ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು
ನಂಜನಗೂಡು: ಬಡತನ ಸಾಧನೆಗೆ ಅಡ್ಡಿಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಶ್ರೀಮತಿ ನೀಲಮಣಿ ಎನ್.ರಾಜು ತಿಳಿಸಿದರು. ಇತ್ತೀಚೆಗೆ ಸುತ್ತೂರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಮೇಘಾ ಲಯ, ಮಣಿಪುರ ಹಾಗೂ ಜಾರ್ಖಂಡ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಪಡೆಯಲು ಪೂರಕ ಪರಿಸರ ಇದೆ. ಅದರಲ್ಲೂ ಜೆಎಸ್‍ಎಸ್ ಸಂಸ್ಥೆಗಳಲ್ಲಿ ಸಂಸ್ಕಾರ ಸಹಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ.
ಪರಮಪೂಜ್ಯ ಸುತ್ತೂರು ಶ್ರೀಗಳವರು ಬಡಮಕ್ಕಳಿಗೆ ಸುಸಜ್ಜಿತ ವಿದ್ಯಾರ್ಥಿನಿಲಯ ದೊಂದಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಇದರ ಸದುಪಯೋಗ ಪಡೆದು ಸತ್ಪ್ರಜೆ ಗಳಾಗಬೇಕು ಎಂದರು. ದುರಭ್ಯಾಸಗಳಿಂದ ದೂರವಿದ್ದು ಉತ್ತಮ ಸಂಸ್ಕಾರ ಹಾಗೂ ಸಂಸ್ಕøತಿಯನ್ನು ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿ ಗಳಿಗೆ ಕಿವಿ ಮಾತು ಹೇಳಿದರು. ಜನ್ಮ ನೀಡಿದ ತಾಯಿ ತಂದೆಯನ್ನು ಪ್ರೀತಿ ಗೌರವಗಳಿಂದ ಕಾಣಬೇಕು ಎಂದರು.
ಈ ಸಂದರ್ಭದಲ್ಲಿ ಸುತ್ತೂರು ಕಿರಿಯ ಶ್ರೀಗಳಾದ ಶ್ರೀ ಜಯರಾಜೇಂದ್ರ ಸ್ವಾಮಿ ಗಳು, ಜೆಎಸ್‍ಎಸ್ ಸಂಸ್ಥೆಗಳ ಆಡಳಿತಾಧಿ ಕಾರಿ ಶ್ರೀ ಎಸ್.ಪಿ.ಉದಯಶಂಕರ್, ಸಂಯೋಜನಾಧಿಕಾರಿ ಶ್ರೀ ಜಿ.ಎಲ್. ತ್ರಿಪುರಾಂತಕ ಮೊದಲಾದವರಿದ್ದರು.