ರಾಜ್ಯದ 19 ವಿವಿಗಳ ಪೂರ್ಣ ಮಾಹಿತಿ ಒಂದೇ ಮಳಿಗೆಯಲ್ಲಿ ಲಭ್ಯ
ಮೈಸೂರು

ರಾಜ್ಯದ 19 ವಿವಿಗಳ ಪೂರ್ಣ ಮಾಹಿತಿ ಒಂದೇ ಮಳಿಗೆಯಲ್ಲಿ ಲಭ್ಯ

October 25, 2018

ಮೈಸೂರು: ಒಂದೇ ಸೂರಿನಲ್ಲಿ ರಾಜ್ಯದಲ್ಲಿರುವ 19 ವಿಶ್ವ ವಿದ್ಯಾನಿಲಯಗಳ ಶೈಕ್ಷಣಿಕ ಸಾಧನೆಯನ್ನು ಅನಾವರಣಗೊಳಿಸುವ ಬೃಹತ್ ಮಳಿಗೆ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧವಾಗುತ್ತಿದೆ. ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ದಸರಾ ವಸ್ತು ಪ್ರದರ್ಶನದಲ್ಲಿ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಮೊದಲ ಬಾರಿ ಸರ್ಕಾರ ಅಧೀನದಲ್ಲಿರುವ 19 ವಿಶ್ವ ವಿದ್ಯಾನಿಲಯಗಳನ್ನು ಒಂದೆಡೆ ಆಯಾಯ ವಿವಿಗಳ ವಿಶೇಷತೆಗಳನ್ನು ಸಾರ್ವಜನಿಕರ ಮುಂದಿಡುವ ಪ್ರಯತ್ನ ಮಾಡಲಾಗುತ್ತದೆ.

120×80 ಅಡಿ ವಿಸ್ತೀರ್ಣದಲ್ಲಿ ಶಿಕ್ಷಣದ ಹುಟ್ಟಿನಿಂದ ಇಲ್ಲಿಯವರೆಗೆ ಸಾಗಿಬಂದ ದಾರಿಯನ್ನು 22 ಮಳಿಗೆಗಳ ಮುಖಾಂ ತರ ಸಾರ್ವಜನಿಕರಿಗೆ ತಿಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ 19 ಮಳಿಗೆಗಳನ್ನು ವಿವಿಗಳಿಗೆ ನೀಡಲಾ ದರೆ, ಒಂದು ಮಳಿಗೆಯಲ್ಲಿ ಸಾರ್ವಜನಿ ಕರ ಅಭಿಪ್ರಾಯ ಸಂಗ್ರಹಿಸಲು ಸ್ಟುಡಿಯೋ ಹಾಗೂ ಮತ್ತೊಂದು ಮಳಿಗೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಬಗ್ಗೆ ಮಾಹಿತಿ ನೀಡಲು ಮಾಡಲಾಗಿದೆ.

ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ಮತ್ತು ತಂಡ ಕಳೆದ 15 ದಿನಗಳಿಂದ ಮಳಿಗೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದು, ಶೇ.60ರಷ್ಟು ಕೆಲಸ ಮುಗಿದಿದೆ. ಮಳಿಗೆಯ ಮುಂಭಾಗ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿಯನ್ನು ಬಿತ್ತರಿಸಲು ಎಲ್‍ಇಡಿ ಪರದೆಯನ್ನು ಅಳವಡಿಸಲಾಗುತ್ತದೆ. 24 ಅಡಿ ಎತ್ತರಕ್ಕೆ ಪುಸ್ತಕಗಳ ಜೋಡಣೆ, ಮಾಹಿತಿ ಯನ್ನು ರವಾನಿಸುವ ಬಿಂಬಕವಾಗಿ 3 ಅಡಿ ಎತ್ತರ, 5 ಅಡಿ ಉದ್ದದ ಪಾರಿ ವಾಳದ ಜತೆಗೆ ಶಿಕ್ಷಣದಿಂದ ಜ್ಞಾನ, ಜ್ಞಾನದಿಂದ ಉದ್ಯೋಗ, ಉದ್ಯೋಗದಿಂದ ಉನ್ನತಿ ಹೊಂದುವ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗುತ್ತದೆ.

‘ನಹಿ ಜ್ಞಾನೇನ ಸದೃಶಂ’ ಘೋಷ ವಾಕ್ಯವನ್ನು ಮಳಿಗೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗುವುದು. ನೂರು ವರ್ಷ ಪೂರೈಸಿರುವ ಮೈಸೂರು ವಿಶ್ವವಿದ್ಯಾ ನಿಲಯದ ಕ್ರಾಫರ್ಡ್ ಭವನ, 14 ಅಡಿ ಎತ್ತರದ ಮರದಲ್ಲಿ ಪುಸ್ತಕಗಳನ್ನು ಎಲೆಗಳ ರೂಪದಲ್ಲಿ ತೋರಿಸಲಾಗಿದೆ. ಪ್ರವೇಶ ದ್ವಾರದ ಬಳಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ ನಾಲ್ವಡಿ ಕೃಷ್ಣ ರಾಜ ಒಡೆಯರ್, ಸರ್.ಎಂ.ವಿಶ್ವೇ ಶ್ವರಯ್ಯ, ಕುವೆಂಪು, ಸಾವಿತ್ರಿ ಬಾಪುಲೆ ಹಾಗೂ ಸಿ.ವಿ.ರಾಮನ್ ಅವರ ಪುತ್ಥಳಿ ಗಳನ್ನು ನಿರ್ಮಿಸಲಾಗುವುದು.

ಎಡಭಾಗದಲ್ಲಿ ಶಿಕ್ಷಣ ಪಡೆದ ರೈತರು ವ್ಯವಸಾಯದಲ್ಲಿ ತಂತ್ರಜ್ಞಾನದೊಂದಿಗೆ ವಿವಿಧ ಬೆಳೆಗಳನ್ನು ಬೆಳೆದು ಉನ್ನತಿಯನ್ನು ಸಾಧಿಸಿರುವುದು ಹಾಗೂ ಶಿಕ್ಷಣ ಪಡೆಯದ ರೈತರ ಶೋಚನೀಯ ಸ್ಥಿತಿಯನ್ನು ಅನಾವರಣಗೊಳಿಸಲಾಗಿದೆ. ಹಾಗೆಯೇ ಬಲಭಾಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶದ ಪ್ರಗತಿಯನ್ನು ಬಿಂಬಿಸಲಾಗಿದೆ.

Translate »