ನಾಳೆ, ನಾಡಿದ್ದು ನೀರು ಸರಬರಾಜಲ್ಲಿ ವ್ಯತ್ಯಯ
ಮೈಸೂರು

ನಾಳೆ, ನಾಡಿದ್ದು ನೀರು ಸರಬರಾಜಲ್ಲಿ ವ್ಯತ್ಯಯ

October 21, 2018

ಮೈಸೂರು:  ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕಬಿನಿ ನದಿ ಮೂಲದಿಂದ ಸಗಟು ನೀರು ಸರಬರಾಜು ಮಾಡುವ ಯಂತ್ರಾಗಾರಗಳಿಗೆ 22-10-2018 ರಂದು ಚೆಸ್ಕಾಂ ಇಲಾಖೆಯವರು ತುರ್ತು ದುರಸ್ತಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ, ವಿದ್ಯುತ್ ನಿಲುಗಡೆ ಇರುವುದಾಗಿ ತಿಳಿಸಿರುತ್ತಾರೆ. ಆದು ದರಿಂದ ಮೈಸೂರು ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ನೀರನ್ನು ಪಂಪು ಮಾಡಲು ಸಾಧ್ಯವಾಗುವುದಿಲ್ಲ. ಆದ ಕಾರಣ ಅಕ್ಟೋಬರ್ 22 ಮತ್ತು 23 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.ವಾರ್ಡ್ ನಂ. 44 ರಿಂದ ವಾರ್ಡ್ ನಂ. 51 ಹಾಗೂ 54ರಿಂದ 65 ಹಾಗೂ ದಟ್ಟಗಳ್ಳಿ 3ನೇ ಹಂತದ ಬಡಾವಣೆ ಹಾಗೂ ಇತ್ಯಾದಿ ಪ್ರದೇಶಗಳು.

Translate »