ಗ್ರಾಪಂ ಸದಸ್ಯರ ವಿರುದ್ಧ ಪಿಡಿಓ ಜಾತಿ ನಿಂದನೆ ಕೇಸ್
ಮಂಡ್ಯ

ಗ್ರಾಪಂ ಸದಸ್ಯರ ವಿರುದ್ಧ ಪಿಡಿಓ ಜಾತಿ ನಿಂದನೆ ಕೇಸ್

June 20, 2018

ಕೆ.ಆರ್.ಪೇಟೆ: ಹಣ ದುರು ಪಯೋಗ ಪ್ರಕರಣ ಬಯಲಿಗೆಳೆದು ಹೋರಾಟ ನಡೆಸುತ್ತಿದ್ದ ತಾಲೂಕಿನ ಮಾಕ ವಳ್ಳಿ ಗ್ರಾಪಂ ಸದಸ್ಯರ ವಿರುದ್ಧ ಪಿಡಿಓ ಕರ್ತವ್ಯಕ್ಕೆ ಅಡ್ಡಿ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂನ ಕೆಲವು ಸದಸ್ಯರು ಮತ್ತು ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಪಂ ಕಚೇರಿ ಎದುರು ಧರಣ ನಡೆಸಿದರು.

ಏನಿದು ಪ್ರಕರಣ: 2015ರಲ್ಲಿ ಅಂದಿನ ಪಿಡಿಓ ರಾಮಕೃಷ್ಣ, ಗ್ರಾಪಂ ಅಧ್ಯಕ್ಷೆ ಪ್ರೇಮ ಕುಮಾರಿ ವಿದ್ಯುತ್ ಸಾಮಗ್ರಿ ಖರೀದಿಗೆ ಹಣ ಪಾವತಿಸಿದ ಕಡತಕ್ಕೆ ಮತ್ತೊಮ್ಮೆ 2017ರಲ್ಲಿ ಈಗಿನ ಪಿಡಿಓ ವಿಶಾಲಮೂರ್ತಿ ಮತ್ತು ಅಧ್ಯಕ್ಷ ಬಲರಾಮೇಗೌಡ 11,136 ರೂ.ಗಳನ್ನು ಪಟ್ಟಣದ ಹಿತೇಶ್ ಎಲೆಕ್ಟ್ರಿಕಲ್ ಅಂಗಡಿಗೆ ಹಣ ಪಾವತಿಸಿ ಹಣ ದುರ್ಬಳಕೆ ಮಾಡಿಕೊಂಡಿದ್ದರು. ಇದನ್ನು ಬೆಳಕಿಗೆ ತಂದ ಕೆಲವು ಗ್ರಾಪಂ ಸದಸ್ಯರು, ಜಿಪಂ ಸಿಇಓ ಗಮನಕ್ಕೆ ತಂದು ಶಿಸ್ತು ಕ್ರಮಕ್ಕೆ ಮನವಿ ಮಾಡಿದ್ದರು. ಸಿಇಓ ತಾಪಂ ಇಓಗೆ ಪ್ರಕರಣದ ಸಂಬಂಧ ವರದಿ ನೀಡುವಂತೆ ಆದೇಶಿಸಿದ್ದರು. ಇಓ ವರದಿ ಮಾಡಿ ಒಂದು ಕಡತಕ್ಕೆ 2 ಬಾರಿ ಹಣ ಪಾವತಿ ಯಾಗಿದೆ ಎಂದು ವರದಿ ನೀಡಿದ್ದರು. ವರದಿ ನೀಡಿ ಹಲವು ದಿನಗಳಾದರೂ ಜಿಪಂ ಸಿಇಓ ಅವರು ಪಿಡಿಓ ಹಾಗೂ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳದ ಕಾರಣ ಸದಸ್ಯರು ಪಟ್ಟಣದ ತಾಪಂ ಎದುರು ಜೂ.19 ರಂದು ಧರಣ ಹಮ್ಮಿಕೊಳ್ಳಲು ಸಿದ್ದತೆ ನಡೆಸಿದ್ದರು. ಈ ಸುಳಿವು ಅರಿತ ಪಿಡಿಓ ವಿಶಾಲಮೂರ್ತಿ ಸದಸ್ಯರೊಂದಿಗೆ ರಾಜಿಗೆ ಮುಂದಾಗಿದ್ದರು. ರಾಜಿ ವಿಫಲ ವಾದ ಹಿನ್ನೆಲೆಯಲ್ಲಿ ಜೂ.18ರಂದು ಸದಸ್ಯರಾದ ಮಾಕವಳ್ಳಿ ಯೋಗೇಶ್, ಹೆಗ್ಗಡಹಳ್ಳಿ ಅಶೋಕ್ ಮತ್ತು ಕರೋಟಿ ಸುಮಿತ್ರಮ್ಮ, ರೈತ ಸಂಘದ ಕಾರ್ಯಕರ್ತ ರಾದ ಕರೋಟಿ ತಮ್ಮಯ್ಯ ಮತ್ತು ಸಿಂಧಘಟ್ಟ ರವಿ ಮೇಲೆ ಕರ್ತವ್ಯಕ್ಕೆ ಅಡ್ಡಿ ಮತ್ತು ಜಾತಿ ನಿಂದನೆ ಪ್ರಕರಣ ದಾಖ ಲಿಸಿದ್ದಾರೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದರು.

ದೂರು: ಕಚೇರಿಯಲ್ಲಿ ನಾನು ಕರ್ತವ್ಯ ದಲ್ಲಿರುವಾಗ ಸದಸ್ಯ ಎಂ.ಎ.ಯೋಗೇಶ್ ಅವರು ಬಂದು ನನ್ನ ಜೊತೆ ಏಕಾಏಕಿ ಜಗಳ ತೆಗೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿ ದ್ದಲ್ಲದೇ ಅವಾಚ್ಯ ಶಬ್ಧದಿಂದ ಬೈದು, ಜಾತಿ ನಿಂದನೆ ಮಾಡಿ, ಬಟ್ಟೆ ಹರಿದು ಹಾಕಿದ್ದಾರೆ. ಅಲ್ಲದೇ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಹಲವು ಕಚೇರಿ ಸಾಮಗ್ರಿ ಗಳನ್ನು ನಾಶಪಡಿಸಿದ್ದಾರೆ. ಇವರೊಂದಿಗೆ ಸದಸ್ಯರಾದ ಹೆಗ್ಗಡಹಳ್ಳಿ ಅಶೋಕ್ ಮತ್ತು ಕರೋಟಿ ಸುಮಿತ್ರಮ್ಮ, ರೈತ ಸಂಘದ ಕಾರ್ಯಕರ್ತರಾದ ಕರೋಟಿ ತಮ್ಮಯ್ಯ ಹಲವು ದಿನಗಳಿಂದ ಕರ್ತವ್ಯಕ್ಕೆ ಪಡಿಸುತ್ತಿ ದ್ದಾರೆ ಎಂದು ಆರೋಪಿಸಿ ಪಿಡಿಓ ವಿಶಾಲ ಮೂರ್ತಿ ಕಿಕ್ಕೇರಿ ಪೊಲೀಸ್ ಠಾಣೆಗೆ ಜೂ.18ರಂದು ದೂರು ನೀಡಿದ್ದರು.

ಪ್ರತಿದೂರು: ಇಂದು ಗ್ರಾಪಂ ಅಧ್ಯಕ್ಷ ಬಲರಾಮೇಗೌಡ, ಪಿಡಿಓ ವಿಶಾಲಮೂರ್ತಿ ಮತ್ತು ಅಟೆಂಡರ್ ಅಭಿ ಅವರುಗಳು ನಾನು ಗ್ರಾಪಂಗೆ ಹೋದ ವೇಳೆ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾಕವಳ್ಳಿ ಗ್ರಾಮದ ಮಹಿಳೆಯೊಬ್ಬರು ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಎರಡೂ ಕಡೆಯವ ರಿಂದಲೂ ಪ್ರಕರಣ ದಾಖಲಿಸಿಕೊಂಡಿ ರುವ ಕಿಕ್ಕೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಒಟ್ಟಾರೆ ಹಣ ದುರುಪಯೋಗವಾಗಿ ದ್ದರೆ ಮೇಲಧಿಕಾರಿಗಳು ತನಿಖೆ ನಡೆಸಿ ಕಾನೂನು ಕ್ರಮಕ್ಕೆ ಅವಕಾಶ ನೀಡುವ ಬದಲು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿ ರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಭರವಸೆ: ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕಾಗಮಿಸಿ ಮಾತನಾಡಿದ ತಾಪಂ ಇಓ ಚಂದ್ರಮೌಳಿ ಅವರು ಗ್ರಾಪಂನಲ್ಲಿ ನಡೆದಿರುವ ಕಾನೂನು ಬಾಹಿರ ಚಟು ವಟಿಕೆಗಳ ವಿರುದ್ಧ ಕ್ರಮಕ್ಕಾಗಿ ಜಿಪಂ ಸಿಇಓಗೆ ವರದಿ ನೀಡುತ್ತೇನೆ. ಸದಸ್ಯರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿರುವ ಪಿಡಿಓ ವಿರುದ್ಧ ಮಾಹಿತಿ ಪಡೆದು ಪ್ರಕರಣ ಹಿಂಪಡೆಯುವ ಬಗ್ಗೆ ಮನವೊಲಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಧರಣ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.
ಪ್ರತಿಭಟನೆಯಲ್ಲಿ ಹಿರಿಯ ರೈತ ಮುಖಂಡ ರಾಜೇಗೌಡ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಆರ್.ಜಯರಾಂ, ತಾಲೂಕು ರೈತಸಂಘದ ಅಧ್ಯಕ್ಷ ಶಂಕರ್, ಕಾರ್ಯ ದರ್ಶಿ ನಾರಾಯಣಸ್ವಾಮಿ, ರೈತ ಮುಖಂಡ ರಾದ ನಾಗರಾಜು, ಮಹೇಶ್, ಕುಮಾರ್, ಪ್ರಕಾಶ್, ಪ್ರಕಾಶ್, ಜಗದೀಶ್ ಮತ್ತಿತರರಿ ದ್ದರು. ಸಿಪಿಐ ಹೆಚ್.ಬಿ.ವೆಂಕಟೇಶಯ್ಯ, ಎಸ್‍ಐ ಹೆಚ್.ಎಸ್.ವೆಂಕಟೇಶ್ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರು.

ಈ ಹಿಂದಿನ ಗ್ರಾಪಂ ಪಿಡಿಓ ರಾಮಕೃಷ್ಣ ನಿವೃತ್ತಿಯಾಗಿ ಚಾರ್ಜ್ ಕೊಡುವ ವೇಳೆ ಬಿಲ್ ಪಾವತಿ ಬಗ್ಗೆ ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನಾನು ಅಧಿಕಾರ ಸ್ವೀಕರಿಸಿದ ನಂತರ 2ನೇ ಬಾರಿಗೆ ಚೆಕ್ ಪಾವತಿಯಾಗಿರುವುದನ್ನು ಕಡತ ಪರಿಶೀಲಿಸುವ ವೇಳೆ ನಾನೇ ಪತ್ತೆ ಮಾಡಿದೆ. ಹಾಗಾಗಿ ಡಿ.20, 2017ರಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಿ ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ. ಯಾವುದೇ ಹಣ ದುರುಪಯೋಗವಾಗಿಲ್ಲ. – ವಿಶಾಲಮೂರ್ತಿ, ಪಿಡಿಓ ಮಾಕವಳ್ಳಿ ಗ್ರಾಪಂ.

Translate »