ಬೆಂಗಳೂರು: ಬಾಲಿವುಡ್‍ನಲ್ಲಿ ಆರಂಭಗೊಂಡ ಮೀಟೂ ಇದೀಗ ಸ್ಯಾಂಡಲ್‌ವುಡ್‌ಗೂ ಕಾಲಿಟ್ಟಿದ್ದು, ಗಾಂಧಿನಗರದಲ್ಲಿ ತಲ್ಲಣ ಮೂಡಿಸಿದೆ.
ನಟಿ ಶ್ರುತಿ ಹರಿಹರನ್ ಬಹು ಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಕನ್ನಡ ಚಿತ್ರರಂಗದಲ್ಲಿ ಪರ-ವಿರೋಧ ಚರ್ಚೆ ಜೋರಾಗಿದೆ. ಟೀಕೆ, ಖಂಡನೆ ಗಳ ಸುರಿಮಳೆಯೂ ಆಗುತ್ತಿದೆ. `ವಿಸ್ಮಯ’ ಸಿನಿಮಾ ಚಿತ್ರೀಕರಣದ ರಿಹರ್ಸಲ್ ವೇಳೆ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು. ಡಿನ್ನರ್‌ಗೆ ಹೋಗೋಣವೆಂದು ಪೀಡಿಸುತ್ತಿದ್ದರು ಎಂದು ನಟಿ ಶ್ರುತಿ ಆರೋಪಿಸಿದ್ದಾರೆ.
ಶ್ರುತಿ ಹರಿಹರನ್ ಆರೋಪ ಸುಳ್ಳು. ನಾನೆಂದೂ ಆ ರೀತಿ ವರ್ತಿಸಿಲ್ಲ. ಆರೋಪದಿಂದ ನನಗೆ ಬಹಳ ನೋವಾಗಿದೆ. 60-70 ನಟಿಯರ ಜೊತೆ ಅಭಿನಯಿಸಿದ್ದೇನೆ. ಯಾರೊ ಬ್ಬರೂ ಈ ರೀತಿ ಮಾತನಾಡಿಲ್ಲ. ನಾನು ಅಂಥ ಚೀಪ್ ಮೆಂಟಾಲಿಟಿಯವನಲ್ಲ ಎಂದಿದ್ದಾರೆ.
ಮೀಟೂ ಅಭಿಯಾನ ದುರ್ಬಳಕೆ ಸರಿಯಲ್ಲ. ಶ್ರುತಿ ಆರೋಪಕ್ಕೆ ಸಾಕ್ಷಿ ಇದೆಯೆ? ಅವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಸರ್ಜಾ ಹೇಳಿದ್ದಾರೆ.
ಅಳಿಯನ ಬೆನ್ನಿಗೆ ನಿಂತ ನಟ ರಾಜೇಶ್: ತಮ್ಮ ಅಳಿಯ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪ ಮಾಡಿರುವುದಕ್ಕೆ ಹಿರಿಯ ನಟ ರಾಜೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರ್ಜುನ್ 60-70 ನಾಯಕಿಯರ ಜೊತೆ ಅಭಿನಯಿಸಿದ್ದಾರೆ. ಅವರು ಯಾರೂ ಒಮ್ಮೆಯೂ ದೂರಿಲ್ಲ. ಈಗ ಮೀ ಟೂ ಎಂಬ ಹೊಸ ರೋಗ ಶುರುವಾಗಿದೆ. 8-10 ವರ್ಷದ ಹಿಂದಿನದ್ದನ್ನು ತೆಗೆದು ರಗಳೆ ಮಾಡುವುದು ಸರಿಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.