ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ
ಚಾಮರಾಜನಗರ

ಕಣ್ಮನ ಸೆಳೆಯುತ್ತಿರುವ ಫಲಪುಷ್ಪ ಪ್ರದರ್ಶನ

October 21, 2018

ಹೂವಿನ ಅಲಂಕಾರಿಕ ಪ್ರತಿ ಕೃತಿ ನಿರ್ಮಾಣ, ಯುವಜನರ ಸೆಳೆಯುತ್ತಿರುವ ಸೆಲ್ಫಿ ಪಾಯಿಂಟ್, ಮಕ್ಕಳಿಗಾಗಿ ಕಾರಂಜಿ ನಿರ್ಮಾಣ
ಚಾಮರಾಜನಗರ: ತೋಟ ಗಾರಿಕೆ ಇಲಾಖೆ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆರಂಭಗೊಂಡಿರುವ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ.

ಅ. 22ರವರೆಗೆ ನಡೆಯಲಿರುವ ಫಲ ಪುಷ್ಪ ಪ್ರದರ್ಶನವು ಮೊದಲ ದಿನವೇ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿ ಯಾಗಿದೆ. ಉದ್ಘಾಟನೆಗೊಂಡ ಕೂಡಲೇ ಜಿಲ್ಲೆಯ ಜನರು ಆಕರ್ಷಕ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಮುಗಿಬಿದ್ದರು.
ಈ ಸಾಲಿನ ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿ ಹೂವಿನ ಅಲಂ ಕಾರಿಕ ಪ್ರತಿ ಕೃತಿಗಳನ್ನು ನಿರ್ಮಿಸಲಾಗಿದೆ. ಹುಲಿಯ ಮೇಲೆ ಕುಳಿತ ಮಹದೇಶ್ವರ, ಶಿವಲಿಂಗ, ಆನೆ ಪ್ರತಿಕೃತಿಗಳನ್ನು ಗುಲಾಬಿ, ಜರ್ಬೆರಾ, ಕೊಲ್ಕತ್ತಾ ಮಾರಿಗೋಲ್ಡ್, ಸುಗಂಧರಾಜ ಸೇರಿದಂತೆ ವಿವಿಧ ಹೂವು ಗಳಿಂದ ನಿರ್ಮಿಸಲಾಗಿದೆ.

ಕನ್ನಡದ ಮೇರು ಸಾಹಿತಿ, ಕವಿಗಳ ಮುಖ ಕೃತಿಗಳನ್ನು ಕಲ್ಲಂಗಡಿ ಹಣ್ಣಿನಿಂದ ಕೆತ್ತಿ ರೂಪಿಸಿರುವುದು ಗಮನ ಸೆಳೆಯುತ್ತಿದೆ. ಬಣ್ಣಬಣ್ಣದ ಹೂವುಗಳಿಂದ ಅಲಂಕೃತ ವಾದ ಮಾದರಿಗಳು ಪ್ರದರ್ಶನದಲ್ಲಿ ಇಡಲಾಗಿದೆ. ಚಿಟ್ಟೆಯಾಕಾರದ ವರ್ಟಿ ಕಲ್ ಗಾರ್ಡನ್ ಅನ್ನು ವಿವಿಧ ಹೂ ಕುಂಡ ಗಳಿಂದ ಅಲಂಕರಿಸಲಾಗಿದೆ. ಹೂವಿನ ಕುಂಡಗಳ ಜೋಡಣೆ ನಾಗರಿಕರನ್ನು ಆಕರ್ಷಿಸುವಲ್ಲಿ ಸಫಲವಾಗುತ್ತಿದೆ.

ಯುವಜನರನ್ನು ಆಕರ್ಷಿಸಲು ಹೂವು ಗಳಿಂದ ನಿರ್ಮಿಸಿರುವ ಸೆಲ್ಪಿ ಪಾಯಿಂಟ್ ಪ್ರಮುಖ ಆಕರ್ಷಣೆಯಾಗಿದೆ. ಹೂವಿನ ಅಲಂಕಾರ ಹಾಗೂ ನೀರಿನ ಕಾರಂಜಿ ಗಳನ್ನು ನಿರ್ಮಾಣ ಮಾಡಿರುವುದು ನೋಡು ಗರ ಮನೋಲ್ಲಾಸಕ್ಕೆ ಮುಖ್ಯ ತಾಣ ವಾಗಿದೆ. ರೈತರಿಗೆ ಮತ್ತು ಮಹಿಳೆಯರಿಗೆ ಮಾಹಿತಿ ನೀಡಲು ವಿಶೇಷವಾಗಿ ಬೆಳೆಯ ಲಾಗಿರುವ ನಾನಾ ಬಗೆಯ ಹಣ್ಣು ಮತ್ತು ತರಕಾರಿಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

ಸರ್ಕಾರಿ ಯೋಜನೆ ಸದ್ಬಳಕೆ ಮಾಡಿ ಕೊಂಡು ಮುಂದೆ ಬಂದ ಪ್ರಗತಿಪರ ರೈತರ ಯಶೋಗಾಥೆಯನ್ನು ಪ್ರಸ್ತುತಪಡಿ ಸುವ ಮಾದರಿಯಲ್ಲಿಯೂ ಪ್ರದರ್ಶನ ರೂಪುಗೊಂಡಿರುವುದು ವಿಶೇಷವಾಗಿದೆ.

ತೋಟಗಾರಿಕೆ ಇಲಾಖೆಯಿಂದ ವಿಶೇಷ ವಾಗಿ ಸಹಾಯಧನ ನೀಡಲಾಗುವಂತಹ ಪಾಲಿಹೌಸ್, ಈರುಳ್ಳಿ ಶೇಖರಣಾ ಘಟಕ, ತಾರಸಿ ತೋಟ, ಕೈತೋಟಗಳಂತಹ ಮಾದರಿ ಗಳು ಸುಂದರವಾಗಿ ಮೂಡಿಬಂದಿವೆ. ಅಲ್ಲದೆ ಕೃಷಿ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಪಶುಸಂಗೋಪನೆ, ಆರೋಗ್ಯ ಇಲಾಖೆಗಳು ಮಳಿಗೆಗಳನ್ನು ತೆರೆದು ತಮ್ಮ ಯೋಜನೆ, ಕಾರ್ಯಕ್ರಮಗಳ ಮಾಹಿತಿಯನ್ನು ನೀಡುತ್ತಿವೆ. ಈ ಬಾರಿ ಮುತುವರ್ಜಿ ವಹಿಸಿ ಅನೇಕ ಇಲಾಖೆಗಳು ಕಾರ್ಯಕ್ರಮಗಳ ವಿವರವನ್ನು ವಸ್ತುಪ್ರದರ್ಶನ ಮಾದರಿ ಯಲ್ಲಿ ರೂಪಿಸಿವೆ. ರುಡ್ ಸೆಟ್ ಸಂಸ್ಥೆಯು ಸಹ ಮಾಹಿತಿ ಮಳಿಗೆ ಸ್ಥಾಪಿಸಿ ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ಹಮ್ಮಿಕೊಂಡಿರುವ ಕಾರ್ಯ ಕ್ರಮವನ್ನು ತಿಳಿಸುತ್ತಿದೆ. ತರಬೇತಿ ಪಡೆದು ಉದ್ಯಮ ಕೈಗೊಂಡಿರುವವರು ತಯಾರಿಸಿರುವ ಉತ್ಪನ್ನಗಳನ್ನು ಪ್ರದರ್ಶನ ದಲ್ಲಿ ಇಡಲಾಗಿದೆ. ರೈತರಿಗೆ 2 ದಿನಗಳ ತಾಂತ್ರಿಕ ಮಾಹಿತಿ ಕುರಿತು ತರಬೇತಿ ನೀಡಲಾಗುತ್ತಿದೆ. ಎಲ್ಲಾ ವರ್ಗದ ಜನರನ್ನು ಸೆಳೆಯುವಲ್ಲಿ ಈ ಬಾರಿಯ ಫಲಪುಷ್ಪ ಪ್ರದರ್ಶನ ಏರ್ಪಾಡಾಗಿದೆ.

ಫಲಪುಷ್ಪ ಪ್ರದರ್ಶನಕ್ಕೆ ಸಚಿವರಿಂದ ಚಾಲನೆ
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿತವಾಗಿರುವ ಫಲಪುಷ್ಪ ಪ್ರದರ್ಶನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಸಂಸದ ಆರ್.ಧ್ರುವ ನಾರಾಯಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕೃಷ್ಣ, ಉಪಾಧ್ಯಕ್ಷ ಜೆ.ಯೋಗೀಶ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಇತರೆ ಗಣ್ಯರು ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.

ಇದೇ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳು ತೆರೆದಿರುವ ಮಾಹಿತಿ ಮಳಿಗೆಗಳನ್ನು ಗಣ್ಯರು ಉದ್ಘಾಟಿಸಿ ವೀಕ್ಷಣೆ ಮಾಡಿದರು.

ಸಚಿವ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಪ್ರತೀವರ್ಷ ರೈತರು, ಬೆಳೆಗಾರರು, ನಾಗರಿಕರಿಗೆ ಮಾಹಿತಿ ನೀಡುವ ಸಲುವಾಗಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸ ಲಾಗುತ್ತಿದೆ. ಈ ಬಾರಿ ದಸರಾ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಫಲಪುಷ್ಪ ಪ್ರದರ್ಶನ ಆರಂಭಗೊಂಡಿದೆ ಎಂದರು.

ಸಂಸದ ಆರ್.ಧ್ರುವನಾರಾಯಣ ಮಾತನಾಡಿ, ಜಿಲ್ಲೆಯಲ್ಲಿ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಅಂತರ್ಜಲ ವೃದ್ಧಿಯಾಗಿದೆ. ಇದರಿಂದ ರೈತರು ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ. ಚೆನ್ನಪ್ಪ, ಕೆ.ಪಿ.ಸದಾಶಿವಮೂರ್ತಿ, ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಬಿ.ಕೆ.ಶ್ರೀಕಂಠಪ್ಪ, ಎಪಿಎಂಸಿ ಅಧ್ಯಕ್ಷÀ ಶಂಕರಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್ ಇದ್ದರು.

Translate »