‘ದ ಜ್ಯುವೆಲರಿ ಷೋ’ ಕಣ್ಣು ಕೋರೈಸುವ ವಿನೂತನ ವಿನ್ಯಾಸದ ಚಿನ್ನಾಭರಣ ಪ್ರದರ್ಶನ, ಮಾರಾಟ ಮೇಳ ಆರಂಭ ನಟಿ ಶೃತಿ ಹರಿಹರನ್ ಚಾಲನೆ
ಮೈಸೂರು

‘ದ ಜ್ಯುವೆಲರಿ ಷೋ’ ಕಣ್ಣು ಕೋರೈಸುವ ವಿನೂತನ ವಿನ್ಯಾಸದ ಚಿನ್ನಾಭರಣ ಪ್ರದರ್ಶನ, ಮಾರಾಟ ಮೇಳ ಆರಂಭ ನಟಿ ಶೃತಿ ಹರಿಹರನ್ ಚಾಲನೆ

June 23, 2018

ಮೈಸೂರು: ಮೈಸೂರಿನ ರ‍್ಯಾಡಿಸನ್ ಬ್ಲ್ಯೂ ಹೋಟೆಲ್‍ನಲ್ಲಿ ಇಂದಿನಿಂದ ಆರಂಭವಾಗಿರುವ ‘ದ ಜ್ಯುವೆಲರಿ ಷೋ’ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಟಿ ಶೃತಿ ಹರಿಹರನ್ ಉದ್ಘಾಟಿಸಿದರು.

ಇಂದಿನಿಂದ ಜೂ.24ರವರೆಗೆ ಆಯೋಜಿಸಿರುವ ಮೇಳದಲ್ಲಿ ದೇಶಾದ್ಯಂತ 25ಕ್ಕೂ ಹೆಚ್ಚು ಆಭರಣ ಮಳಿಗೆಗಳ ತೆರೆಯಲಾಗಿದ್ದು, ಮೈಸೂರು ಜನರ ಅಭಿರುಚಿಗೆ ತಕ್ಕಂತೆ ವಿವಿಧ ಶೈಲಿಯ ಆಭರಣಗಳನ್ನು ವಿನ್ಯಾಸಗೊಳಿಸಿದ್ದು, ಒಂದೇ ಸೂರಿನಡಿ ವಿವಿಧ ವಿನ್ಯಾಸದ ಚಿನ್ನಾಭರಣಗಳು ಲಭ್ಯವಿವೆ.

ಆಬುಷಣ್, ಅಮರಪಾಲಿ, ಧವನಮ್, ಎಂಪಿಎಸ್, ನೀಲಕಂಠ್, ನಿಖಾರ್, ಪಂಚಕೇಸರಿ ಬಂಡೇರಾ, ಪಿಎಂಜೆ, ಶ್ರೀವಾರಿ, ಶ್ರೀ ಗಣೇಶ್, ಸುದರ್ಶನ್ ಅಂಡ್ ಸನ್ಸ್, ರಾಜಶ್ರೀ ಜ್ಯುವೆಲ್ಸ್, ಔರಾ, ಓರಾ, ಜಗದಾಂಬ, ವಿವಾಂತ್, ಸುನಿಲ್ ಜ್ಯುವೆಲ್ಲರ್ಸ್, ಅನ್‍ಮೊಲ್, ಸಿಲ್ವರ್ ಎಂಪೋರಿಯಂ, ಓಂಕಾರ್, ಶಿವಾನಿ, ಸಿಲ್ವರ್ ಯುಗ್, ಬನೇಥಿ ಎಕ್ಸ್‍ಪೋಟ್ರ್ಸ್, ಅಗರ್‍ವಾಲ್ ಜೆಮ್ಸ್, ಥಾರ್ ಹ್ಯಾಂಡಿಕ್ರಾಫ್ಟ್ ಸೇರಿದಂತೆ ಮತ್ತಿತರೆ ಮಳಿಗೆಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಆಭರಣಗಳು ಲಭ್ಯ ಇರುತ್ತವೆ. ಮಹಿಳೆಯರು ಮಾತ್ರವಲ್ಲದೆ ಪುರುಷರು ಹಾಗೂ ಮಕ್ಕಳ ಆಭರಣಗಳು ದೊರೆಯಲಿವೆ.

ಮೇಳದಲ್ಲಿ ಮುಂಬೈ ಹಾಗೂ ಚೆನ್ನೈನಿಂದ ಡಿಸೈನರ್ ಡೈಮಂಡ್ ಜ್ಯುವೆಲರಿ, ಜೈಪುರ್ ಹಾಗೂ ದೆಹಲಿಯಿಂದ ಕುಂದನ್, ಮೀನಾ ಹಾಗೂ ಥೇವಾ, ಹೈದರಾಬಾದ್‍ನಿಂದ ನಿಜಾಮರ ಮಾದರಿ ಆಭರಣಗಳು. ಅಲ್ಲದೆ, ಮೊಟ್ಟ ಮೊದಲ ಬಾರಿಗೆ ಜೈಪುರ್‍ನ ಜೆಮ್ಸ್ ಸ್ಟೋನ್ಸ್, ಮುಂಬೈ ಮತ್ತು ಬೆಂಗಳೂರಿನ ಬೆಳ್ಳಿ ಆರ್ಟಿಕ್ರಾಫ್ಟ್ ತಯಾರಕರು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿ ದಿನ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಮೇಳ ನಡೆಯಲಿದೆ.

Translate »