವನ್ನು ಬಿತ್ತಿ ಬೆಳೆಸುವಂತೆ ಈ ಮಳಿಗೆಯನ್ನು ನಿರ್ಮಿ ಸಲಾಗಿದೆ. ಅತ್ಯಾಕರ್ಷಕ ಮಾತ್ರವಲ್ಲದೆ ಉನ್ನತ ಶಿಕ್ಷಣದ ಮಹತ್ವ ಕುರಿತಾದ ಸಮಗ್ರ…

ದಸರಾ ವಸ್ತುಪ್ರದರ್ಶನದಲ್ಲಿ 19 ವಿವಿಗಳ ವಿಶೇಷ ಮಳಿಗೆ ಉದ್ಘಾಟನೆ
ಮೈಸೂರು

ದಸರಾ ವಸ್ತುಪ್ರದರ್ಶನದಲ್ಲಿ 19 ವಿವಿಗಳ ವಿಶೇಷ ಮಳಿಗೆ ಉದ್ಘಾಟನೆ

November 29, 2018

ಮೈಸೂರು:  ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ 19 ವಿವಿಗಳ ಕಾರ್ಯ ವೈಖರಿ ಮತ್ತು ಸಾಧನೆಗಳನ್ನು ಬಿಂಬಿಸುವ ಪ್ರದರ್ಶನ ಮಳಿಗೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬುಧವಾರ ಸಂಜೆ ಉದ್ಘಾಟಿಸಿದರು. ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಇದೇ ಮೊದಲ ಬಾರಿಗೆ ಸರಕಾರ ಅಧೀನ ದಲ್ಲಿರುವ 19 ವಿಶ್ವ ವಿದ್ಯಾನಿಲಯಗಳ ವಿಶೇಷತೆಗಳನ್ನೊಳಗೊಂಡ ಮಳಿಗೆಯನ್ನು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಿರ್ಮಿಸಲಾಗಿದೆ. ಸಿಎಂ ಹೆಚ್.ಡಿ.ಕುಮಾರ ಸ್ವಾಮಿಯವರು ಪ್ರತೀ ಮಳಿಗೆಗೂ ಭೇಟಿ ನೀಡಿ ಅದರಲ್ಲಿದ್ದ ವಿಶೇಷತೆ ಬಗ್ಗೆ ಅಧಿಕಾರಿ ಗಳಿಂದ ಮಾಹಿತಿ ಪಡೆದುಕೊಂಡರು….

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ 20 ದಿನದಲ್ಲಿ 3.70 ಲಕ್ಷ ಮಂದಿ ಭೇಟಿ
ಮೈಸೂರು

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ 20 ದಿನದಲ್ಲಿ 3.70 ಲಕ್ಷ ಮಂದಿ ಭೇಟಿ

October 31, 2018

ಮೈಸೂರು:  ಪ್ರವಾಸಿಗರು ಹಾಗೂ ಮೈಸೂರಿಗರ ಪ್ರಮುಖ ಆಕರ್ಷಣೇಯ ಕೇಂದ್ರ ಬಿಂದು ದಸರಾ ವಸ್ತುಪ್ರದರ್ಶನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಗರದ ದೊಡ್ಡಕೆರೆ ಮೈದಾನದಲ್ಲಿ ನಡೆಯುತ್ತಿರುವ ದಸರಾ ವಸ್ತುಪ್ರದರ್ಶನ ಅ.10 ರಂದು ಆರಂಭವಾಗಿದ್ದು, ಈವರೆಗೆ 3.70 ಲಕ್ಷ ಜನ ಭೇಟಿ ನೀಡಿದ್ದಾರೆ. ವಿವಿಧ ಇಲಾಖೆಗಳಿಂದ ನಿರ್ಮಾಣವಾಗುತ್ತಿರುವ ಮಳಿಗೆಗಳನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಲ್ಯಾಂಟನ್ ಪಾರ್ಕ್: ಈ ಬಾರಿಯ ವಿಶೇಷ ಆಕರ್ಷಣೆ ಲ್ಯಾಂಟನ್ ಪಾರ್ಕ್ ನೋಡಲು ಬರುವವರ ಸಂಖ್ಯೆ ಹೆಚ್ಚಾಗಿದ್ದು, ರಾತ್ರಿ ವೇಳೆ ವಿಶೇಷ…

ರಾಜ್ಯದ 19 ವಿವಿಗಳ ಪೂರ್ಣ ಮಾಹಿತಿ ಒಂದೇ ಮಳಿಗೆಯಲ್ಲಿ ಲಭ್ಯ
ಮೈಸೂರು

ರಾಜ್ಯದ 19 ವಿವಿಗಳ ಪೂರ್ಣ ಮಾಹಿತಿ ಒಂದೇ ಮಳಿಗೆಯಲ್ಲಿ ಲಭ್ಯ

October 25, 2018

ಮೈಸೂರು: ಒಂದೇ ಸೂರಿನಲ್ಲಿ ರಾಜ್ಯದಲ್ಲಿರುವ 19 ವಿಶ್ವ ವಿದ್ಯಾನಿಲಯಗಳ ಶೈಕ್ಷಣಿಕ ಸಾಧನೆಯನ್ನು ಅನಾವರಣಗೊಳಿಸುವ ಬೃಹತ್ ಮಳಿಗೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧವಾಗುತ್ತಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ದಸರಾ ವಸ್ತು ಪ್ರದರ್ಶನದಲ್ಲಿ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಮೊದಲ ಬಾರಿ ಸರ್ಕಾರ ಅಧೀನದಲ್ಲಿರುವ 19 ವಿಶ್ವ ವಿದ್ಯಾನಿಲಯಗಳನ್ನು ಒಂದೆಡೆ ಆಯಾಯ ವಿವಿಗಳ ವಿಶೇಷತೆಗಳನ್ನು ಸಾರ್ವಜನಿಕರ ಮುಂದಿಡುವ ಪ್ರಯತ್ನ ಮಾಡಲಾಗುತ್ತದೆ. 120×80 ಅಡಿ ವಿಸ್ತೀರ್ಣದಲ್ಲಿ ಶಿಕ್ಷಣದ ಹುಟ್ಟಿನಿಂದ ಇಲ್ಲಿಯವರೆಗೆ ಸಾಗಿಬಂದ ದಾರಿಯನ್ನು 22 ಮಳಿಗೆಗಳ ಮುಖಾಂ ತರ…

ಇಂಧನ ಇಲಾಖೆ ಮಳಿಗೆಯಲ್ಲಿ ವಿದ್ಯುತ್ ಸುರಕ್ಷತಾ ಬಳಕೆ, ಉಳಿತಾಯದ ಬಗ್ಗೆ ಭರಪೂರ ಮಾಹಿತಿ
ಮೈಸೂರು

ಇಂಧನ ಇಲಾಖೆ ಮಳಿಗೆಯಲ್ಲಿ ವಿದ್ಯುತ್ ಸುರಕ್ಷತಾ ಬಳಕೆ, ಉಳಿತಾಯದ ಬಗ್ಗೆ ಭರಪೂರ ಮಾಹಿತಿ

October 24, 2018

ಮೈಸೂರು: ವಿದ್ಯುತ್ ವಿತರಣಾ ಕಂಪೆನಿಗಳ ಪ್ರಮುಖ ಕಾರ್ಯಕ್ರಮಗಳು, ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು, ಸೋಲಾರ್, ಎಲ್‍ಇಡಿ ದೀಪ ಬಳಸಿ ವಿದ್ಯುತ್ ಉಳಿಸಿ, ವಿದ್ಯುತ್ ಸುರಕ್ಷತಾ ಮತ್ತು ವಿದ್ಯುತ್ ಉಳಿತಾಯದ ಮಾರ್ಗ ಸೂಚಿ ನಾಮಫಲಕಗಳು ಅನಾವರಣಗೊಂಡಿವೆ. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಸೇವ್ ಎನರ್ಜಿ, ಅರ್ಥ್ ಅಂಡ್ ಗ್ರೀನ್ ಶೀರ್ಷಿಕೆಯಡಿ ಇಂಧನ ಇಲಾಖೆ ತೆರೆದಿ ರುವ ಮಳಿಗೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ತಮ್ಮ ವ್ಯಾಪ್ತಿಯ ಹಾಸನ, ಕೊಡಗು, ಮೈಸೂರು, ಮಂಡ್ಯ ಹಾಗೂ ಚಾಮ ರಾಜನಗರ ಜಿಲ್ಲೆಗಳಲ್ಲಿ…

ಮಹಿಳೆ, ಮಕ್ಕಳ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಈ ಪುಟ್ಟ ಮಳಿಗೆ
ಮೈಸೂರು

ಮಹಿಳೆ, ಮಕ್ಕಳ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಈ ಪುಟ್ಟ ಮಳಿಗೆ

October 23, 2018

ಮೈಸೂರು:  ‘ಅವಕಾಶ ಕೊಟ್ಟರೆ ಆಕಾಶ ಮುಟ್ಟೇವು, ನಮ್ಮ ನಿರ್ಧಾರಗಳಿಗೆ ಮನ್ನಣೆ ನೀಡಿ’, ‘ನನ್ನದು ಬೇಡುವ ಕೈಯಲ್ಲ… ಬರೆಯುವ ಕೈ’, ‘ನಾನು ತೊಟ್ಟಿಗಲ್ಲ-ತೊಟ್ಟಿಲಿಗೆ’, ಹೀಗೆ ಪ್ರತಿ ಪಾದಿಸುವ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಹಾಗೂ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡುವ ಮಳಿಗೆ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ತಲೆಯೆತ್ತುತ್ತಿದೆ. ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾದ ದಸರಾ ವಸ್ತು ಪ್ರದರ್ಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ…

ದಸರಾ ವಸ್ತುಪ್ರದರ್ಶನದಲ್ಲಿ ಅರಳುತ್ತಿದೆ `ಹಸಿರು ಕರ್ನಾಟಕ’
ಮೈಸೂರು

ದಸರಾ ವಸ್ತುಪ್ರದರ್ಶನದಲ್ಲಿ ಅರಳುತ್ತಿದೆ `ಹಸಿರು ಕರ್ನಾಟಕ’

October 21, 2018

ಮೈಸೂರು: ಮನೆಗೊಂದು ಮರ, ಊರಿಗೊಂದು ವನ’ ನಿರ್ಮಿಸುವ ಮೂಲಕ ರಾಜ್ಯವನ್ನು ಹಸಿರುಮಯ ವಾಗಿಸುವ ‘ಹಸಿರು ಕರ್ನಾಟಕ’ ಯೋಜ ನೆಗೆ ಒತ್ತು ನೀಡುವಂತಹ ಮಳಿಗೆಯೊಂದು ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧಗೊಳ್ಳುತ್ತಿದೆ. ಅರಣ್ಯ ಇಲಾಖೆ ಮಳಿಗೆಯಲ್ಲಿ ಈ ಬಾರಿ `ಹಸಿರು ಕರ್ನಾಟಕ’ ಯೋಜನೆ ಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಉತ್ತಮ ಮಳೆಯಾದರೆ ಕಾಡು ಸಮೃದ್ಧಿಯಾಗಿ, ಗ್ರಾಮೀಣ ಜನರ ಬದುಕು ಹಸನಾಗು ತ್ತದೆ. ರೈತರು ನೆಮ್ಮದಿಯಿಂದ ಬೆಳೆದರೆ ನಗರ ಪ್ರದೇಶದ ಜನರೂ ನೆಮ್ಮದಿ ಜೀವನ ನಡೆಸಲು ಸಾಧ್ಯ. ಈ ಕಲ್ಪನೆಯೊಂದಿಗೆ ಮಳಿಗೆ ನಿರ್ಮಾಣಗೊಳ್ಳುತ್ತಿದೆ….

ದಸರಾ ವಸ್ತು ಪ್ರದರ್ಶನದಲ್ಲಿ ಇನ್ನೂ ನಿರ್ಮಾಣವಾಗದ ವಿವಿಧ ಇಲಾಖೆ ಮಳಿಗೆಗಳು
ಮೈಸೂರು

ದಸರಾ ವಸ್ತು ಪ್ರದರ್ಶನದಲ್ಲಿ ಇನ್ನೂ ನಿರ್ಮಾಣವಾಗದ ವಿವಿಧ ಇಲಾಖೆ ಮಳಿಗೆಗಳು

October 21, 2018

ಮೈಸೂರು: ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಮಳಿಗೆ ತೆರೆಯಲು ಮೀನಾ ಮೇಷ ಎಣಿಸುತ್ತಿರುವ ಇಲಾಖೆಗಳ ವಿರುದ್ಧ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಓ ಶಶಿಕುಮಾರ್ ಅವರು ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ದಸರಾ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆಯುವ ಸಂಬಂಧ ವಿವಿಧ ಸರ್ಕಾರಿ ಇಲಾಖೆಗಳು/ನಿಗಮ-ಮಂಡಳಿಗಳು/ ಜಿಲ್ಲಾ ಪಂಚಾಯತ್ ಹಾಗೂ ಇತರೆ ಸಂಘ-ಸಂಸ್ಥೆಗಳು ಕೋರಿಕೆ ಸಲ್ಲಿಸಿ, ಸ್ಥಳ ವನ್ನು ಕಾಯ್ದಿರಿಸಿದ್ದವು. ಆದರೆ, ಕೆಲವು ಸಂಸ್ಥೆಗಳು ಇದು ವರೆಗೂ…

1 2
Translate »