#Me Too ರಂಪಾಟಕ್ಕೆ ಮತ್ತೊಂದು ಟ್ವಿಸ್ಟ್: ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
ಮೈಸೂರು

#Me Too ರಂಪಾಟಕ್ಕೆ ಮತ್ತೊಂದು ಟ್ವಿಸ್ಟ್: ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

October 28, 2018

ಬೆಂಗಳೂರು: ಕನ್ನಡ ಚಿತ್ರರಂಗ ದಲ್ಲಿ #ಒe ಖಿoo ಅಭಿಯಾನ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಅವರು ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ.

`ವಿಸ್ಮಯ’ ಚಿತ್ರದ ಚಿತ್ರೀಕರಣದ ವೇಳೆ ತಮಗೆ ಅರ್ಜುನ್ ಸರ್ಜಾ ಲೈಂಗಿಕ ಕಿರು ಕುಳ ನೀಡಿದ್ದರು ಎಂದು ತಮ್ಮ ದೂರಿ ನಲ್ಲಿ ಆರೋಪಿಸಿ ರುವ ಶ್ರುತಿ ಹರಿಹರನ್ ಸಾಕ್ಷೀದಾರರಾಗಿ ಚಿತ್ರದ ನಿರ್ದೇಶಕ ಸೇರಿದಂತೆ 6 ಮಂದಿಯನ್ನು ಉಲ್ಲೇಖಿಸಿ ದ್ದಾರೆ. ಕಬ್ಬನ್ ಪಾರ್ಕ್ ಪೊಲೀಸರು ಅರ್ಜುನ್ ಸರ್ಜಾ ವಿರುದ್ಧ ಭಾರತೀಯ ದಂಡ ಸಂಹಿತೆ 354, 354(ಎ), 506 ಮತ್ತು 509ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನ ವಿವರ: 2015ರ ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಇರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ `ವಿಸ್ಮಯ’ ಚಿತ್ರದ ರೊಮ್ಯಾಂಟಿಕ್ ದೃಶ್ಯದ ಚಿತ್ರೀ ಕರಣವಿತ್ತು. ಆ ದೃಶ್ಯದಲ್ಲಿ ನಾವಿಬ್ಬರೂ ಸಣ್ಣ ಡೈಲಾಗ್ ನಂತರ ಅಪ್ಪಿಕೊಳ್ಳ ಬೇಕಾಗಿತ್ತು. ಆ ದೃಶ್ಯಕ್ಕೆ ನಿರ್ದೇಶಕರು ಬಯಸಿದಂತೆ ರಿಹರ್ಸಲ್ ಮಾಡ ಬೇಕಾಗಿತ್ತು. ಆ ವೇಳೆ ಸರ್ಜಾ ಅವರು ಅಸಭ್ಯವಾಗಿ ವರ್ತಿಸಿ ನನ್ನ ಮೊಳಕಾಲು ಗಳಿಂದ ಎದೆ ಭಾಗದವರೆಗೆ ಮುಟ್ಟಿದರು ಎಂದು ಶ್ರುತಿ ದೂರಿದ್ದಾರೆ. ಸರ್ಜಾ ತೋರಿದ ಅನುಚಿತ ವರ್ತನೆಗೆ ಮೌನ ವಾಗಿ ನರಳಿದ್ದೆ. ನಾನು ಆಗಷ್ಟೇ ಬೆಳೆ ಯುತ್ತಿದ್ದ ನಟಿ.

ಅವರು ಹೆಸರಾಂತ ನಟ. ಚಿತ್ರರಂಗ ಮತ್ತು ಹೊರಗಡೆಯೂ ಪ್ರಭಾವಿ ವ್ಯಕ್ತಿ. ಆದ್ದರಿಂದ ನನ್ನ ಭಾವನೆಗಳನ್ನು ಆಗ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಪ್ರತಿಕ್ರಿಯಿಸುವ ಮುನ್ನವೇ ಅವರು ನನ್ನನ್ನು ಅವರ ಹತ್ತಿರಕ್ಕೆ ಬರಸೆಳೆದುಕೊಂಡು ಗಟ್ಟಿಯಾಗಿ ತಬ್ಬಿಕೊಂಡರು. ನನ್ನನ್ನು ತೋಳಿನಲ್ಲಿ ಬಳಸಿಕೊಂಡೇ ನಿರ್ದೇಶಕರನ್ನು ದ್ದೇಶಿಸಿ `ಸೀನ್‍ನಲ್ಲಿ ಇದಕ್ಕಿಂತ ಉತ್ತಮವಾಗಿ ಮಾಡಬಹುದು’ ಎಂದು ಹೇಳಿದರು ಎಂದು ಶ್ರುತಿ ಹರಿಹರನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಅರ್ಜುನ್ ಸರ್ಜಾ ಅವರ ಈ ವರ್ತನೆ ನನ್ನ ಘನತೆಗೆ ಅವಮಾನಕರವಾಗಿತ್ತು. ಅವರ ದೈಹಿಕ ಸ್ಪರ್ಶವು ಲೈಂಗಿಕ ದೌರ್ಜನ್ಯದ ಸ್ವರೂಪದ್ದಾಗಿತ್ತು. ಈ ಅವಮಾನವನ್ನು ತಡೆಯಲಾಗದೇ ನಾನು ಕಾರವಾನ್‍ಗೆ ತೆರಳಿ ಅಳುತ್ತಾ ಕುಳಿತ್ತಿದ್ದೆ. ಆಗ ಸಿಬ್ಬಂದಿಗ ಳಾದ ಬೋರೇಗೌಡ ಮತ್ತು ಕಿರಣ್ ಅವರು ನನ್ನನ್ನು ಸಮಾಧಾನಪಡಿಸಿದರು. ಚಿತ್ರದಲ್ಲಿ ಇನ್ನೂ ಒಂದು ದೃಶ್ಯ ಚಿತ್ರೀಕರಣ ಮಾಡಬೇಕಾಗಿತ್ತು. ಆ ದೃಶ್ಯದಲ್ಲಿ ನಾವಿಬ್ಬರೂ ಬೆಡ್ ಮೇಲೆ ಮಲಗಬೇಕಾಗಿತ್ತು. ಆ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಅರ್ಜುನ್ ಸರ್ಜಾ ನನ್ನನ್ನು ಹತ್ತಿರಕ್ಕೆ ಎಳೆದುಕೊಂಡು ತಬ್ಬಿಕೋ ಎಂದರು. ನಾನು ಅವರ ಕೈಯ್ಯನ್ನು ದೂಡಿ ಚಿತ್ರೀಕರಣ ಮುಗಿಸಿ ವಾಪಸ್ ಬಂದೆ. ನನ್ನ ವಿರೋಧದ ನಡುವೆಯೂ ಅವರು ನನ್ನ ಘನತೆಗೆ ಕುಂದು ತರುವಂತೆ ವರ್ತಿಸಿದ್ದು, ಆ ನೋವನ್ನು ತಡೆಯಲಾರದೇ ಕಿರುಚಿದ್ದೆ, ಅತ್ತಿದ್ದೆ. ಸಹ ನಿರ್ದೇಶಕರಾದ ಭರತ್ ನೀಲಕಂಠ ಮತ್ತು ಮೋನಿಕಾ ಅವರಿಗೆ ಈ ವಿಷಯ ತಿಳಿಸಿದ್ದೆ. ಆಗ ಅವರು ಇನ್ನು ಯಾವುದೇ ರಿಹರ್ಸಲ್ ಇರುವುದಿಲ್ಲ. ಕೇವಲ ಟೇಕ್ ಮಾತ್ರ ಇರುತ್ತದೆ ಎಂದು ಸಮಾಧಾನಪಡಿಸಿದ್ದರು.

2015ರ ಡಿಸೆಂಬರ್‍ನಲ್ಲಿ ದೇವನಹಳ್ಳಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಶೂಟಿಂಗ್ ಇತ್ತು. ಅಲ್ಲೂ ಕೂಡ ಅರ್ಜುನ್ ಸರ್ಜಾ ನಿರಂತರವಾಗಿ ಲೈಂಗಿಕವಾಗಿ ಪ್ರಚೋದಿ ಸುವಂತೆ ವರ್ತಿಸಿದರು. ಶೂಟಿಂಗ್ ಬಳಿಕ ಖಾಸಗಿಯಾಗಿ ಭೇಟಿಯಾಗಿ ಸಮಯ ಕಳೆಯೋಣ ಎಂದು ಶೂಟಿಂಗ್ ಸೆಟ್‍ನಲ್ಲೇ ಹೇಳಿದ್ದರು. ಅವರು ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಹೀಗೆ ಹೇಳಿದರೆಂದು ನನಗೆ ಅನ್ನಿಸಿತ್ತು ಎಂದು ಶ್ರುತಿ ತನ್ನ ದೂರಿನಲ್ಲಿ ಹೇಳಿದ್ದಾರೆ. ಮತ್ತೊಮ್ಮೆ ನಾನು ಕಾರಿನಲ್ಲಿ ಮನೆಗೆ ಹೋಗುತ್ತಿದ್ದೆ. ನನ್ನ ಜೊತೆ ಬೋರೇಗೌಡ ಮತ್ತು ಕಿರಣ್ ಇದ್ದರು. ನನ್ನ ಕಾರು ದೇವನಹಳ್ಳಿ ಸಿಗ್ನಲ್‍ನಲ್ಲಿ ನಿಂತಿದ್ದಾಗ ಹತ್ತಿರದಲ್ಲೇ ತಮ್ಮ ಕಾರನ್ನು ನಿಲ್ಲಿಸಿದ ಅರ್ಜುನ್ ಸರ್ಜಾ, ಕಾರಿನ ವಿಂಡೋ ಗ್ಲಾಸ್ ಇಳಿಸಿ ರೆಸ್ಟೋರೆಂಟ್‍ಗೆ ಹೋಗೋಣ ಬಾ ಎಂದು ಕರೆದರು. ಯಾಕೆ ಎಂದು ಕೇಳಿದಾಗ ನಾವಿಬ್ಬರೂ ಆನಂದಮಯವಾಗಿ ಸಮಯ ಕಳೆಯೋಣ. ನಾನು ಪದೇ ಪದೆ ಕರೀತಾ ಇದ್ದೀನಿ. ನೀನು ಬರುವುದಿಲ್ಲ ಎನ್ನುತ್ತಿದ್ದೀಯಾ. ಇಂದು ನನಗೆ ಬೇಕಾದಷ್ಟು ಸಮಯವಿದೆ. ನನ್ನ ರೂಂನಲ್ಲೂ ಬೇರೆ ಯಾರೂ ಇಲ್ಲ ಎಂದರು. ಅವರ ಮಾತು ಕೇಳಿ ಮನಸ್ಸಿಗೆ ತುಂಬಾ ನೋವಾಗಿ ಕಣ್ಣೀರು ಬಂತು. ನನ್ನ ಕಣ್ಣೀರನ್ನು ನೋಡಿ ಅರ್ಜುನ್ ಸರ್ಜಾ ಅಲ್ಲಿಂದ ತೆರಳಿದರು ಎಂದು ಶ್ರುತಿ ಹರಿಹರನ್ ಆರೋಪಿಸಿದ್ದಾರೆ.

2016ರ ಜುಲೈ 18ರಂದು `ವಿಸ್ಮಯ’ ಚಿತ್ರದ ಶೂಟಿಂಗ್‍ಗಾಗಿ ಯುಬಿ ಸಿಟಿಗೆ ತೆರಳಿದ್ದೆ. ನಾನು ಅಲ್ಲಿನ ಲಾಬಿಯಲ್ಲಿ ಕುಳಿತ್ತಿದ್ದಾಗ ಅರ್ಜುನ್ ಸರ್ಜಾ ಹಿಂದಿನಿಂದ ಬಂದು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡರು. ಯಾಕೆ ಒಬ್ಬಳೇ ಕುಳಿತ್ತಿದ್ದೀಯಾ, ನನ್ನ ರೂಂಗೆ ಯಾಕೆ ಬರಬಾರದು? ನಾನೂ ಒಬ್ಬನೇ ಇದ್ದೀನಿ. ಸ್ವಲ್ಪ ಖುಷಿಯಾಗಿರೋಣ ಎಂದು ಹೇಳಿದರು. ಅವರ ಉದ್ದೇಶ ಅರ್ಥವಾಗಿ ನನಗೆ ಭಯವಾಯಿತು. ನಾನು ಬರುವುದಿಲ್ಲ ಎಂದೆ. ಆದರೆ ಅವರು `ಒಂದು ದಿನ ನೀನು ನನ್ನ ರೂಂಗೆ ಬರುವಂತೆ ಮಾಡುತ್ತೇನೆ’ ಎಂದಿದ್ದಲ್ಲದೇ, ಬೀ ಕೇರ್‍ಫುಲ್, ಇದನ್ನು ಯಾರಿಗಾದರೂ ಹೇಳಿದರೆ ನಿನ್ನ ಕೆರಿಯರ್ ಹಾಳು ಮಾಡುತ್ತೇನೆ. ಬೇರೆ ಬೇರೆ ಕಡೆ ಎಳೆದಾಡಿ ನಿನ್ನ ಬದುಕು ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದರು. ನಾನು ಈ ಎಲ್ಲಾ ವಿವರಗಳನ್ನು ಸ್ನೇಹಿತೆ ಯಶಸ್ವಿನಿಗೆ ತಿಳಿಸಿದ್ದೇನೆ. ಆಕೆ ನಿನ್ನ ಕೆರಿಯರ್ ಹಾಳಾಗಬಹುದು. ನೀನು ಪೊಲೀಸರಿಗೆ ತಿಳಿಸಿದರೂ ಸೆಲೆಬ್ರಿಟಿ ಆಗಿರುವುದರಿಂದ ವಿಷಯ ಕಾಡ್ಗಿಚ್ಚಿನಂತೆ ಹರಡಿ ತೊಂದರೆಯಾಗಬಹುದು ಎಂದು ಹೇಳಿದಳು. ನನಗೆ ಆಗ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಆಗಲಿಲ್ಲ. ಆದರೆ ಅರ್ಜುನ್ ಸರ್ಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಲವಾರು ಬಾರಿ ಯೋಚಿಸಿದ್ದೆ. ನನಗೆ ಧೈರ್ಯ ಬರಲಿಲ್ಲ. ಬೆಳೆಯುತ್ತಿರುವ ನಟಿಯಾಗಿ ಇದನ್ನು ಹೇಳಿದರೆ ಕೆರಿಯರ್‍ಗೆ ಧಕ್ಕೆಯಾಗಬಹುದು, ಬದುಕಿಗೆ ಅಪಾಯವಾಗಬಹುದು ಎಂದು ಮೌನವಾಗಿ ನರಳಿದ್ದೆ. ಈಗ ಜಾಗತಿಕವಾಗಿ ನಡೆಯುತ್ತಿರುವ #ಒe ಖಿoo ಅಭಿಯಾನ ಧೈರ್ಯ ನೀಡಿದೆ. ಹೀಗಾಗಿ ಈಗ ದೂರು ನೀಡುತ್ತಿದ್ದೇನೆ ಎಂದು ಶ್ರುತಿ ಹರಿಹರನ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು, ಕೃತ್ಯ ನಡೆದಿದೆ ಎಂದು ಶ್ರುತಿ ಹರಿಹರನ್ ತಿಳಿಸಿರುವ ಸ್ಥಳಗಳಿಗೆ ಅವರನ್ನು ಕರೆದೊಯ್ದು ಮಹಜರ್ ನಡೆಸಿದ್ದಾರೆ.

Translate »