ಈ ಬಾರಿಯೂ ದಸರಾ ವಸ್ತುಪ್ರದರ್ಶನದ ಉದ್ಘಾಟನೆಗೆ ಅಪೂರ್ಣ ಮಳಿಗೆಗಳ ಸ್ವಾಗತ
ಮೈಸೂರು

ಈ ಬಾರಿಯೂ ದಸರಾ ವಸ್ತುಪ್ರದರ್ಶನದ ಉದ್ಘಾಟನೆಗೆ ಅಪೂರ್ಣ ಮಳಿಗೆಗಳ ಸ್ವಾಗತ

September 27, 2019

ಮೈಸೂರು,ಸೆ.26(ಎಂಟಿವೈ)- ನವ ರಾತ್ರಿ ಆರಂಭಕ್ಕೆ ಕೇವಲ ಮೂರೇ ದಿನ ಬಾಕಿಯಿದ್ದರೂ ದಸರಾ ವಸ್ತು ಪ್ರದರ್ಶನ ದಲ್ಲಿ ಮಳಿಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ ಇದ್ದು, ಈ ಬಾರಿಯೂ ಖಾಲಿ ಮಳಿಗೆ ಯೊಂದಿಗೆ ವಸ್ತು ಪ್ರದರ್ಶನ ಉದ್ಘಾಟನೆ ಗೊಳ್ಳುವುದು ಖಾತರಿಯಾಗಿದೆ.

ವಿವಿಧ ಕಾರಣಗಳಿಂದ ಈ ಬಾರಿ ದಸರಾ ವಸ್ತು ಪ್ರದರ್ಶನದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿತ್ತು. ಈ ನಡುವೆ ಬೆಂಗಳೂರು ಮೂಲದ ಸಂಸ್ಥೆಯೊಂದು 8.25 ಕೋಟಿ ರೂ.ಗೆ ಬಿಡ್ ಕೂಗಿ, ಟೆಂಡರ್ ಪಡೆದಿತ್ತು. ವಸ್ತು ಪ್ರದರ್ಶನ `ಎ’ ಬ್ಲಾಕ್‍ನಲ್ಲಿ 115 ವಾಣಿಜ್ಯ ಮಳಿಗೆಗಳಿದ್ದು, ಇದರಲ್ಲಿ ವಿವಿಧ ಆಟಿಕೆ, ವಸ್ತ್ರ, ಅಲಂಕಾರಿಕ ವಸ್ತು ಸೇರಿ ದಂತೆ ಇನ್ನಿತರ ವಸ್ತುಗಳ ಮಾರಾಟಕ್ಕೆ ಮೀಸಲಿಡಲಾಗಿದೆ. ಉಳಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾ ಪಂಚಾಯತ್, ನಿಗಮ ಮಂಡಳಿಗಳ 45 ಮಳಿಗೆ ತಲೆಯೆತ್ತಬೇಕಿದೆ. ವಿವಿಧ ಪ್ರೇಕ್ಷಣೀಯ ಸ್ಥಳ, ಧಾರ್ಮಿಕ ಕೇಂದ್ರ, ಆಯಾ ಜಿಲ್ಲೆಗಳ ಪ್ರಸಿದ್ಧ ಸ್ಥಳ ಸೇರಿದಂತೆ ಇನ್ನಿತರ ಅಪರೂಪದ ನೆಲೆಗಳಿಗೆ ಸಂಬಂಧಿ ಸಿದಂತೆ ಜಿಲ್ಲಾ ಪಂಚಾಯತ್‍ಗಳು ತಮ್ಮ ಮಳಿಗೆಗಳಲ್ಲಿ ಅನಾವರಣ ಮಾಡಲಿವೆ.

ಆದರೆ ಎರಡು-ಮೂರು ದಿನದ ಹಿಂದಷ್ಟೇ ಮಳಿಗೆಗಳ ನಿರ್ಮಾಣ ಕೆಲಸ ಆರಂಭವಾಗಿದೆ. ಮಂದಗತಿಯಲ್ಲಿ ಕೆಲಸ ನಡೆಯುತ್ತಿರುವುದರಿಂದ ನವರಾತ್ರಿ ವೇಳೆ ವಸ್ತು ಪ್ರದರ್ಶನಕ್ಕೆ ಬರುವ ಪ್ರವಾಸಿಗರಿಗೆ ನಿರಾಸೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಭರದಿಂದ ಸಿದ್ಧತೆ ಸಾಗುತ್ತಿದೆ: ದಸರಾ ವಸ್ತು ಪ್ರದರ್ಶನದ ಪ್ರಾಧಿಕಾರದ ಅಗತ್ಯ ವಾದ ಸಿದ್ಧತಾ ಕಾರ್ಯ ಪೂರ್ಣಗೊಂ ಡಿದೆ. ಆವರಣದಲ್ಲಿನ ಫೌಂಟೇನ್‍ಗಳನ್ನು ಆಸಿಡ್ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಪಾಚಿ ಕಟ್ಟಿಕೊಂಡಿದ್ದ ಫೌಂಟೇನ್ ಇದೀಗ ಪಳಪಳನೆ ಹೊಳೆಯುತ್ತಿದೆ. ವಿವಿಧ ಬ್ಲಾಕ್ ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಕೆಲವೆಡೆ ಕಾಂಕ್ರಿಟ್ ಹಾಕಲಾಗುತ್ತಿದೆ. ಅಲ್ಲದೆ ಕಾಳಿಂಗರಾವ್ ಮಂಟಪದ ಬಳಿ, ಕಾವೇರಿ ಗ್ಯಾಲರಿ ಬಳಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ಸ್ವಚ್ಛ ಗೊಳಿಸಲಾಗುತ್ತಿದೆ.

ಫುಡ್ ಕೋರ್ಟ್ ರೆಡಿ: ಪ್ರತಿ ವರ್ಷ ದಂತೆ ಈ ಬಾರಿಯೂ ಫುಡ್‍ಕೋರ್ಟ್ ತಲೆ ಎತ್ತಲಿವೆ. ಈಗಾಗಲೇ ಡೆಲ್ಲಿ ಹಪ್ಪಳ, ದೋಸೆ ಕಾರ್ನರ್, ಚುರುಮುರಿ, ಮಲ್ಲಿಗೆ ಇಡ್ಲಿ, ಬಜ್ಜಿ, ಬೋಂಡಾ ಸೇರಿದಂತೆ ಇನ್ನಿತರ ತಿನಿಸುಗಳ ಮಳಿಗೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಚಿಕ್ಕಚಿಕ್ಕ ಮಳಿಗೆಗಳಾ ಗಿರುವುದರಿಂದ ಶೀಟ್ ಬಳಸಿ ಮಳಿಗೆ ನಿರ್ಮಾಣ ಕಾರ್ಯ ಸಾಗುತ್ತಿದೆ. ಸೆ.29ರೊ ಳಗೆ ತಿನಿಸುಗಳ ಮಳಿಗೆ ಪೂರ್ಣ ಪ್ರಮಾಣ ದಲ್ಲಿ ಕಾರ್ಯನಿರ್ವಹಿಸಲಿವೆ.

Translate »