ನಾಳೆಯಿಂದ ಮೈಸೂರಲ್ಲಿ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ, ಮಾರಾಟ
ಮೈಸೂರು

ನಾಳೆಯಿಂದ ಮೈಸೂರಲ್ಲಿ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ, ಮಾರಾಟ

June 21, 2018

ಮೈಸೂರು:  ಮೈಸೂರಿನ ರ‍್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಜೂ.22ರಿಂದ 24ರವರೆಗೆ `ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಗೋಲ್ಡನ್ ಕ್ರೀಪರ್ ಎಂಟರ್‍ಪ್ರೈಸಸ್‍ನ ಜಗದೀಶ್ ತಿಳಿಸಿದರು.
ಹೋಟೆಲ್‍ನಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಜೂ.22ರಂದು ಮಧ್ಯಾಹ್ನ 12.15ಕ್ಕೆ ನಟಿ ಶೃತಿ ಹರಿಹರನ್ ಉದ್ಘಾಟಿಸಲಿದ್ದಾರೆ ಎಂದರು.

ಮದುವೆ ಹಾಗೂ ಹಬ್ಬದ ಸಮಾರಂಭಗಳನ್ನು ಗಮನದಲ್ಲಿಟ್ಟುಕೊಂಡು ದೇಶಾದ್ಯಂತ 25ಕ್ಕೂ ಹೆಚ್ಚು ಆಭರಣ ಮಳಿಗೆಗಳ ತೆರೆಯಲಾಗುತ್ತಿದೆ. ಮೈಸೂರು ಜನರ ಅಭಿರುಚಿಗೆ ತಕ್ಕಂತೆ ವಿವಿಧ ಶೈಲಿಯ ಆಭರಣಗಳನ್ನು ವಿನ್ಯಾಸಗೊಳಿಸಿದ್ದು, ಒಂದೇ ಸೂರಿನಡಿ ವಿವಿಧ ವಿನ್ಯಾಸದ ಚಿನ್ನಾಭರಣಗಳು ದೊರೆಯಲಿವೆ ಎಂದು ಹೇಳಿದರು.

ದಕ್ಷಿಣ ಭಾರತ ಚಿತ್ರರಂಗದ 65ನೇ ಸಾಲಿನ ಸೌತ್ ಫಿಲಂ ಫೇರ್ ಪ್ರಶಸ್ತಿ ಪ್ರಕಟಣೆಯಲ್ಲಿ `ಬ್ಯೂಟಿಫುಲ್ ಮನಸುಗಳು’ ಚಿತ್ರದ ಅಭಿನಯಕ್ಕೆ ನನಗೆ ಅತ್ಯುತ್ತಮ ನಾಯಕಿ ಪ್ರಶಸ್ತಿ ಸಿಕ್ಕಿರುವುದು ತುಂಬಾ ಸಂತಸ ತಂದಿದೆ. -ಶೃತಿ ಹರಿಹರನ್, ನಟಿ.

ಭಾಗವಹಿಸುವ ಮಳಿಗೆಗಳು: ಆಬುಷಣ್, ಅಮರಪಾಲಿ, ಧವನಮ್, ಎಂಪಿಎಸ್, ನೀಲಕಂಠ್, ನಿಖಾರ್, ಪಂಚಕೇಸರಿ ಬಂಡೇರಾ, ಪಿಎಂಜೆ, ಶ್ರೀವಾರಿ, ಶ್ರೀ ಗಣೇಶ್, ಸುದರ್ಶನ್ ಅಂಡ್ ಸನ್ಸ್, ರಾಜಶ್ರೀ ಜ್ಯುವೆಲ್ಸ್, ಔರಾ, ಓರಾ, ಜಗದಾಂಬ, ವಿವಾಂತ್, ಸುನಿಲ್ ಜ್ಯುವೆಲ್ಲರ್ಸ್, ಅನ್‍ಮೊಲ್, ಸಿಲ್ವರ್ ಎಂಪೋರಿಯಂ, ಓಂಕಾರ್, ಶಿವಾನಿ, ಸಿಲ್ವರ್ ಯುಗ್, ಬನೇಥಿ ಎಕ್ಸ್‍ಪೋಟ್ರ್ಸ್, ಅಗರ್‍ವಾಲ್ ಜೆಮ್ಸ್, ಥಾರ್ ಹ್ಯಾಂಡಿಕ್ರಾಫ್ಟ್ ಸೇರಿದಂತೆ ಮತ್ತಿತರೆ ಮಳಿಗೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಆಭರಣಗಳು ಲಭ್ಯ ಇರುತ್ತವೆ. ಮಹಿಳೆಯರು ಮಾತ್ರವಲ್ಲದೆ ಪುರುಷರು ಹಾಗೂ ಮಕ್ಕಳ ಆಭರಣಗಳು ದೊರೆಯಲಿವೆ ಎಂದು ವಿವರಿಸಿದರು.

ಮೇಳದಲ್ಲಿ ಮುಂಬೈ ಹಾಗೂ ಚೆನ್ನೈನಿಂದ ಡಿಸೈನರ್ ಡೈಮಂಡ್ ಜ್ಯುವೆಲರಿ, ಜೈಪುರ್ ಹಾಗೂ ದೆಹಲಿಯಿಂದ ಕುಂದನ್, ಮೀನಾ ಹಾಗೂ ಥೇವಾ, ಹೈದ್ರಾಬಾದ್‍ನಿಂದ ನಿಜಾಮರ ಮಾದರಿ ಆಭರಣಗಳು. ಅಲ್ಲದೆ, ಮೊಟ್ಟ ಮೊದಲ ಬಾರಿಗೆ ಜೈಪುರ್‍ನ ಜೆಮ್ಸ್ ಸ್ಟೋನ್ಸ್, ಮುಂಬೈ ಮತ್ತು ಬೆಂಗಳೂರಿನ ಬೆಳ್ಳಿ ಆರ್ಟಿಕ್ರಾಫ್ಟ್ ತಯಾರಕರು ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ಹೇಳಿದರು.

ಮೂರು ದಿನಗಳ ಕಾಲ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಮೇಳ ನಡೆಯಲಿದ್ದು, ಮೈಸೂರು ಹಾಗೂ ಸುತ್ತಮುತ್ತಲಿನ ಆಭರಣ ಪ್ರಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಹೇಮಲತಾ ಜಗದೀಶ್ ಉಪಸ್ಥಿತರಿದ್ದರು.

Translate »