ವಿಶ್ವಸಂಸ್ಥೆಯ ಭಾರತದ ಮೊದಲ ಯಂಗ್ ಬ್ಯುಸಿನೆಸ್ ಚಾಂಪಿಯನ್ ಆಗಿ ಮಾನಸಿ ಕಿರ್ಲೋಸ್ಕರ್ ನೇಮಕ
ಮೈಸೂರು

ವಿಶ್ವಸಂಸ್ಥೆಯ ಭಾರತದ ಮೊದಲ ಯಂಗ್ ಬ್ಯುಸಿನೆಸ್ ಚಾಂಪಿಯನ್ ಆಗಿ ಮಾನಸಿ ಕಿರ್ಲೋಸ್ಕರ್ ನೇಮಕ

October 21, 2018

ಮೈಸೂರು: ಕಿರ್ಲೋಸ್ಕರ್ ಸಿಸ್ಟಮ್ಸ್ ಲಿಮಿಟೆಡ್‍ನ ಕಾರ್ಯಕಾರಿ ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ ಮಾನಸಿ ಕಿರ್ಲೋಸ್ಕರ್ ಅವರು ವಿಶ್ವ ಸಂಸ್ಥೆ ಯಲ್ಲಿ ಭಾರತದ ಮೊದಲ ಸುಸ್ಥಿರ ಅಭಿವೃದ್ಧಿ ಗುರಿಗಳ ಯುವ ಬ್ಯುಸಿನೆಸ್ ಚಾಂಪಿಯನ್ (ಯಂಗ್ ಬ್ಯುಸಿನೆಸ್ ಚಾಂಪಿ ಯನ್ ಫಾರ್ ದಿ ಎಸ್‍ಡಿಜಿ) ಆಗಿ ನೇಮಕಗೊಂಡಿದ್ದಾರೆ.

ಯುವ ಉದ್ಯಮ ನಾಯಕಿ ಯಾಗಿ ನೇಮಕಗೊಂಡಿರುವ ಮಾನಸಿ ಕಿರ್ಲೋಸ್ಕರ್ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ತಾವು ಸಾಧಿಸಿದ ಸಾಧನೆ, ತಲುಪಿದ ಗುರಿಗಳ ಬಗ್ಗೆ ಎಸ್‍ಡಿಜಿಗಳಿಗೆ ಅರಿವು ಮೂಡಿಸಲಿದ್ದಾರೆ. ಅಲ್ಲದೇ, ಇತರೆ ಯುವ ಉದ್ಯಮಿಗಳಿಗೆ ವಿಶೇಷ ಉಪನ್ಯಾಸಗಳನ್ನು ನೀಡುವ ಮೂಲಕ ಸಾಧನೆಯ ಹಾದಿಯ ಮೆಟ್ಟಿಲನ್ನು ಹೇಗೆ ಏರಬೇಕೆಂಬುದರ ಬಗ್ಗೆ ಸ್ಫೂರ್ತಿಯ ಮಾತುಗಳನ್ನಾಡಲಿದ್ದಾರೆ. ಈ ಮೂಲಕ ಎಸ್‍ಡಿಜಿಗಳನ್ನು ಕ್ರಿಯಾಶೀಲರನ್ನಾಗಿ ಮಾಡಲಿ ದ್ದಾರೆ. ಇದಲ್ಲದೇ ಮಾನಸಿ ವಿಶ್ವಸಂಸ್ಥೆಯ ವಿಚಾರಗಳಾದ ಹವಾಮಾನ ಬದಲಾವಣೆ, ಪ್ಲಾಸ್ಟಿಕ್, ತ್ಯಾಜ್ಯ ಮತ್ತು ಮಹಿಳಾ ಸಬಲೀಕರಣದ ಬಗ್ಗೆಯೂ ಉಪನ್ಯಾಸಗಳನ್ನು ನೀಡಲಿದ್ದು, ಈ ಮೂಲಕ ವ್ಯವಹಾರ ಅಭಿವೃದ್ಧಿಯಲ್ಲಿ ಹೇಗೆ ಮುನ್ನಡೆಯ ಬೇಕೆಂಬುದರ ಬಗ್ಗೆ ತಿಳಿವಳಿಕೆ ನೀಡಲಿದ್ದಾರೆ. ಇವರು ವಿಶ್ವ ಸಂಸ್ಥೆ- ಭಾರತದ ವಾಣಿಜ್ಯ ವೇದಿಕೆ (ಯುಎನ್‍ಐಬಿಎಫ್)ಯ ಉದ್ದೇಶಗಳಿಗೆ ಅನುಗುಣವಾಗಿ ಪ್ರಮುಖವಾದ ಪಾತ್ರವನ್ನು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

Translate »