ದಸರಾ ವಸ್ತು ಪ್ರದರ್ಶನದಲ್ಲಿ ಇನ್ನೂ ನಿರ್ಮಾಣವಾಗದ ವಿವಿಧ ಇಲಾಖೆ ಮಳಿಗೆಗಳು
ಮೈಸೂರು

ದಸರಾ ವಸ್ತು ಪ್ರದರ್ಶನದಲ್ಲಿ ಇನ್ನೂ ನಿರ್ಮಾಣವಾಗದ ವಿವಿಧ ಇಲಾಖೆ ಮಳಿಗೆಗಳು

October 21, 2018

ಮೈಸೂರು: ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಮಳಿಗೆ ತೆರೆಯಲು ಮೀನಾ ಮೇಷ ಎಣಿಸುತ್ತಿರುವ ಇಲಾಖೆಗಳ ವಿರುದ್ಧ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಓ ಶಶಿಕುಮಾರ್ ಅವರು ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ದಸರಾ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆಯುವ ಸಂಬಂಧ ವಿವಿಧ ಸರ್ಕಾರಿ ಇಲಾಖೆಗಳು/ನಿಗಮ-ಮಂಡಳಿಗಳು/ ಜಿಲ್ಲಾ ಪಂಚಾಯತ್ ಹಾಗೂ ಇತರೆ ಸಂಘ-ಸಂಸ್ಥೆಗಳು ಕೋರಿಕೆ ಸಲ್ಲಿಸಿ, ಸ್ಥಳ ವನ್ನು ಕಾಯ್ದಿರಿಸಿದ್ದವು. ಆದರೆ, ಕೆಲವು ಸಂಸ್ಥೆಗಳು ಇದು ವರೆಗೂ ನಿರ್ಮಾಣ ಕಾಮಗಾರಿ ಆರಂಭಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅ.16ರಂದು ಮಳಿಗೆಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವ, ಕಾಮಗಾರಿ ಪ್ರಗತಿಯಲ್ಲಿರುವ ಹಾಗೂ ಇನ್ನೂ ಮಳಿಗೆ ನಿರ್ಮಾಣ ಕಾರ್ಯ ಆರಂಭಿಸದೆ ನಿರ್ಲಕ್ಷ್ಯ ತಳೆದಿರುವ ಇಲಾಖೆಗಳ ವಿರುದ್ಧ ಅಂಕಿ-ಅಂಶಗಳೊಂದಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಪತ್ರ ಬರೆದಿದ್ದಾರೆ.

ಸಾರ್ವಜನಿಕರ ವೀಕ್ಷಣೆಗೆ ಸಿದ್ದವಿರುವ, ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ಹಾಗೂ ಆರಂಭಿಸದ ಇಲಾಖೆಗಳ ವಿವರ.

ವೀಕ್ಷಣೆಗೆ ಸಿದ್ದವಿರುವ ಮಳಿಗೆಗಳು: ಸರ್ಕಾರದ ಇಲಾಖೆ ಗಳಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಬೆಂಗಳೂರು), ರೇಷ್ಮೇ ಇಲಾಖೆ, ಕೃಷಿ ಇಲಾಖೆ, ತೋಟ ಗಾರಿಕಾ ಇಲಾಖೆ, ಪಶುಪಾಲನಾ ಇಲಾಖೆ(ಮೈಸೂರು), ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ(ಮೈಸೂರು), ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ(ಮಹಾತ್ಮ ಗಾಂಧೀಜಿರವರ 150ನೇ ಜನ್ಮದಿನದ ಪ್ರಯುಕ್ತ), ಪ್ರವಾಸೋದ್ಯಮ ಇಲಾಖೆ (ಬೆಂಗ ಳೂರು). ಕೇಂದ್ರ ಸರ್ಕಾರದ ಇಲಾಖೆ ಸೀನಿಯರ್ ಸೂಪರಿಟೆಂಡೆಂಟ್ ಆಫ್ ಪೋಸ್ಟ್(ಮೈಸೂರು), ನಿಗಮ -ಮಂಡಳಿ ಮತ್ತು ಇತರೆ ಸಂಘ ಸಂಸ್ಥೆಗಳ ಡಿ.ದೇವ ರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (ಮೈಸೂರು), ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ, ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ(ಬೆಂಗಳೂರು), ಕರ್ನಾಟಕ ನವೀ ಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಮೈಸೂರು), ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಮೈಸೂರು), ಶ್ರೀ ರಾಮಕೃಷ್ಣ ಆಶ್ರಮ (ಮೈಸೂರು) ಹಾಗೂ ಪೆಟ್ರೋಲಿಯಂ ಕನ್ಸರ್ ವೇಷನ್ ಲಿ.(ಬೆಂಗಳೂರು).

ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ಮಳಿಗೆಗಳು: ಸರ್ಕಾರದ ಇಲಾಖೆಗಳಾದ ಅರ್ಥಿಕ ಮತ್ತು ಸಾಂಖಿಕ ನಿರ್ದೇಶನಾಲಯ(ಬೆಂಗಳೂರ), ಅರಣ್ಯ ಇಲಾಖೆ, ಆರೋಗ್ಯ ಇಲಾಖೆ (ಮೈಸೂರು). ನಿಗಮ-ಮಂಡಳಿ ಮತ್ತು ಇತರೆ ಸಂಘ ಸಂಸ್ಥೆಗಳ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಮೈಸೂರು), ಕಾವೇರಿ ನಿರಾವರಿ ನಿಗಮ (ಮೈಸೂರು), ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ (ಬೆಂಗಳೂರು), ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ಮೈಸೂರು), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ (ಮೈಸೂರು), ಕರ್ನಾಟಕ ರಾಜ್ಯ ಮಹಿಳಾ ಆಯೋಗ (ಬೆಂಗಳೂರು), ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಮೈಸೂರು), ಕರ್ನಾಟಕ ರೂರಲ್ ಇನ್‍ಪ್ರಾಸ್ಟ್ರಕ್ಚರ್ ಲಿಮಿಟೆಡ್(ಮೈಸೂರು), ವಿಶ್ವವಿದ್ಯಾನಿಲಯ, ಮೀನುಗಾರಿಕೆ, ಕೇರಳ ಕಾಯಲ್ ಬೋರ್ಡ್(ಕೇರಳ ರಾಜ್ಯ). ಜಿಲ್ಲಾ ಪಂಚಾಯತ್ ವಿಭಾಗದಲ್ಲಿ ಹಾಸನ ಜಿಪಂ, ಮಂಡ್ಯ ಜಿಪಂ, ಉಡುಪಿ ಜಿಪಂ, ರಾಮನಗರ ಜಿಪಂ, ಕೊಪ್ಪಳ ಜಿಪಂ ಹಾಗೂ ಉಪ ನಿರ್ದೇಶಕರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ(ಚಿಕ್ಕಬಳ್ಳಾಪುರ).

ಆರಂಭಿಸದ ಸಂಸ್ಥೆಗಳು: ಸರ್ಕಾರದ ಇಲಾಖೆಯಾದ ಸರ್ವ ಶಿಕ್ಷಣ ಅಭಿಯಾನ ಇಲಾಖೆ(ಮೈಸೂರು), ನಿಗಮ- ಮಂಡಳಿ ಮತ್ತು ಸಂಘ-ಸಂಸ್ಥೆಗಳ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ(ಮೈಸೂರು), ಡಾ.ಬಿ.ಆರ್.ಅಂಬೇ ಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ(ಮೈಸೂರು), ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕಾವೇರಿ ಜಲಾನಯನ ಯೋಜನೆಗಳು(ಕಾಡಾ ನಂ-2 ವಿಭಾಗ, ಮೈಸೂರು), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ(ಮೈಸೂರು).

Translate »