7 ಹೊಸ ನಗರಗಳನ್ನು ಸಂಪರ್ಕಿಸಲಿದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮೈಸೂರು

7 ಹೊಸ ನಗರಗಳನ್ನು ಸಂಪರ್ಕಿಸಲಿದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

October 28, 2018

ಬೆಂಗಳೂರು: ಚಳಿಗಾಲದ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏಳು ಹೊಸ ನಿಲ್ದಾಣಗಳಿಗೆ ವಿಮಾನ ಹಾರಾಟ ಆರಂಭವಾಗಲಿದ್ದು, ಮತ್ತೆರಡು ಹೊಸ ವಿಮಾನಗಳು ಹಾರಾಟ ನಾಳೆ ಆರಂಭಿಸಲಿವೆ.

ಈ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳು ಈಗಿರುವ 691ರಿಂದ 766ಕ್ಕೆ ಏರಿಕೆಯಾಗಲಿದೆ. ವಾಯು ದಟ್ಟಣೆ ಸಂಚಾರದ ಗುರಿಯನ್ನು ತಲುಪಲು ಈ ವರ್ಷದ ಚಳಿಗಾಲದಲ್ಲಿ ಪ್ರತಿದಿನ 744 ವಿಮಾನ ಸಂಚಾರ ನಡೆಸಲಿದೆ. ಅವುಗಳಲ್ಲಿ 659 ಸ್ಥಳೀಯ ಮತ್ತು 85 ಅಂತಾರಾಷ್ಟ್ರೀಯ ವಿಮಾನಗಳು ಸೇರಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಅದಿನ್ನು ಪ್ರತಿದಿನ 766ನ್ನು ತಲುಪಲಿದೆ. ಇತ್ತೀಚೆಗೆ ಬೇಸಿಗೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ(ಬಿಎಲ್‍ಆರ್) ಸರಾಸರಿ 691 ವಿಮಾನಗಳು ಹಾರಾಟ ನಡೆಸಿವೆ.

ಮುಂದಿನ ವರ್ಷ ಮಾರ್ಚ್‍ವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸರಾಸರಿ ಪ್ರತಿ ಗಂಟೆಗೆ 40 ವಿಮಾನಗಳು ಸಂಚರಿಸಲಿವೆ. ಕಳೆದ ಬೇಸಿಗೆಯಿಂದ ಈ ಚಳಿಗಾಲದಲ್ಲಿ ಶೇಕಡಾ 17ರಷ್ಟು ಸ್ಥಳೀಯ ವಿಮಾನಗಳ ಹಾರಾಟ ಹೆಚ್ಚಾಗಲಿದೆ. ಒಟ್ಟಾರೆ ಶೇಕಡಾ 11ರಷ್ಟು ಹೆಚ್ಚಾಗಲಿದೆ. ಈ ಬಾರಿ ಚಳಿಗಾಲದಲ್ಲಿ ಟರ್ಕಿಶ್ ಕಾರ್ಗೊ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾರಾಟ ಆರಂಭಿಸಲಿದೆ. ನಾಡಿದ್ದು ಸೋಮವಾರದಿಂದ ಸಿಂಗಾಪುರಕ್ಕೆ ವಾರದಲ್ಲಿ ನಾಲ್ಕು ಬಾರಿ ಹಾರಾಟ ನಡೆಸಿದರೆ ಟರ್ಕಿಶ್ ಕಾರ್ಗೊ ವಾರದಲ್ಲಿ ಎರಡು ವಿಮಾನ ಅಕ್ಟೋಬರ್ 31ರಿಂದ ಇಸ್ತಾನ್ ಬುಲ್ ಮತ್ತು ಬೆಂಗಳೂರು ಮಧ್ಯೆ ಕಾರ್ಯಾರಂಭ ಮಾಡಲಿದೆ. ಮತ್ತೊಂದು ಕೊಲಂಬೊ ಮತ್ತು ದಮನ್‍ಗೆ ಹಾರಾಟ ನಡೆಸಲಿದೆ.

ಕೆಂಪೇಗೌಡ ನಿಲ್ದಾಣದಿಂದ ಕಾನ್ಪುರ, ಗೋರಖ್ ಪುರ, ಉದೈಪುರ್ (ಸ್ಪೈಸ್ ಜೆಟ್), ಉದೈಪುರ್ ಮತ್ತು ಪ್ರಯಾಗ್ ರಾಜ್ (ಇಂಡಿಗೊ), ಐಜ್ವ್ ವಯಾ ಗುವಾ ಹಟಿ(ಜೆಟ್ ಏರ್ ವೇಸ್) ಮತ್ತು ಕೊಲ್ಹಾಪುರ್ (ಅಲೈಯನ್ಸ್ ಏರ್). ಹೊಸ ಅಂತಾರಾಷ್ಟ್ರೀಯ ನಿಲ್ದಾಣಗಳು ಥೈಲ್ಯಾಂಡ್‍ನ ಫುಕೆಟ್ ಒಳಗೊಂಡಿದೆ. ಈ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 82 ನಿಲ್ದಾಣಗಳನ್ನು ಸಂಪರ್ಕಿಸಲಿದೆ. ಅವುಗಳಲ್ಲಿ 53 ಸ್ಥಳೀಯ ಮತ್ತು 29 ಅಂತಾರಾಷ್ಟ್ರೀಯ ನಿಲ್ದಾಣಗಳು ಸೇರಿವೆ.

Translate »