ಮೈಸೂರು: ಮೈಸೂ ರಿನ ರಂಗವಲ್ಲಿ ತಂಡದಿಂದ ನ.2ರಿಂದ ಮೂರು ದಿನಗಳ `ರಂಗವಲ್ಲಿ ರಂಗ ಸಂಭ್ರಮ’ ರಾಜ್ಯಮಟ್ಟದ ನಾಟಕೋತ್ಸವ ನಡೆಯಲಿದೆ. ರಂಗವಲ್ಲಿ ತಂಡದ ಪದಾಧಿ ಕಾರಿ ಮಂಜುನಾಥ ಶಾಸ್ತ್ರಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದರು.
ಮೈಸೂರು ರಂಗಭೂಮಿಯಲ್ಲಿ ನಿರಂ ತರ ಚಟುವಟಿಕೆಯಿಂದ ರಂಗಾಸಕ್ತರ ಗಮನ ಸೆಳೆದಿರುವ ರಂಗವಲ್ಲಿ ತಂಡ ಮೈಸೂರಿನ ಕಲಾಮಂದಿರದಲ್ಲಿ ನ.2ರಿಂದ 4ರವರೆಗೆ ರಾಜ್ಯಮಟ್ಟದ ನಾಟಕೋತ್ಸವದಲ್ಲಿ ಉತೃಷ್ಟ ದರ್ಜೆಯ ನಾಟಕಗಳ ಜೊತೆಗೆ ವಿವಿಧ ಸಂಗೀತ ಕಾರ್ಯಕ್ರಮಗಳನ್ನು ನೀಡಲಿದೆ ಎಂದು ತಿಳಿಸಿದರು. ನ.2ರಂದು ಸಂಜೆ 4 ಗಂಟೆಗೆ ಕಲಾಮಂದಿರ ಮನೆಯಂಗಳ ದಲ್ಲಿ ಚಲನಚಿತ್ರ ನಿರ್ದೇಶಕ ಬಿ.ಸುರೇಶ್ ರಂಗವಲ್ಲಿ ರಂಗಸಂಭ್ರಮಕ್ಕೆ ಚಾಲನೆ ನೀಡ ಲಿದ್ದಾರೆ. ರಂಗಾಯಣ ನಿರ್ದೇಶಕಿ ಭಾಗೀ ರಥಿಬಾಯಿ ಕದಂ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಸಂಸ್ಥೆಯ ಸಂಸ್ಥಾಪಕ ಸದಸ್ಯ ಎಚ್.ಆರ್. ರವಿಪ್ರಸಾದ್ ಇನ್ನಿತರರು ಭಾಗವ ಹಿಸಲಿದ್ದಾರೆ ಎಂದರು.
ಕಲಾಮಂದಿರದ ಕಿಂದರಿಜೋಗಿ ಆವ ರಣದಲ್ಲಿ ನ.2ರಂದು ಸಂಜೆ 4.30 ಗಂಟೆಗೆ ವಿದ್ವಾನ್ ಎ.ಪಿ.ಕೃಷ್ಣಪ್ರಸಾದ್ ಮತ್ತು ಸಂಗಡಿ ಗರಿಂದ ಕರ್ನಾಟಕ ಶಾಸ್ತ್ರೀಯ ವೇಣು ವಾದನ, 3ರಂದು ಸಂಜೆ 4ಕ್ಕೆ ಟ್ರೂಪ್ ಆಫ್ ಮೈಸೂರು ವತಿಯಿಂದ ಸುಗಮ ಸಂಗೀತ, 4ರಂದು ಸಂಜೆ 4ಕ್ಕೆ ಗಾಂಧಿನಗರದ ಭಾರತ್ ಬ್ರಾಸ್ ಬ್ಯಾಂಡ್ ಕಾರ್ಯಕ್ರಮವಿದೆ.
ಇದಕ್ಕೆ ಪ್ರವೇಶ ಉಚಿತ. ಕಲಾಮಂದಿರ ದಲ್ಲಿ ನಡೆಯುವ ನಾಟಕಗಳ ವಿವರ ಇಂತಿದೆ. ನ.2ರಂದು ಸಂಜೆ 7ಕ್ಕೆ ಮಣಿ ಪಾಲ ಸಂಗಮ ಕಲಾವಿದರಿಂದ ಪ್ರಶಾಂತ್ ಉದ್ಯಾವರ ನಿರ್ದೇಶನದ `ವೀ ಟೀಚ್ ಲೈಫ್ ಸರ್’, 3ರಂದು ಸಂಜೆ 7ಕ್ಕೆ ಹೆಗ್ಗೋಡು ನೀನಾಸಂ ತಿರುಗಾಟ ತಂಡದಿಂದ ಕೆ.ವಿ. ಅಕ್ಷರ ರಚನೆ ಮತ್ತು ನಿರ್ದೇಶನದ `ಸೇತುಬಂಧನ’ ಮತ್ತು ನ.4ರಂದು ಸಂಜೆ 7ಕ್ಕೆ ಹೆಗ್ಗೋಡು ನೀನಾಸಂ ತಿರುಗಾಟ ತಂಡದಿಂದ ಜೋಸೆಫ್ ಜಾನ್ ನಿರ್ದೇ ಶನದ `ಆಶ್ಚರ್ಯ ಚೂಡಾಮಣಿ’ ನಾಟಕ ಗಳು ಪ್ರದರ್ಶನಗೊಳ್ಳಲಿವೆ. ಟಿಕೆಟ್ ದರ ರೂ. 50 ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗೆ ಮೊಬೈಲ್- 9964656482, 9448871815 ಸಂಪ ರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ನಾಟ ಕೋತ್ಸವದ ಸಂಚಾಲಕ ರವಿ ಪ್ರಸಾದ್, ತಂಡದ ರಮ್ಯ, ಮುರಳಿ ಗುಂಡಣ್ಣ, ಚೈತ್ರಾ ಉಪಸ್ಥಿತರಿದ್ದರು.