ಸಂಸ್ಕøತ ಸಾಮ್ರಾಜ್ಞಿ ಭಾಷೆ
ಮೈಸೂರು

ಸಂಸ್ಕøತ ಸಾಮ್ರಾಜ್ಞಿ ಭಾಷೆ

October 21, 2018

ಮೈಸೂರು:  ಸಂಸ್ಕøತದಲ್ಲಿರುವ ಋಗ್ವೇದದ ಮಂತ್ರಗಳು ಹಾಗೂ ಭಗವದ್ಗೀತೆಯ ಶ್ಲೋಕಗಳನ್ನು ಉಚ್ಛಾರಣೆ ಮಾಡುವುದರಿಂದ ಮಾತಿನ ಸಮಸ್ಯೆ ನಿವಾರಣೆಯಾಗುತ್ತದೆ. ಅದೊಂದು ಭಾಷಾ ಥೇರಪಿ ಎಂದು ಅಹಮದಾಬಾದ್‍ನ ಎಲ್‍ಡಿ ಕಲಾ ಕಾಲೇಜು ಸಂಸ್ಕøತ ಪ್ರಾಧ್ಯಾಪಕ ಡಾ. ಗಜೇಂದ್ರ ಪಾಂಡ ತಿಳಿಸಿದರು.

ಮೈಸೂರಿನ ಕುವೆಂಪುನಗರದಲ್ಲಿ ಟಿಎನ್‍ಎಸ್ ಪ್ರತಿಷ್ಠಾನ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕøತ ಭಾಷೆಯನ್ನು ಅಭ್ಯಾಸ ಚಿಕಿತ್ಸೆಯನ್ನು ಪಡೆದುಕೊಂಡಂತೆ, ಮಾತುಗಾರಿಕೆಯಲ್ಲಿ ತೊಂದರೆ ಇರುವವರು ಸಂಸ್ಕøತ ಭಾಷೆಯನ್ನು ಉಚ್ಛಾರಣೆ ಮಾಡುವುದರಿಂದ ಅನುಕೂಲವಾಗುತ್ತದೆ ಎಂದರು.

ಸರಿಯಾದ ಉಚ್ಛಾರಣೆಯು ಬರದಿದ್ದರೆ ‘ಅಮರ ಕೋಶ’ವನ್ನು ಓದಬೇಕು ಎಂದು ಪಾಣಿನೀಯ ಸಂಸ್ಕøತ ವ್ಯಾಕರಣ ಗ್ರಂಥವಾದ ‘ಅಷ್ಟದ್ಯಾಯಿ’ಯಲ್ಲಿ ತಿಳಿಸಿದ್ದಾನೆ. ಸಂಸ್ಕøತ ಎಂಬುದು ಸಾಮ್ರಾಜ್ಞಿ ಭಾಷೆ, ಸಂಸ್ಕøತ ಭಾಷೆ ಇತರೆ ಭಾಷೆಗಳ ತಾಯಿಯಾಗಿದ್ದು, ಸಂಸ್ಕøತವನ್ನು ಪ್ರತಿಯೊಬ್ಬರೂ ಕಲಿಯಬೇಕು. ಒಮ್ಮೆ ಜರ್ಮನಿಯ ಹೆಡನ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದೆ. ಅಲ್ಲಿ 6 ಮಂದಿ ಜರ್ಮನ್ ಪ್ರಾಧ್ಯಾಪಕರು ಸಂಸ್ಕøತ ಅಧ್ಯಾಪಕರಾಗಿದ್ದರು. ಅವರನ್ನು ನೀವು ಸಂಸ್ಕøತ ವನ್ನು ಕಲಿಯಲು ಕಾರಣವೇನು ಎಂದು ಪ್ರಶ್ನಿಸಿದಾಗ, ವಿಜ್ಞಾನ, ತಂತ್ರಜ್ಞಾನಕ್ಕೆ ಸಂಸ್ಕøತ ಭಾಷೆ ಅನುಕೂಲವಾಗುತ್ತದೆ. ಆದ್ದರಿಂದ ಅಧ್ಯಯನ ಮಾಡು ತ್ತಿದ್ದೇವೆ ಎಂದು ತಿಳಿಸಿದ್ದರು. ಆದ್ದರಿಂದ ಸಂಸ್ಕøತ ಒಂದು ವೈಜ್ಞಾನಿಕ ಭಾಷೆಯಾಗಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಐಐಟಿ ಸಂಸ್ಥೆಯ ಯುವ ವಿಜ್ಞಾನಿಗಳು ಬಾಷಾಂತರ ಮಾಡುವ ಯಂತ್ರಗಳನ್ನು ಕಂಡು ಹಿಡಿದರು. ಆದರೆ, ಅವುಗಳಲ್ಲಿ ಇಂಗ್ಲಿಷ್ ವಾಕ್ಯಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸುವುದಕ್ಕೆ ಸಾಧ್ಯವಾಗಲಿಲ್ಲ. ಕಾರಣ, ಇಂಗ್ಲಿಷ್ ವೈಜ್ಞಾನಿಕ ಭಾಷೆಯಲ್ಲ. ಆದರೆ, ಸಂಸ್ಕøತ ವೈಜ್ಞಾನಿಕ ಭಾಷೆ ಎಂದು ತಿಳಿದ ನಂತರ ಹೊಸ ಅಧ್ಯಯನವನ್ನು ಆರಂಭಿಸಿದರು. ಸಂಸ್ಕøತ ಭಾಷೆ ಇಂದು ನವೋದಯ ಕಾಲದಲ್ಲಿದೆ. ಭಾರತ ಸೇರಿದಂತೆ ವಿಶ್ವದ ಬಹಳಷ್ಟು ನಗರಗಳಲ್ಲಿ ಸಂಸ್ಕøತ ಅಧ್ಯಯನದಲ್ಲಿ ಆಸಕ್ತಿ ಬೆಳೆಯುತ್ತಿದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ರಾಷ್ಟ್ರಪತಿ ಪ್ರಶಸ್ತಿ ಪುರಸ್ಕøತ ಡಾ.ಹೆಚ್.ವಿ.ನಾಗರಾಜರಾವ್ ಮಾತನಾಡಿದರು. ಟಿಎನ್‍ಎಸ್ ಪ್ರತಿಷ್ಠಾನ ಸಂಸ್ಥೆಯ ಸಂಚಾಲಕ ಟಿ.ಎನ್.ಪ್ರಭಾಕರ್, ಮಹಾಜನ ಕಾಲೇಜು ಎಂಬಿಎ ವಿಭಾಗದ ಪ್ರಾಧ್ಯಾಪಕ ಡಾ.ವಿವೇಕ್, ಮರಿಮಲ್ಲಪ್ಪ ಕಾಲೇಜಿನ ಸಂಸ್ಕøತ ಪ್ರಾಧ್ಯಾಪಕಿ ನೀಲಾಂಬಿಕೆ, ಬಿ.ಕೆ.ಗಾಯತ್ರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »