ಬೋನಿಗೆ ಬಿದ್ದ ಮೂರು ವರ್ಷದ ಚಿರತೆ
ಮೈಸೂರು

ಬೋನಿಗೆ ಬಿದ್ದ ಮೂರು ವರ್ಷದ ಚಿರತೆ

October 21, 2018

ಹಂಪಾಪುರ:  ಹೆಚ್.ಡಿ.ಕೋಟೆ ತಾಲೂಕಿನ ಹಿರೇನಂದಿ ಗ್ರಾಮ ದಲ್ಲಿ 2 ವರ್ಷದ ಹಿಂದೆ 4 ಹೆಣ್ಣು 1 ಗಂಡು ಚಿರತೆ ಇದೇ ಗ್ರಾಮದಲ್ಲಿ ಬೋನಿಗೆ ಸೆರೆ ಸಿಕ್ಕಿದ್ದು, ಇದೆ ಮಂಗಳವಾರ (ಅ.16) ಮುಂಜಾನೆ 5 ಗಂಟೆ ಸಮಯದಲ್ಲಿ 3 ವರ್ಷದ ಮತ್ತೊಂದು ಗಂಡು ಚಿರತೆ ಸೆರೆ ಸಿಕ್ಕಿದೆ.

ಗ್ರಾಮದ ಚೆಲುವ ಅವರ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಮಂಗಳವಾರ ಮುಂಜಾನೆ 5 ಗಂಟೆ ಸಮಯದಲ್ಲಿ 3 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ. ಈ ಗ್ರಾಮದ ಜಮೀನುಗಳು ಮತ್ತು ಮನೆಯ ಕೊಟ್ಟಿಗೆಗಳಲ್ಲಿ ಆಡು, ಕುರಿ, ದನ-ಕರುಗಳನ್ನು ಕಳೆದ 1-2 ತಿಂಗಳಿಂದ ಈ ಚಿರತೆ ತಿನ್ನುತ್ತಿತ್ತು. ಇದರಿಂದ ರೈತರು, ಗ್ರಾಮಸ್ಥರು ಭಯಭೀತಗೊಂಡು ಅರಣ್ಯ ಇಲಾಖೆಯವರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ರೈತರ ಕಬ್ಬಿನ ಗದ್ದೆಯಲ್ಲಿ ಬೋನು ಇಡಲಾಗಿತ್ತು.
ಮಂಗಳವಾರ ಮುಂಜಾನೆ 5 ಗಂಟೆಯಲ್ಲಿ ಚಿರತೆ ಸೆರೆ ಸಿಕ್ಕಿದೆ. ಈ ಹಿಂದೆ ಗೌರಮ್ಮ ಅವರ ಹಸುವನ್ನು ತಿಂದು ಹಾಕಿತ್ತು. ಅರಣ್ಯ ಸಿಬ್ಬಂದಿಯವರು ಮಹಜರು ಮಾಡಿ ಪರಿಹಾರಕ್ಕೆ ಮೇಲಧಿಕಾರಿಗಳಿಗೆ ವರದಿ ಕಳಿಸಿದ್ದಾರೆ. ಈ ಮಧ್ಯೆ ಬೋನಿಗೆ ನಾಯಿ ಬಿಡಲು ಹೋದ ಗೌರಮ್ಮ ಅವರ ಮಗನಿಗೆ ನಾಯಿಕಚ್ಚಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೆರೆ ಸಿಕ್ಕ ಚಿರತೆಯನ್ನು ಅರಣ್ಯ ಅಧಿಕಾರಿಗಳಾದ ಮಧು, ಪರಮೇಶ್, ಮಂಜುನಾಥ್, ಸುರೇಶ್, ಕೃಷ್ಣ ಇತರರು ಬಂಡೀಪುರದ ಕಲ್ಕೆರೆ ಅರಣ್ಯ ವ್ಯಾಪ್ತಿಯಲ್ಲಿ ಬಿಟ್ಟಿದ್ದಾರೆ.

Translate »