ಮೈಸೂರಲ್ಲಿ ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನ
ಮೈಸೂರು

ಮೈಸೂರಲ್ಲಿ ಡಿವೈಎಸ್ಪಿ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನ

October 28, 2018

ಮೈಸೂರು: ಮೈಸೂರಿನ ನಜರ್ ಬಾದ್ ನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಪಿಎ) ಕವಾಯಿತು ಮೈದಾನದಲ್ಲಿ ಇಂದು 34ನೇ ತಂಡದ 36 ಡಿವೈಎಸ್ಪಿ ಹಾಗೂ ಐವರು ಕಾರಾಗೃಹ ಸಹಾಯಕ ಅಧೀಕ್ಷಕ ಪ್ರಶಿಕ್ಷ ಣಾರ್ಥಿಗಳ ನಿರ್ಗಮನ ಪಥಸಂಚಲನ ಇಂದು ನಡೆಯಿತು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು, ಆಕರ್ಷಕ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದರು. ನಂತರ ಉತ್ತಮ ಸಾಧನೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.

ಜನರಲ್ ಸಲ್ಯೂಟ್, ಪರೇಡ್ ಪರಿವೀಕ್ಷಣೆ, ರಾಷ್ಟ್ರ ಮತ್ತು ಪೊಲೀಸ್ ಧ್ವಜಗಳ ಆಗಮನ-ನಿರ್ಗಮನದ ನಂತರ ಕೆಪಿಎ ನಿರ್ದೇಶಕ ವಿಪುಲ್‍ಕುಮಾರ್ ಅವರು ಸಿಎಂ ಸೇರಿದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ಧ ಗಣ್ಯರನ್ನು ಸ್ವಾಗತಿಸಿ ಅಕಾ ಡೆಮಿ ಕಾರ್ಯವೈಖರಿಯ ವರದಿ ವಾಚನ ಮಾಡಿದ್ದಲ್ಲದೆ, 2017ರ ಅಕ್ಟೋಬರ್ 9 ರಿಂದ ಬುನಾದಿ ತರಬೇತಿ ಪಡೆದು ಕರ್ತವ್ಯಕ್ಕೆ ನಿರ್ಗಮಿಸುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪರೇಡ್ ಕಮಾಂಡರ್ ಆದ ಮೈಸೂ ರಿನ ಇಟ್ಟಿಗೆಗೂಡಿನ ಚಂದನಕುಮಾರ್ ನೀಲಕಂಠ ಅವರ ನೇತೃತ್ವದಲ್ಲಿ ಪ್ರಶಿಕ್ಷಣಾರ್ಥಿಗಳು ಪಥ ಸಂಚಲನ ನಡೆಸಿ ಗಣ್ಯರು, ಕುಟುಂಬದ ಸದಸ್ಯರು ಹಾಗೂ ಪ್ರೇಕ್ಷಕರ ಗಮನ ಸೆಳೆದರು.

ಪ್ರಕಾಶ ಪಣಜೀರ, ಪೃಥ್ವಿ ಎಂ.ಜಯರಾಂ, ವೆಂಕಟೇಶ್ ಹುಗಿಬಂಡಿ, ಡಾ.ಎ.ಆರ್.ಸುಮೀತ, ಮೋಹನಕುಮಾರ್, ಈರೇ ಗೌಡ, ಜಿ.ಅನುಷಾ ಹಾಗೂ ತಿಪ್ಪೇಸ್ವಾಮಿ ಮಹಂತಪ್ಪ ಅವರು ತಂಡಗಳ ಮುಖ್ಯಸ್ಥರಾಗಿ ಶಿಸ್ತುಬದ್ಧ ಪಥಸಂಚಲನ ನಡೆಸಿದರು.
ಉಪಮುಖ್ಯಮಂತ್ರಿಗಳಾದ ಗೃಹಸಚಿವ ಡಾ.ಜಿ.ಪರಮೇಶ್ವರ ಅವರ ಅನುಪಸ್ಥಿತಿಯಲ್ಲಿ ನಡೆದ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಡಿಜಿಪಿ ನೀಲಮಣಿ ಎನ್.ರಾಜು, ಡಿಜಿಪಿ (ತರಬೇತಿ) ಪದಮ್‍ಕುಮಾರ್ ಗರ್ಗ್ ಎಡಿಜಿಪಿ ಎನ್.ಎಸ್.ಮೇಘರಿಕ ಅವರು ಭಾಗವಹಿಸಿದ್ದರು.

ಬಹುಮಾನ ಪಡೆದ ಡಿವೈಎಸ್ಪಿಗಳು: ಒಂದು ವರ್ಷದ ಬುನಾದಿ ತರಬೇತಿ ವೇಳೆ ಕಾನೂನು, ತನಿಖೆ, ಹೊರಾಂಗಣ ಹಾಗೂ ಒಳಾಂಗಣ ವಿಭಾಗ ಸೇರಿದಂತೆ ಎಲ್ಲಾ ಹಂತ ಗಳಲ್ಲೂ ಸಾಧನೆ ಮೆರೆದ ಚಂದನಕುಮಾರ್ ನೀಲಕಂಠ ಅವರು ಸರ್ವೋತ್ತಮ ಪ್ರಶಸ್ತಿಗೆ ಭಾಜನರಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಸಿಎಂ ಟ್ರೋಫಿ, ಸಿಎಂ ಖಡ್ಗ, ಡಿಜಿಪಿ ಬ್ಯಾಟನ್ ಮತ್ತು ಗುರುಡಾಚಾರ್ ನಗದು ಬಹುಮಾನವನ್ನು ತನ್ನದಾಗಿಸಿಕೊಂಡರು.

ರಾಯಚೂರಿನ ವೆಂಕಟೇಶ ಹುಗಿಬಂಡಿ ಅವರಿಗೆ ಉತ್ತಮ ರೈಫಲ್ ಫೈರಿಂಗ್, ಮಂಗಳೂರಿನ ಡಾ.ಎ.ಆರ್.ಸುಮೀತ ಅವರಿಗೆ ಉತ್ತಮ ರಿವಾಲ್ವರ್ ಫೈರಿಂಗ್ ಚಂದನಕುಮಾರ್ ನೀಲಕಂಠಗೆ ಉತ್ತಮ ಒಳಾಂಗಣ, ಕೆ.ಆರ್.ನಗರ ತಾಲೂಕು, ಮಿರ್ಲೆಯ ಪೃಥ್ವಿ ಎಂ.ಜಯರಾಂಗೆ ಉತ್ತಮ ಮಹಿಳಾ ಹೊರಾಂಗಣ, ಚಿಕ್ಕ ಮಗಳೂರಿನ ಮನೋಜ್‍ಕುಮಾರ್ ಎಂ.ಈರೇಗೌಡ ಅವರಿಗೆ ಉತ್ತಮ ಹೊರಾಂಗಣ ಹಾಗೂ ಬೆಂಗಳೂರಿನ ಜಿ.ಅನುಷಾ ಅವರಿಗೆ ಉತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಬಹುಮಾನ ಪ್ರದಾನ ಮಾಡಲಾಯಿತು.

ಶಾಸಕ ತನ್ವೀರ್‍ಸೇಠ್, ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ, ಶ್ರೀಮತಿ ಲತಾ ಶರತ್‍ಚಂದ್ರ, ಶ್ರೀಮತಿ ಪ್ರಿಯಾಂಕ ವಿಫುಲ್‍ಕುಮಾರ್, ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರ ಹ್ಮಣ್ಯೇಶ್ವರರಾವ್, ಎಸ್ಪಿ ಅಮಿತ್‍ಸಿಂಗ್, ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಿಂದ ಧರಣಿ ದೇವಿ ಮಾಲಗತ್ತಿ, ಕೆಪಿಎ ಉಪನಿರ್ದೇಶಕ ವಂಶಿಕೃಷ್ಣ, ಡಿಸಿಪಿಗಳಾದ ವಿಕ್ರಂ ವಿ.ಅಮಟೆ, ಎನ್.ವಿಷ್ಣುವರ್ಧನ ಸೇರಿದಂತೆ ಹಲವು ಪೊಲೀಸ್ ಅಧಿಕಾರಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಶಿಕ್ಷಣಾರ್ಥಿಗಳು ನಡೆಸಿದ ಅತ್ಯಾಕರ್ಷಕ ನಿರ್ಗಮನ ಪಥ ಸಂಚಲನವನ್ನು ನೋಡಿ ಕಣ್ತುಂಬಿಕೊಂಡು ಆನಂದಿಸಿದ ಪೋಷಕರು, ಸಂಬಂಧಿ ಗಳು ಮೊಬೈಲ್‍ನಲ್ಲಿ ಆ ದೃಶ್ಯಗಳ ಪೋಟೋ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ಪ್ರಶಿಕ್ಷಣಾರ್ಥಿ ಗಳೊಂದಿಗೆ ಪೋಟೋ ಸೆಷನ್‍ನಲ್ಲಿ ಪಾಲ್ಗೊಂಡ ಮುಖ್ಯ ಮಂತ್ರಿಗಳು, ಕೆಪಿಎನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂ ದಿಗೆ ಉಪಾಹಾರ ಸವಿದು ಮಂಡ್ಯ ಜಿಲ್ಲೆಗೆ ತೆರಳಿದರು.

Translate »