ಕೆ.ಆರ್.ನಗರ: ಪಟ್ಟಣದ ಸಿ.ಎಂ.ರಸ್ತೆಯಲ್ಲಿರುವ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ನವರಾತ್ರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಕಳೆದ 9 ದಿವಸಗಳಿಂದ ಆಚರಿಸಲಾಯಿತು. ವಿಶೇಷ ಪೂಜೆಯೊಂದಿಗೆ ಬೆಳಿಗ್ಗೆ ಲಕ್ಷ್ಮೀವೆಂಕಟೇಶ್ವರ, ಚಂದ್ರಮೌಳೇಶ್ವರ, ಆಂಜನೇಯಸ್ವಾಮಿ, ರಾಮದೇವರುಗಳ ಪಲ್ಲಕ್ಕಿ ಉತ್ಸವವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ನಡೆಸಿ ನಂತರ ದೇವಾಲಯ ದಲ್ಲಿ ವಿಶೇಷ ಪೂಜಾ ಕೈಕಂರ್ಯಗಳ ಜೊತೆಗೆ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು.
ವಿಜಯದಶಮಿ ದಿನವಾದ ಶುಕ್ರವಾರ ಸಂಜೆ 4 ಗಂಟೆಗೆ ಪಟ್ಟಣದ ವಿವಿಧ ದೇವಾ ಲಯಗಳಿಂದ ದೇವರ ಪಲ್ಲಕ್ಕಿ ಉತ್ಸವಗಳು ಒಂದೆಡೆ ಸೇರಿ ಪ್ರಮುಖ ರಸ್ತೆಗಳಲ್ಲಿ ಮೆರ ವಣಿಗೆ ಹೊರಟು ಪಟ್ಟಣದ ಹೃದಯ ಭಾಗದಲ್ಲಿರುವ ಗಾಂಧೀ ಉದ್ಯಾನವನ ದಲ್ಲಿ ಬನ್ನಿ ಮರಕ್ಕೆ ವಿಶೇಷ ಪೂಜೆ ನೆರ ವೇರಿಸಿ ಉತ್ಸವಕ್ಕೆ ತೆರೆ ಎಳೆಯಲಾಯಿತು.
ದೇವಾಲಯದ ಪ್ರಧಾನ ಅರ್ಚಕರಾದ ಶ್ರೀನಿವಾಸ್‍ಭಟ್ಟರು, ಮುಜರಾಯಿ ಇಲಾಖೆಯ ದೇವಾಲಯದ ಮುಖ್ಯ ಅರ್ಚಕರಾದ ಜಿ.ಪ್ರಾಣೇಶ್, ಪಾರುಪತ್ತೇದಾರ ಚಂದ್ರ ಮೋಹನ್, ಟಿ.ಎನ್.ಯೋಗೇಶ್‍ಕುಮಾರ್, ಅಂಡವಾನ್ ರಘು, ಕಾಳೇನಹಳ್ಳಿ ಗ್ರಾಮಸ್ಥರು ಭಾಗವಹಿಸಿದ್ದರು.