ದಸರಾ ವಸ್ತುಪ್ರದರ್ಶನದಲ್ಲಿ 19 ವಿವಿಗಳ ವಿಶೇಷ ಮಳಿಗೆ ಉದ್ಘಾಟನೆ
ಮೈಸೂರು

ದಸರಾ ವಸ್ತುಪ್ರದರ್ಶನದಲ್ಲಿ 19 ವಿವಿಗಳ ವಿಶೇಷ ಮಳಿಗೆ ಉದ್ಘಾಟನೆ

November 29, 2018

ಮೈಸೂರು:  ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ 19 ವಿವಿಗಳ ಕಾರ್ಯ ವೈಖರಿ ಮತ್ತು ಸಾಧನೆಗಳನ್ನು ಬಿಂಬಿಸುವ ಪ್ರದರ್ಶನ ಮಳಿಗೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬುಧವಾರ ಸಂಜೆ ಉದ್ಘಾಟಿಸಿದರು.

ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಇದೇ ಮೊದಲ ಬಾರಿಗೆ ಸರಕಾರ ಅಧೀನ ದಲ್ಲಿರುವ 19 ವಿಶ್ವ ವಿದ್ಯಾನಿಲಯಗಳ ವಿಶೇಷತೆಗಳನ್ನೊಳಗೊಂಡ ಮಳಿಗೆಯನ್ನು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಿರ್ಮಿಸಲಾಗಿದೆ. ಸಿಎಂ ಹೆಚ್.ಡಿ.ಕುಮಾರ ಸ್ವಾಮಿಯವರು ಪ್ರತೀ ಮಳಿಗೆಗೂ ಭೇಟಿ ನೀಡಿ ಅದರಲ್ಲಿದ್ದ ವಿಶೇಷತೆ ಬಗ್ಗೆ ಅಧಿಕಾರಿ ಗಳಿಂದ ಮಾಹಿತಿ ಪಡೆದುಕೊಂಡರು. ಮುಖ್ಯ ಮಂತ್ರಿಗಳನ್ನು ನೋಡಲು ರೈತರು ಹಾಗೂ ನೂರಾರು ಪ್ರವಾಸಿಗರು ಧಾವಿಸಿದ್ದರಿಂದ ಸ್ಥಳ ದಲ್ಲಿ ನೂಕು ನುಗ್ಗಲು ಉಂಟಾಯಿತು.

ರೈತರಿಂದ ಮನವಿ: ಮಳಿಗೆ ಉದ್ಘಾ ಟನೆಗೂ ಮುನ್ನವೇ ಮುಖ್ಯಮಂತ್ರಿಯವ ರನ್ನು ಸುತ್ತುವರಿದ ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು. ರೈತ ಸಮುದಾಯ ಆರ್ಥಿಕ ಸಂಕಷ್ಟದಲ್ಲಿ ನರಳುತ್ತಿದ್ದು, ಸರಕಾರದ ಸಾಲ ಮನ್ನಾ ಮಾಡುವ ಮಹತ್ವಾಕಾಂಕ್ಷೆ ಘೋಷಣೆಯೊಂದಿಗೆ ಕೃಷಿ ಕ್ಷೇತ್ರದ ಪ್ರಗತಿಗೆ ಪೂರಕ ಕಾರ್ಯ ಕ್ರಮಗಳನ್ನು ರೂಪಿಸಿ ರೈತ ಸಮುದಾಯ ವನ್ನು ಉಳಿಸಲು ಕಟಿಬದ್ಧರಾಗಬೇಕು. ಹಾಗೆಯೇ ಕೆ.ಆರ್.ನಗರ ತಾಲೂಕಿನ ಶ್ರೀ ರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರ್ ಆರಂಭಿಸಲು ಆದೇಶಿಸಬೇಕು. ಭತ್ತ ಖರೀದಿಯನ್ನು ಡಿ.1ರಿಂದಲೇ ಆರಂಭಿಸಬೇಕು. ಕಬ್ಬು ಬೆಳೆಗೆ ಬೆಂಬಲ ಬೆಲೆ ಕೊಡಿಸುವಂತೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರೈತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು. ಭತ್ತಕ್ಕೆ ಖರೀದಿ ಕೇಂದ್ರ ಆರಂಭಿಸುವ ಮುನ್ನವೇ ಭತ್ತವನ್ನು ದಲ್ಲಾಳಿಗಳ ಜೊತೆ ಸೇರಿ ಭತ್ತ ಮಾರಾಟ ಮಾಡಬೇಡಿ. ಬೆಂಬಲ ಸಿಕ್ಕರೆ ಮಾತ್ರ ಮಾರಿ ಎಂದು ತಿಳಿಹೇಳಿದರು.

ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮ ನಾಥನಂದ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋ ದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ಜಿಪಂ ಸಿಇಒ ಕೆ.ಜ್ಯೋತಿ, ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್ ಚಂದ್ರ, ಡಿಸಿಪಿ ಎನ್. ವಿಷ್ಣುವರ್ಧನ, ಮಾಜಿ ಮೇಯರ್‍ಗಳಾದ ಆರ್.ಲಿಂಗಪ್ಪ, ರವಿ ಕುಮಾರ್ ಇನ್ನಿತರರು ಭಾಗವಹಿಸಿದ್ದರು.

Translate »