ಪಾಂಡವಪುರದಲ್ಲಿ ಸಿಎಂ ಪ್ರಚಾರ ವೇಳೆ ದುರ್ಘಟನೆ
ಮಂಡ್ಯ

ಪಾಂಡವಪುರದಲ್ಲಿ ಸಿಎಂ ಪ್ರಚಾರ ವೇಳೆ ದುರ್ಘಟನೆ

October 28, 2018

ಪಾಂಡವಪುರ: ಜೆಡಿಎಸ್ ಚುನಾವಣಾ ಪ್ರಚಾರ ಸಭೆಯ ವೇಳೆ ವೇದಿಕೆ ಮುಂಭಾಗದಲ್ಲಿದ್ದ ನಾಲೆಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಪಾಂಡವಪುರ ಪಟ್ಟಣದಲ್ಲಿ ಶನಿವಾರ ನಡೆದಿದೆ.

ಜಕ್ಕನಹಳ್ಳಿ ಗ್ರಾಮದ ವೆಂಕಟಶೆಟ್ಟಿ ಪುತ್ರ ಕುಮಾರ (38) ಮೃತ ವ್ಯಕ್ತಿ. ಪಟ್ಟಣದ ಪಾಂಡವಪುರ ಕ್ರೀಡಾಂಗ ಣದ ಬಳಿ ಆಯೋಜಿಸಲಾಗಿದ್ದ ಜೆಡಿಎಸ್ ಬಹಿರಂಗ ಪ್ರಚಾರ ಸಭೆಯ ವೇಳೆ ವೇದಿಕೆ ಸಮೀಪದಲ್ಲಿದ್ದ ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ಕುಮಾರ ಮೃತಪಟ್ಟಿದ್ದಾರೆ.

ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗ ವಹಿಸಿದ್ದ ಕುಮಾರ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ನೀರು ಕುಡಿಯಲು ನಾಲೆಯ ಬಳಿ ತೆರಳಿದ್ದಾರೆ. ಈ ವೇಳೆ ಕಾಲುಜಾರಿ ನಾಲೆಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದೊಯ್ಯು ತ್ತಿರುವಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ನಂತರ ಪೊಲೀಸರು ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಈ ಸಂಬಂಧ ಪಾಂಡವ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಯಕ್ರಮ ಮುಗಿದ ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ, ಕುಮಾರ್ ಅವರ ಅಂತಿಮ ದರ್ಶನ ಪಡೆದರು.

Translate »