ಶಾಲಾ ಮಕ್ಕಳ ಪಠ್ಯದ ಹೊರೆ ಶೇ.50ರಷ್ಟು ಇಳಿಸಿ
ಮೈಸೂರು

ಶಾಲಾ ಮಕ್ಕಳ ಪಠ್ಯದ ಹೊರೆ ಶೇ.50ರಷ್ಟು ಇಳಿಸಿ

October 31, 2018

ಬೆಂಗಳೂರು: ಮುಂಬ ರುವ ಶೈಕ್ಷಣಿಕ ವರ್ಷದಿಂದಲೇ ಶಾಲಾ ಮಕ್ಕಳ ಪಠ್ಯದ ಹೊರೆಯನ್ನು ಶೇ.50ರಷ್ಟು ಇಳಿಸಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಗಳ ಮುಖ್ಯ ಕಾರ್ಯದರ್ಶಿಗಳಿಗೆ ಎನ್‍ಸಿಇ ಆರ್‍ಟಿ ಪತ್ರ ಬರೆದಿದ್ದು, ಹಾಲಿ ಶಿಕ್ಷಣ ನೀತಿ ಮತ್ತು ಪಠ್ಯಕ್ರಮಗಳು ಮಕ್ಕಳಿಗೆ ತುಂಬಾ ಹೊರೆಯಾಗಿವೆ ಎಂದಿದೆ. ಕನಿಷ್ಠ ಶೇ.50ರಷ್ಟು ಪಠ್ಯದ ಹೊರೆ ತಗ್ಗಿಸಿ. ಉಳಿದ ಸಮಯವನ್ನು ಮಕ್ಕಳ ಬೌದ್ಧಿಕ ಬೆಳವಣಿ ಗೆಗೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದೆ. ಎನ್‍ಸಿಇಆರ್‍ಟಿ ಪತ್ರ ಬರೆದ ಕೂಡಲೇ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, ಬೆಂಬಲ ವ್ಯಕ್ತಪಡಿಸಿರುವುದಲ್ಲದೆ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಕ್ರಮ ಕೈಗೊಳ್ಳಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಕೇಂದ್ರದ ಈ ಸೂಚನೆ ರಾಜ್ಯ ಸರ್ಕಾರಕ್ಕೆ ಭಾರೀ ಸಮಸ್ಯೆಯಾಗಿ ಪರಿಣಮಿಸಿದ್ದು, ಕರ್ನಾಟಕ ಪಠ್ಯ ಪುಸ್ತಕ ಸಂಘ, ಈಗಿನ ಸಂದರ್ಭದಲ್ಲಿ ಶೇ.50ರಷ್ಟು ಪಠ್ಯ ತಗ್ಗಿಸಿ, ಮುಂದಿನ ಶೈಕ್ಷಣಿಕ ವರ್ಷಕ್ಕೆ ಬದಲಿ ಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದೆ.

Translate »