ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪಕ್ಕೆ ಖಂಡನೆ
ಮೈಸೂರು

ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪಕ್ಕೆ ಖಂಡನೆ

October 28, 2018

ಮೈಸೂರು: ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಘನತೆ, ಗೌರವ ಇದ್ದು, ಬಿ.ಸರೋಜಾದೇವಿ, ಭಾರತಿ, ಜಯಂತಿ ಮುಂತಾದ ಖ್ಯಾತ ಹಿರಿಯ ನಟಿಯರೇ ಯಾವುದೇ ಆರೋಪಗಳನ್ನು ಮಾಡದೇ ಗೌರವ ಯುತವಾಗಿದ್ದು, ಸರ್ಜಾರವರ ಬಗ್ಗೆ ತುಂಬಾ ಗೌರವದಿಂದ ಮಾತನಾಡುತ್ತಿರುವಾಗ ಕೇವಲ ದುರುದ್ದೇಶವನ್ನು ಇಟ್ಟುಕೊಂಡು ಅಗ್ಗದ ಪ್ರಚಾರ ಕ್ಕಾಗಿ ಇಂತಹ ಆರೋಪ ಮಾಡಿರುವುದು ಖಂಡ ನಾರ್ಹ ಎಂದು ಖಂಡಿಸಿರುವ ಅಖಿಲ ಭಾರತೀಯ ಗ್ರಾಮ ವಿಕಾಸ ಪರಿಷದ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಮಂಗಳಗೌರಿ ಅವರು, ಹೆಣ್ಣು ಮಕ್ಕಳ ಭಾವನೆ ಜೊತೆ ಚೆಲ್ಲಾಟವಾಡುತ್ತಾ ಕ್ಷುಲ್ಲಕ ಹೇಳಿಕೆ ನೀಡುತ್ತಿರುವ ಶೃತಿ ಹರಿಹರನ್ ಅಂತಹವರಿಗೆ ವಾಗ್ದಂಡನೆ ವಿಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಆಗ್ರಹಿಸಿದ್ದಾರೆ.

Translate »