ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್‍ನಿಂದ ನವದೆಹಲಿ ಚಲೋ
ಮೈಸೂರು

ಸ್ವಾಯತ್ತತೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್‍ನಿಂದ ನವದೆಹಲಿ ಚಲೋ

October 31, 2018

ಮೈಸೂರು: ಕಳೆದ ಮೂರು ಶತಮಾನಗಳಿಂದಲೂ ಒಂದಲ್ಲ ಒಂದು ದುಃಖ-ದುಮ್ಮಾನ ಕಾಣುತ್ತಲೇ ಬಂದಿರುವ ಕೊಡವರು, ಸ್ವಾಯತ್ತತೆಗೆ ಆಗ್ರಹಿಸಿ ನ.1 ಮತ್ತು 2ರಂದು `ನವ ದೆಹಲಿ ಚಲೋ’ ಶಾಂತಿಯುತ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.1ರಂದು ಕರ್ನಾಟಕ ರಾಜ್ಯೋತ್ಸವ ದಿನವನ್ನು ಕರಾಳ ದಿನವೆಂದು ಪರಿಗಣಿಸಿ, ಅಂದು ನವದೆಹಲಿಯ ಸಂಸತ್ ಭವನದ ಎದುರಿನ ಜಂತರ್ ಮಂತರ್ ಹಾಗೂ ಟಿಪ್ಪು ಓಲೈಸಿದ್ದ ಫ್ರೆಂಚ್ ಸರ್ಕಾರ ಬಹಿರಂಗ ಕ್ಷಮೆಯಾಚನೆಗೆ ಆಗ್ರಹಿಸಿ ನ.2 ರಂದು ನವದೆಹಲಿಯ ಫ್ರೆಂಚ್ ರಾಯ ಭಾರ ಕಚೇರಿ ಮುಂದೆ ಶಾಂತಿಯುತ ಸತ್ಯಾಗ್ರಹ ನಡೆಸಲಿರುವುದಾಗಿ ತಿಳಿಸಿದರು.

ನ.1ರಂದು ಕೊಡಗಿನ ವಿವಿಧೆಡೆಯಿಂದ ಬರುವ ಸುಮಾರು 50 ಕೊಡವ, ಕೊಡತಿಯರು, ಸ್ವಯಂ ಸೇವಕರು ಸಾಂಪ್ರದಾಯಿಕ ಉಡುಗೆ ತೊಟ್ಟು ದೆಹಲಿ ಚಲೋ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಫ್ರೆಂಚ್ ಸರ್ಕಾರದ ಪೂರ್ವಾಧಿಕಾರಿ ಗಳಾದ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸೈನಿಕರು ಆಕ್ರಮಣಕಾರ ಟಿಪ್ಪುವಿನ ಜೊತೆ ಸೇರಿ ಶಾಂತಿ ಸಂಧಾನ ಸಭೆಯ ಔತಣ ಕೂಟಕ್ಕೆ ಆಹ್ವಾನಿಸಿ, ನಿರಾಯುಧ, ಅಮಾಯಕ ಕೊಡವ ಬುಡಕಟ್ಟು ಯೋಧರು ಮತ್ತವರ ಹೆಂಗಸರು, ಮಕ್ಕಳನ್ನು ದಾರುಣವಾಗಿ ನರಮೇಧ ಮಾಡಿದ್ದಕ್ಕೆ ಸಂಬಂಧಿಸಿ ದಂತೆ ಈಗಿನ ಫ್ರೆಂಚ್ ಸರ್ಕಾರ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ನ.2ರಂದು ದೆಹಲಿಯ ಫ್ರೆಂಚ್ ಸರ್ಕಾ ರದ ರಾಯಭಾರಿ ಕಚೇರಿ ಎದುರು ಪ್ರತಿ ಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಕಳೆದ ಆಗಸ್ಟ್‍ನಲ್ಲಿ ಕೊಡಗಿನಲ್ಲಿ ನಡೆದ ದುರಂತವನ್ನು ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ವಿಪತ್ತು ಪೀಡಿತ ಪ್ರದೇಶವೆಂದು ಘೋಷಿಸಬೇಕು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಕೈಜೋಡಿಸಿ ವಿಪತ್ತು ನಿರ್ವಹಣಾ ಸಚಿವಾಲಯ ಸ್ಥಾಪಿಸ ಬೇಕು. ಶಾಶ್ವತ ಪುನರ್ವಸತಿ ಕಾರ್ಯದ ನೀಲನಕ್ಷೆ ಬಿಡುಗಡೆ ಮಾಡಬೇಕು. ಜಗತ್ತಿನಾದ್ಯಂತ ದಾನಿಗಳಿಂದ ಹರಿದು ಬಂದ ದೇಣಿಗೆ ಹಣ, ಪರಿಹಾರ ನಿಧಿ, ಒಟ್ಟು ವೆಚ್ಚ ಕುರಿತ ಶ್ವೇತಪತ್ರ ಪ್ರಕಟಿಸಬೇಕು. ಭೂಸ್ಫೋಟ, ಜಲಸ್ಫೋಟ ವಿಪತ್ತಿಗೆ ಮೂಲ ಕಾರಣ ವಾದ ಕೊಡಗಿನ ಹೃದಯದ ಮೇಲೆ ಕುಳಿ ತಿರುವ ಜೀವಂತ ಅಣುಬಾಂಬ್ ಹಾರಂಗಿ ಜಲಾಶಯವನ್ನು ತೆರವುಗೊಳಿಸಬೇಕು ಎಂಬ ಇನ್ನಿತರ ಬೇಡಿಕೆಗಳಿಗೆ ಆಗ್ರಹಿಸ ಲಾಗುವುದು ಎಂದರು.

ಹೈದರಾಲಿ ಮತ್ತು ಟಿಪ್ಪು ಸತತವಾಗಿ 32 ಬಾರಿ ಕೊಡವರ ಮೇಲೆ ದಾಳಿ ಮಾಡಿದ್ದಾರೆ. ಕೊಡವರಿಗೆ ಸಾಂತ್ವನ ಹೇಳಬೇಕಾದು ದನ್ನು ಬಿಟ್ಟು, ಗಾಯದ ಮೇಲೆ ಬರೆ ಎಳೆ ದಂತೆ ಟಿಪ್ಪು ಜಯಂತಿ ಆಚರಿಸಲಾಗು ತ್ತಿದೆ. ನಮ್ಮ ಎಲ್ಲಾ ಹೋರಾಟವನ್ನು ದಮನ ಮಾಡುತ್ತಾ ಬಂದಿರುವ ರಾಜಕೀಯ ಶಕ್ತಿ ಗಳು, ಬುದ್ಧಿಜೀವಿಗಳು ನಮ್ಮ ಭೂಮಿ, ಸಂಸ್ಕೃತಿ, ಸಂಪ್ರದಾಯಗಳ ಹಕ್ಕನ್ನು ಕಿತ್ತು ಕೊಂಡಿದ್ದಾರೆ. ಕೊಡವರು ಯಾವುದೇ ದನಿ ಎತ್ತದಂತೆ ಹುನ್ನಾರ ನಡೆಸಲಾಗು ತ್ತಿದೆ. ಕೊಡವರ ಚಾರಿತ್ರ್ಯ, ಭೂಮಿ, ಔದ್ಯೋ ಗಿಕ ಹಕ್ಕುಗಳೆಲ್ಲವನ್ನೂ ಕಿತ್ತುಕೊಳ್ಳಲಾಗು ತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಪದಾಧಿಕಾರಿ ಗಳಾದ ಕಲಿಯಂಡ ಪ್ರಕಾಶ್, ಕಾಟಮಣಿ ಯಂಡ ಉಮೇಶ್, ಅರೆಯಂಡ ಗಿರೀಶ್, ಅಪ್ಪಾರಂಡ ಪೂವಣ್ಣ ಉಪಸ್ಥಿತರಿದ್ದರು.

Translate »