ಜ.15ರವರೆಗೆ ದಸರಾ ವಸ್ತುಪ್ರದರ್ಶನ ವಿಸ್ತರಣೆ
ಮೈಸೂರು

ಜ.15ರವರೆಗೆ ದಸರಾ ವಸ್ತುಪ್ರದರ್ಶನ ವಿಸ್ತರಣೆ

January 8, 2019

ಮೈಸೂರು: ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಏರ್ಪಡಿಸಿ ರುವ ದಸರಾ ವಸ್ತುಪ್ರದರ್ಶನವನ್ನು ಜನವರಿ 15ರವರೆಗೆ ವಿಸ್ತರಿಸಲಾಗಿದೆ.

ಪೂರ್ವ ನಿಗದಿ ಪ್ರಕಾರ ಇಂದು (ಜ.7) ವಸ್ತುಪ್ರದರ್ಶನ ಮುಕ್ತಾಯವಾಗಬೇಕಿತ್ತಾ ದರೂ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮುಂದುವರೆಸುವಂತೆ ನಿರ್ದೇಶನ ನೀಡಿರುವುದರಿಂದ ಜ.15ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಪ್ರವಾಸಿಗರು ಹಾಗೂ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದರಿಂದ ಹಾಗೂ ಅವಧಿ ವಿಸ್ತರಿಸುವಂತೆ ಗುತ್ತಿಗೆದಾರರೂ ಮನವಿ ಮಾಡಿದ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ಅವಧಿ ವಿಸ್ತರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರೂ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

2018ರ ದಸರಾ ಮಹೋತ್ಸವದ ಅಂಗವಾಗಿ ಆರಂಭವಾಗಿದ್ಧ ವಸ್ತು ಪ್ರದರ್ಶನದಲ್ಲಿ ತಡವಾಗಿ ಮಳಿಗೆಗಳು ಆರಂಭವಾಗಿದ್ದವು. ಇದೀಗ ಭೇಟಿ ನೀಡು ವವರ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಕ್ರಾಂತಿ ಹಬ್ಬದವರೆಗೆ ಮುಂದುವರೆಸಲು ತೀರ್ಮಾ ನಿಸಿ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ ಎಂದೂ ವೆಂಕಟೇಶ್ ಹೇಳಿದ್ದಾರೆ.

Translate »