ಕೇಂದ್ರ ಅನುದಾನ ಬಳಸಿಕೊಳ್ಳುವಲ್ಲಿ ರಾಜ್ಯ ಕನ್ನಡ, ಸಂಸ್ಕøತಿ ಇಲಾಖೆ ವಿಫಲ
ಮೈಸೂರು

ಕೇಂದ್ರ ಅನುದಾನ ಬಳಸಿಕೊಳ್ಳುವಲ್ಲಿ ರಾಜ್ಯ ಕನ್ನಡ, ಸಂಸ್ಕøತಿ ಇಲಾಖೆ ವಿಫಲ

October 21, 2018

ಮೈಸೂರು: ಕೇಂದ್ರ ಸರ್ಕಾರದ ಸಂಸ್ಕøತಿ ಸಚಿವಾಲಯ ದಲ್ಲಿ ಸಾಕಷ್ಟು ಅನುದಾನವಿದೆ. ಆದರೆ ಇದನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾ ರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಿಂದುಳಿದಿದೆ ಎಂದು ಸಂಗೀತ ವಿದ್ವಾನ್ ಡಾ.ರಾ.ಸ. ನಂದಕುಮಾರ್ ತಿಳಿಸಿದ್ದಾರೆ.

ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಭಾಂ ಗಣದಲ್ಲಿ ಕೇಂದ್ರ ಸಂಸ್ಕøತಿ ಸಚಿವಾಲ ಯದ ವತಿಯಿಂದ ಆಯೋಜಿಸಿದ್ದ ಎಂ.ಆರ್. ಶ್ರೀಹರ್ಷ ನೇತೃತ್ವದಲ್ಲಿ ಸಂಗೀತ-ನಾಟ್ಯ-ರೇಖಾ ಚಿತ್ರದ ರೂಪಕ ಮನಸ್ವಿನಿ `ದೃಶ್ಯ-ಶ್ರಾವ್ಯ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಉತ್ತರ ಭಾರತದ ರಾಜ್ಯ ಗಳು ಹಾಗೂ ಪಕ್ಕದ ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರದ ಸಂಸ್ಕøತಿ ಸಚಿವಾಲ ಯದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಆದರೆ, ನಮ್ಮ ರಾಜ್ಯದ ಸಂಸ್ಕøತಿ ಇಲಾಖೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದರು.

ಸಂಗೀತ-ನಾಟ್ಯ-ಚಿತ್ರಕಲೆ ಒಂದೇ ವೇದಿಕೆಯಲ್ಲಿ ವಿಭಿನ್ನ ಕಾರ್ಯಕ್ರಮ ಆಯೋಜಿಸುವುದು ಅಪರೂಪ. ಈ ಕಾರ್ಯಕ್ರಮವನ್ನು ಕಲಾವಿದ ಶ್ರೀಹರ್ಷ ನೇತೃತ್ವದಲ್ಲಿ ಸಾಂಸ್ಕøತಿಕ ನಗರಿ ಮೈಸೂ ರಿನಲ್ಲಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಸಂಗೀತ-ನಾಟ್ಯ ಕ್ಷೇತ್ರದ ಕಲಾವಿದರಿಗೆ ಹೆಚ್ಚಿನ ಅವಕಾಶಗಳಿವೆ. ಆದರೆ, ಚಿತ್ರಕಲಾ ವಿದರಿಗೆ ತಮ್ಮ ಪ್ರತಿಭೆಯನ್ನು ಅನಾ ವರಣಗೊಳಿಸಲು ಅವಕಾಶ ಕಡಿಮೆ. ಆದ್ದರಿಂದ ಚಿತ್ರಕಲಾವಿದರೂ ಹೆಚ್ಚಿನ ಅವಕಾಶಗಳು ಸರ್ಕಾರದ ಮಟ್ಟದಲ್ಲಿ ಸಿಗುವಂತಾಗಬೇಕು ಮತ್ತು ಕಲೆ, ಸಂಸ್ಕøತಿ, ಪರಂಪರೆಗಳ ಅನಾವರಣಕ್ಕೆ ಮೀಸಲಿಟ್ಟ ಅನುದಾನವನ್ನು ಸಮರ್ಪಕವಾಗಿ ಬಳಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ವೇದಿಕೆ ಸಭಾ ಕಾರ್ಯಕ್ರಮ ನಂತರ ಎಂ.ಆರ್.ಶ್ರೀಹರ್ಷ ನೇತೃತ್ವದಲ್ಲಿ ಸಂಗೀತ -ನಾಟ್ಯ-ರೇಖಾಚಿತ್ರ ರೂಪಕ ಕಾರ್ಯ ಕ್ರಮ ಮುಂದುವರೆಯಿತು. ಈ ವೇಳೆ ಕೌಸ್ತುಭ ಮತ್ತು ನಾಗರಾಜ್ ಪ್ರಾರ್ಥಿಸಿದರೆ, ಶ್ರೀ ಹರ್ಷ ಸ್ವಾಗತಿಸಿದರು. ಚಿತ್ರ ಕಲಾವಿದ ಹೆಚ್.ಕೆ.ವಿಶ್ವನಾಥ್ ರೇಖಾವಿನ್ಯಾಸ ಬಿಡಿಸಿದರು.

ವಿದುಷಿ ಅನುಷಾ ಗಡಾರ್, ಅಕ್ಷತಾ ವೈ ಅಡಿಗ, ಹರ್ಷಿಣಿ ಪುರುಷೋತ್ತಮ್ ನಾಟ್ಯ ಪ್ರದರ್ಶನ ನೀಡಿದರು. ನೇಪಥ್ಯ ದಲ್ಲಿ ಪಿಟೀಲು ವಿದ್ವಾನ್ ನಾರಾ ಯಣಸ್ವಾಮಿ, ಮೃದಂಗ ವಿದ್ವಾನ್ ಕುಮಾರ್, ಕೀಬೋರ್ಡ್ ಷಣ್ಮುಗ ಸಜ್ಜ, ರಿದಂಪ್ಯಾಡ್ ವಿನಯ್ ರಂಗದೋಳ್, ತಬಲ ವಿದ್ವಾನ ಭೀಮಾಶಂಕರ್ ಸಾಥ್ ನೀಡಿದ್ದಾರೆ.

 

Translate »