ರೂಪದರ್ಶಿಯರ ಆಕರ್ಷಕ ನಡಿಗೆ
ಮೈಸೂರು

ರೂಪದರ್ಶಿಯರ ಆಕರ್ಷಕ ನಡಿಗೆ

June 21, 2018

ಮೈಸೂರು: ಬಣ್ಣದ ಉಡುಗೆ ತೊಟ್ಟ ರೂಪದರ್ಶಿಯರು ವಿವಿಧ ಬಗೆಯ ಆಭರಣಗಳನ್ನು ತೊಟ್ಟು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಆಯೋಜಿಸಿದ್ದ ಫ್ಯಾಷನ್ ಶೋನಲ್ಲಿ ವಿವಿಧ ವಿನ್ಯಾಸದ ಆಭರಣಗಳನ್ನು ತೊಟ್ಟ ನಟಿ ಶೃತಿ ಹರಿಹರನ್, ರೂಪದರ್ಶಿಯರೊಂದಿಗೆ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ಆ ಮೂಲಕ ಫ್ಯಾಷನ್ ಷೋಗೆ ಮೆರಗು ತಂದುಕೊಟ್ಟರು. ನಂತರ ಉದ್ಯಮಿಗಳಾದ ಚೈತ್ರಾ ರಂಗಸ್ವಾಮಿ, ಕೀರ್ತನಾ ಗೋಪಾಲ್, ರೋಷಿಣ ಪ್ರಕಾಶ್, ಸುದೀಕ್ಷಾ ಅವರು ಚಿನ್ನಾಭರಣಗಳನ್ನು ತೊಟ್ಟು ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುವ ಮೂಲಕ ನವನವೀನ ಹಾಗೂ ವಿವಿಧ ವಿನ್ಯಾಸದ ಚಿನ್ನಾಭರಣಗಳನ್ನು ಪ್ರದರ್ಶಿಸಿದರು.

Translate »