ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ಕಳ್ಳ ಹಾದಿಯಲ್ಲಿ ಬರುತ್ತಿದ್ದ ರೂ.3.40 ಕೋಟಿ ಮೌಲ್ಯದ 10.36 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಂಗಾಪುರ ಮೂಲದ ನೂರಲೇನ್ ಎಂಬಾಕೆಯಿಂದ ರೂ.3.02 ಕೋಟಿ ಮೌಲ್ಯದ 9.2 ಕೆಜಿ ಚಿನ್ನದ ಬಿಸ್ಕೆಟ್ ವಶಪಡಿಸಿಕೊಳ್ಳಲಾಗಿದ್ದು, ಆಕೆ ನಾಪತ್ತೆಯಾಗಿದ್ದಾಳೆ ಅ.28ರ ರಾತ್ರಿ 9.30ರಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ವಸ್ತುಗಳನ್ನು ಪರಿಶೀಲಿ ಸುವಾಗ ಸೂಟ್‍ಕೇಸ್‍ವೊಂದರ ಮೇಲೆ ಅನುಮಾನ ಬಂದಿತ್ತು. ಕೂಡಲೇ ಅದನ್ನು 2 ಬಾರಿ ಲೋಹ ಪರಿಶೋಧಕದಲ್ಲಿ ತಪಾ ಸಣೆ ನಡೆಸಲಾಯಿತು. ಈ ವೇಳೆ ಅದರಲ್ಲಿ ಅಡಗಿಸಿಟ್ಟಿದ್ದ ಸ್ಪೀಕರ್ ಬಾಕ್ಸ್ ಅನ್ನು ತೆರೆದು ನೋಡಿದಾಗ ಚಿನ್ನದ ಬಿಸ್ಕೆಟ್‍ಗಳು ಪತ್ತೆಯಾದವು ಎಂದು ಅಧಿಕಾರಿಗಳು ಹೇಳಿ ದ್ದಾರೆ. ಇತ್ತ ಸೂಟ್ ಕೇಸ್ ಕಸ್ಟಮ್ಸ್ ಅಧಿಕಾರಿ ಗಳ ಸುಪರ್ದಿಗೆ ಸೇರಿದ ಕೂಡಲೇ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ.