ಮೈಸೂರಲ್ಲಿ ಜೈಲು ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ
ಮೈಸೂರು

ಮೈಸೂರಲ್ಲಿ ಜೈಲು ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

June 2, 2018

ಮೈಸೂರು: ಮೈಸೂ ರಿನ ಜೈಲು ಸಿಬ್ಬಂದಿ ತರಬೇತಿ ಸಂಸ್ಥೆಯಲ್ಲಿ 9 ತಿಂಗಳ ಬುನಾದಿ ತರಬೇತಿ ಪಡೆದ 45ನೇ ತಂಡದ 88 ಮಹಿಳಾ ಜೈಲು ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚ ಲನ ಇಂದು ಮೈಸೂರಲ್ಲಿ ನಡೆಯಿತು.

ಕಾರಾಗೃಹಗಳ ಮಹಾನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎನ್.ಎಸ್.ಮೇಘರಿಕ್ ಅವರು, ಮೈಸೂ ರಿನ ಕೇಂದ್ರ ಕಾರಾಗೃಹದ ಆವರಣದಲ್ಲಿ ನಡೆದ ನಿರ್ಗಮನ ಪಥ ಸಂಚಲನವನ್ನು ಪರಿವೀಕ್ಷಿಸಿ, ವಂದನೆ ಸ್ವೀಕರಿಸಿದರು.

ಪೊಲೀಸ್ ಉಪಮಹಾನಿರೀಕ್ಷಕ (ಕಾರಾಗೃಹ) ಹೆಚ್.ಎಸ್.ರೇವಣ್ಣ, ಹೆಚ್ಚು ವರಿ ಕಾರಾಗೃಹಗಳ ಮಹಾ ನಿರೀಕ್ಷಕ ಜಿ. ವೀರಭದ್ರಸ್ವಾಮಿ, ಕೆಪಿಎ ಪ್ರಭಾರ ನಿರ್ದೇ ಶಕ ವಂಶಿಕೃಷ್ಣ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ದಕ್ಷಿಣ ವಲಯ ಐಜಿಪಿ ಸೌಮೇಂದು ಮುಖರ್ಜಿ, ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಎಸ್ಪಿ ಅಮಿತ್ ಸಿಂಗ್, ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ವಿ. ಆನಂದರೆಡ್ಡಿ, ಜೈಲು ಸಿಬ್ಬಂದಿ ತರಬೇತಿ ಸಂಸ್ಥೆ ಪ್ರಾಚಾರ್ಯ ವಿ.ಶೇಷುಮೂರ್ತಿ ಅವರು ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. 2017ರ ಆಗಸ್ಟ್ 16 ರಿಂದ 9 ತಿಂಗಳ ಬುನಾದಿ ತರಬೇತಿ ಪಡೆದ 88 ಮಹಿಳಾ ಜೈಲು ವೀಕ್ಷಕಿಯರು ಈಗಾ ಗಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜೈಲು ಗಳಿಗೆ ನೇಮಕವಾಗಿದ್ದು, ನಾಳೆ (ಜೂ.2) ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವರು.

ಜೈಲು ವೀಕ್ಷಕಿಯರರಾಗಿ ಆಯ್ಕೆಯಾಗಿ ರುವವರ ಪೈಕಿ ಒಬ್ಬರು ಬಿಎ ಪದವೀ ಧರ, 4 ಬಿ.ಕಾಂ, 2 ಬಿ.ಕಾಂ ಡಿ.ಇಡಿ, 1 ಎಂ.ಕಾ, 22 ಬಿಎ, 19 ಬಿಎ ಡಿ.ಇಡಿ, 9 ಬಿಎ ಬಿ.ಇಡಿ, 2 ಎಂಎ, 3 ಎಂಎ ಡಿ.ಇಡಿ, 1 ಎಂಎ ಎಂ.ಇಡಿ, 1 ಬಿ.ಎಸ್ಸಿ, 2 ಬಿ.ಎಸ್ಸಿ ಬಿ.ಎಡಿ, 11 ಪಿಯುಸಿ, 4 ಪಿಯುಸಿ ಡಿ.ಇಡಿ ಹಾಗೂ ಮೂವರು ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಪಡೆದವರಾಗಿದ್ದಾರೆ.
ಪ್ರಶಸ್ತಿ ಗಳಿಸಿದವರು: ಬೆಳಗಾವಿ ಜೈಲಿಗೆ ನೇಮಕವಾಗಿರುವ ದೀಪಾ ಶಿಂಗಾಡೆಪ್ಪ ಇಡಗಲ್ಲ ಅವರು ಒಳಾಂಗಣ ವಿಭಾಗ, ಕಲ ಬುರ್ಗಿ ಜೈಲಿನ ಲಿಲೋಫರ ಗುತ್ತೇದಾರ ಹೊರಾಂಗಣ ವಿಭಾಗ, ಚಿಕ್ಕಬಳ್ಳಾಪುರ ಜೈಲಿನ ಭಾಗ್ಯಶ್ರೀಯಾಳಗಿ (ಪ್ರಥಮ ಬಹು ಮಾನ), ಬಿಂದು ಎಂ.ಆರ್. (ದ್ವಿತೀಯ), ಫೈರಿಂಗ್ ವಿಭಾಗದಲ್ಲಿ ಬೆಂಗಳೂರು ಜೈಲಿನ ಎಂ.ಎನ್.ಮಮತಾ ಅವರು ಉತ್ತಮ ನಡತೆಯಲ್ಲಿ, ಶಕೀನಾ ಬೇಗಂ ನದಾಫ್ ಅವರು ಎಡಿಜಿಪಿ ಮತ್ತು ಐಜಿಪಿ ಕಪ್ ಹಾಗೂ ಉಡುಪಿ ಜೈಲಿನ ರುದ್ರವ್ವ ಗೂಳಪ್ಪ ಕುರಬರ ಸರ್ವೋತ್ತಮ ಪ್ರಶಸ್ತಿ ಗಳಿಸಿದ್ದಾರೆ.

ಲಘು ಶಾಸನಗಳು, ಅಪರಾಧ ಶಾಸ್ತ್ರ, ಮನೋವಿಜ್ಞಾನ, ಸಮಾಜಶಾಸ್ತ್ರ, ಭಾರತದ ಸಂವಿಧಾನ, ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯೆ ಸಂಹಿತೆ, ಸೇವಾ ನಿಯ ಮಾವಳಿಗಳು, ಪ್ರಥಮ ಚಿಕಿತ್ಸೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ 9 ತಿಂಗಳ ಅವಧಿ ಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡ ಲಾಗಿದೆ. ಇಂದು ನಡೆದ ಆಕರ್ಷಕ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿ ಗಳ ಪೋಷಕರು ಹಾಗೂ ಸಂಬಂಧಿಕರೂ ಪಾಲ್ಗೊಂಡು ಕವಾಯತು ವೀಕ್ಷಿಸಿದರು.

Translate »