ಬೆಂಗಳೂರು: ಕನ್ನಡ ಚಿತ್ರರಂಗ ದಲ್ಲಿ #ಒe ಖಿoo ಅಭಿಯಾನ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಅವರು ಇಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. `ವಿಸ್ಮಯ’ ಚಿತ್ರದ ಚಿತ್ರೀಕರಣದ ವೇಳೆ ತಮಗೆ ಅರ್ಜುನ್ ಸರ್ಜಾ ಲೈಂಗಿಕ ಕಿರು ಕುಳ ನೀಡಿದ್ದರು ಎಂದು ತಮ್ಮ ದೂರಿ ನಲ್ಲಿ ಆರೋಪಿಸಿ ರುವ ಶ್ರುತಿ ಹರಿಹರನ್ ಸಾಕ್ಷೀದಾರರಾಗಿ ಚಿತ್ರದ ನಿರ್ದೇಶಕ ಸೇರಿದಂತೆ 6 ಮಂದಿಯನ್ನು ಉಲ್ಲೇಖಿಸಿ ದ್ದಾರೆ….
ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪಕ್ಕೆ ಖಂಡನೆ
October 28, 2018ಮೈಸೂರು: ಕನ್ನಡ ಚಿತ್ರರಂಗಕ್ಕೆ ತನ್ನದೇ ಆದ ಘನತೆ, ಗೌರವ ಇದ್ದು, ಬಿ.ಸರೋಜಾದೇವಿ, ಭಾರತಿ, ಜಯಂತಿ ಮುಂತಾದ ಖ್ಯಾತ ಹಿರಿಯ ನಟಿಯರೇ ಯಾವುದೇ ಆರೋಪಗಳನ್ನು ಮಾಡದೇ ಗೌರವ ಯುತವಾಗಿದ್ದು, ಸರ್ಜಾರವರ ಬಗ್ಗೆ ತುಂಬಾ ಗೌರವದಿಂದ ಮಾತನಾಡುತ್ತಿರುವಾಗ ಕೇವಲ ದುರುದ್ದೇಶವನ್ನು ಇಟ್ಟುಕೊಂಡು ಅಗ್ಗದ ಪ್ರಚಾರ ಕ್ಕಾಗಿ ಇಂತಹ ಆರೋಪ ಮಾಡಿರುವುದು ಖಂಡ ನಾರ್ಹ ಎಂದು ಖಂಡಿಸಿರುವ ಅಖಿಲ ಭಾರತೀಯ ಗ್ರಾಮ ವಿಕಾಸ ಪರಿಷದ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಮಂಗಳಗೌರಿ ಅವರು, ಹೆಣ್ಣು ಮಕ್ಕಳ ಭಾವನೆ ಜೊತೆ ಚೆಲ್ಲಾಟವಾಡುತ್ತಾ ಕ್ಷುಲ್ಲಕ ಹೇಳಿಕೆ ನೀಡುತ್ತಿರುವ…
ವಾಣಿಜ್ಯ ಮಂಡಳಿ ಸಂಧಾನ ವಿಫಲ
October 26, 2018ಬೆಂಗಳೂರು: ಚಿತ್ರರಂಗದ ಯಾವುದೇ ಸಮಸ್ಯೆಯಾದರೂ ಇತ್ಯರ್ಥಪಡಿಸುತ್ತಿದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶ್ರುತಿ ಹರಿಹರನ್ ಅವರ `ಮೀ ಟೂ’ ಅಭಿಯಾನ ಕಗ್ಗಂಟಾಗಿ ಪರಿಣಮಿಸಿದ್ದು, ವಾಣಿಜ್ಯ ಮಂಡಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಧಾನ ವಿಫಲವಾಗಿ, ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದೆ. ಶ್ರುತಿ ಹರಿಹರನ್ ಅವರು ನಾಯಕ ನಟ ಅರ್ಜುನ್ ಸರ್ಜಾ ವಿರುದ್ಧ ‘ಮೀ ಟೂ’ ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಇಂದು ಸಂಜೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನ…
ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ
October 26, 2018ಬೆಂಗಳೂರು: ತಮ್ಮ ವಿರುದ್ಧ `ಮೀ ಟೂ’ ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ವಿರುದ್ಧ ಬಹು ಭಾಷಾ ನಟ, ಕನ್ನಡಿಗ ಅರ್ಜುನ್ ಸರ್ಜಾ ಅವರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಶ್ರುತಿ ಹರಿಹರನ್ ಮಾಡಿರುವ ಆರೋಪದಿಂದ ತನಗೆ ಹಾಗೂ ತನ್ನ ಕುಟುಂಬದವರಿಗೆ ನೋವುಂಟಾಗಿದೆ ಎಂಬ ಕಾರಣಕ್ಕಾಗಿ 5 ಕೋಟಿ ರೂ.ಗಳ ಮಾನ ನಷ್ಟ ಮೊಕದ್ದಮೆಯನ್ನು ಅರ್ಜುನ್ ಸರ್ಜಾ ಹೂಡಿದ್ದಾರೆ. ಅಲ್ಲದೇ ಶ್ರುತಿ ಹರಿಹರನ್ ವಿರುದ್ಧ ಅವರು ಕ್ರಿಮಿನಲ್ ಪ್ರಕರಣವನ್ನೂ ಕೂಡ ದಾಖಲಿಸಿದ್ದು, ಅದು ಸೈಬರ್…
‘ದ ಜ್ಯುವೆಲರಿ ಷೋ’ ಕಣ್ಣು ಕೋರೈಸುವ ವಿನೂತನ ವಿನ್ಯಾಸದ ಚಿನ್ನಾಭರಣ ಪ್ರದರ್ಶನ, ಮಾರಾಟ ಮೇಳ ಆರಂಭ ನಟಿ ಶೃತಿ ಹರಿಹರನ್ ಚಾಲನೆ
June 23, 2018ಮೈಸೂರು: ಮೈಸೂರಿನ ರ‍್ಯಾಡಿಸನ್ ಬ್ಲ್ಯೂ ಹೋಟೆಲ್‍ನಲ್ಲಿ ಇಂದಿನಿಂದ ಆರಂಭವಾಗಿರುವ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಟಿ ಶೃತಿ ಹರಿಹರನ್ ಉದ್ಘಾಟಿಸಿದರು. ಇಂದಿನಿಂದ ಜೂ.24ರವರೆಗೆ ಆಯೋಜಿಸಿರುವ ಮೇಳದಲ್ಲಿ ದೇಶಾದ್ಯಂತ 25ಕ್ಕೂ ಹೆಚ್ಚು ಆಭರಣ ಮಳಿಗೆಗಳ ತೆರೆಯಲಾಗಿದ್ದು, ಮೈಸೂರು ಜನರ ಅಭಿರುಚಿಗೆ ತಕ್ಕಂತೆ ವಿವಿಧ ಶೈಲಿಯ ಆಭರಣಗಳನ್ನು ವಿನ್ಯಾಸಗೊಳಿಸಿದ್ದು, ಒಂದೇ ಸೂರಿನಡಿ ವಿವಿಧ ವಿನ್ಯಾಸದ ಚಿನ್ನಾಭರಣಗಳು ಲಭ್ಯವಿವೆ. ಆಬುಷಣ್, ಅಮರಪಾಲಿ, ಧವನಮ್, ಎಂಪಿಎಸ್, ನೀಲಕಂಠ್, ನಿಖಾರ್, ಪಂಚಕೇಸರಿ ಬಂಡೇರಾ, ಪಿಎಂಜೆ, ಶ್ರೀವಾರಿ, ಶ್ರೀ ಗಣೇಶ್,…
ನಾಳೆಯಿಂದ ಮೈಸೂರಲ್ಲಿ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ, ಮಾರಾಟ
June 21, 2018ಮೈಸೂರು: ಮೈಸೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಜೂ.22ರಿಂದ 24ರವರೆಗೆ `ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಗೋಲ್ಡನ್ ಕ್ರೀಪರ್ ಎಂಟರ್‍ಪ್ರೈಸಸ್‍ನ ಜಗದೀಶ್ ತಿಳಿಸಿದರು. ಹೋಟೆಲ್‍ನಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜೂ.22ರಂದು ಮಧ್ಯಾಹ್ನ 12.15ಕ್ಕೆ ನಟಿ ಶೃತಿ ಹರಿಹರನ್ ಉದ್ಘಾಟಿಸಲಿದ್ದಾರೆ ಎಂದರು. ಮದುವೆ ಹಾಗೂ ಹಬ್ಬದ ಸಮಾರಂಭಗಳನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ 25ಕ್ಕೂ ಹೆಚ್ಚು ಆಭರಣ ಮಳಿಗೆಗಳ ತೆರೆಯಲಾಗುತ್ತಿದೆ. ಮೈಸೂರು ಜನರ ಅಭಿರುಚಿಗೆ ತಕ್ಕಂತೆ…
ರೂಪದರ್ಶಿಯರ ಆಕರ್ಷಕ ನಡಿಗೆ
June 21, 2018ಮೈಸೂರು: ಬಣ್ಣದ ಉಡುಗೆ ತೊಟ್ಟ ರೂಪದರ್ಶಿಯರು ವಿವಿಧ ಬಗೆಯ ಆಭರಣಗಳನ್ನು ತೊಟ್ಟು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ವಿವಿಧ ವಿನ್ಯಾಸದ ಆಭರಣಗಳನ್ನು ತೊಟ್ಟ ನಟಿ ಶೃತಿ ಹರಿಹರನ್, ರೂಪದರ್ಶಿಯರೊಂದಿಗೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಆ ಮೂಲಕ ಫ್ಯಾಷನ್ ಷೋಗೆ ಮೆರಗು ತಂದುಕೊಟ್ಟರು. ನಂತರ ಉದ್ಯಮಿಗಳಾದ ಚೈತ್ರಾ ರಂಗಸ್ವಾಮಿ, ಕೀರ್ತನಾ ಗೋಪಾಲ್, ರೋಷಿಣ ಪ್ರಕಾಶ್, ಸುದೀಕ್ಷಾ ಅವರು ಚಿನ್ನಾಭರಣಗಳನ್ನು ತೊಟ್ಟು ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವ ಮೂಲಕ ನವನವೀನ ಹಾಗೂ…