ಮೈಸೂರು: ‘ಅವಕಾಶ ಕೊಟ್ಟರೆ ಆಕಾಶ ಮುಟ್ಟೇವು, ನಮ್ಮ ನಿರ್ಧಾರಗಳಿಗೆ ಮನ್ನಣೆ ನೀಡಿ’, ‘ನನ್ನದು ಬೇಡುವ ಕೈಯಲ್ಲ… ಬರೆಯುವ ಕೈ’, ‘ನಾನು ತೊಟ್ಟಿಗಲ್ಲ-ತೊಟ್ಟಿಲಿಗೆ’, ಹೀಗೆ ಪ್ರತಿ ಪಾದಿಸುವ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಹಾಗೂ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡುವ ಮಳಿಗೆ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ತಲೆಯೆತ್ತುತ್ತಿದೆ.
ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾದ ದಸರಾ ವಸ್ತು ಪ್ರದರ್ಶನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಂಯುಕ್ತಾಶ್ರಯದಲ್ಲಿ ಪ್ರಸ್ತುತ ಮಹಿಳೆಯ ಸದ್ಯದ ಸ್ಥಿತಿ-ಗತಿಯನ್ನು ಅನಾವರಣ ಗೊಳಿಸುವ ಮಳಿಗೆಯನ್ನು ನಿರ್ಮಿಸಲಾಗುತ್ತಿದೆ.
ಹೆಣ್ಣೆಂದರೆ ತಾತ್ಸಾರ, ಹೆಣ್ಣು ಮಗುವಾದರೆ ಅಯ್ಯೋ ವರದಕ್ಷಿಣೆ ಕೊಟ್ಟು ಮದುವೆ ಮಾಡಬೇಕಲ್ಲಾ, ನಮಗೆ ಆಧಾರವಾಗುವುದಿಲ್ಲ ಎಂಬ ಸಂಕುಚಿತ ಮನೋ ಭಾವದಿಂದ ಗರ್ಭದಲ್ಲಿದ್ದಾಗಲೇ ಲಿಂಗ ಪತ್ತೆ ಮಾಡಿ ಮೊಗ್ಗಿನಲ್ಲೇ ಚಿವುಟಲಾಗುತ್ತಿದೆ.
ಹುಟ್ಟಿದ ಪ್ರತಿಯೊಬ್ಬರಿಗೂ ಹಕ್ಕಿದೆ!. ಮಕ್ಕಳಿಗೂ ಜನ್ಮ ತಾಳುವ, ಜೀವಿಸುವ, ಪೌಷ್ಟಿಕ ಆಹಾರ ಪಡೆ ಯುವ, ದೇಶದ ಪ್ರಜೆ ಎಂದು ಹೇಳುವ, ಶಿಕ್ಷಣ ಪಡೆಯುವ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟು ವಟಿಕೆಗಳಲ್ಲಿ ಅವಕಾಶ ಹೊಂದುವ, ದೈಹಿಕ, ಮಾನ ಸಿಕ ಶೋಷಣೆಯಿಂದ ರಕ್ಷಣೆ ಪಡೆಯುವ, ಅಭಿ ಪ್ರಾಯ ಮತ್ತು ಭಾವನೆಯನ್ನು ವ್ಯಕ್ತಪಡಿಸುವ ಹಕ್ಕಿದೆ ಎಂಬ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಾಗಿದೆ.
ಮಕ್ಕಳ ದುಡಿಮೆ ರಾಷ್ಟ್ರಕ್ಕೆ ಕಳಂಕವಾಗಿದೆ. ಬರೆ ಯುವ ಕೈಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಹಾಗೆಯೇ ಚಿಕ್ಕ ಚಿಕ್ಕ ಮಕ್ಕಳಿಂದ ಭಿಕ್ಷಾಟನೆ ಮಾಡಿಸುವುದು ಅಪರಾಧ. ಬೀದಿ ಮಕ್ಕಳು, ಅನಾಥ ಮಕ್ಕಳು, ಬಾಲ ಕಾರ್ಮಿಕರು, ಕಿರುಕುಳಕ್ಕೊಳಗಾದವರು, ಲೈಂಗಿಕ ಶೋಷಣೆ ಮತ್ತು ಕಳ್ಳಸಾಗಾಣಿಕೆ ಒಳಗಾದವರು, ಮಾದಕ ದ್ರವ್ಯ ವ್ಯಸನಿಗಳು, ಸಂಘರ್ಷ ಮತ್ತು ದುರಂತದಲ್ಲಿ ಸಿಲುಕಿದವರು, ಸಂಕಷ್ಟದಲ್ಲಿರುವ ಕಟುಂ ಬದ ಮಕ್ಕಳು, ವಿಶೇಷ ಸಾಮಥ್ರ್ಯವಿರುವ ಮಕ್ಕಳು, ಮಾನಸಿಕ ತೊಂದರೆಗೆ ಒಳಗಾದ ಮಕ್ಕಳು, ಹೆಚ್‍ಐವಿ ‘ಏಡ್ಸ್’ ಸೋಂಕಿತ ಮಕ್ಕಳು, ಕಾನೂನಿ ನೊಡನೆ ಸಂಘರ್ಷಕ್ಕೊಳಗಾದ ಮಕ್ಕಳು ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಾಗಿವೆ.
ಲೈಂಗಿಕ ಅಪರಾಧಗಳು ದೇಶದಲ್ಲಿ ಒಂದಲ್ಲಾ ಒಂದು ಪ್ರದೇಶದಲ್ಲಿ ನಡೆಯುತ್ತಲೇ ಇವೆ. ಮಗು ವನ್ನು ಪ್ರಚೋದಿಸುವುದು, ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗುವುದು, ಲೈಂಗಿಕ ಉದ್ದೇಶದಿಂದ ದೇಹದ ನಾನಾ ಭಾಗಗಳನ್ನು ಮುಟ್ಟುವುದು, ಲೈಂಗಿಕ ಕಿರುಕುಳ, ಅಶ್ಲೀಲ ಚಿತ್ರಗಳ ಸಂಗ್ರಹ, ಸಾಗಾಣಿಕೆ ಅಪರಾಧ. ಬಾಲ್ಯವಿವಾಹವು ಸಮಾಜಕ್ಕೆ ಶಾಪ ವಾಗಿದೆ. 18 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆಯಾದಲ್ಲಿ, ವಯಸ್ಸಿಗೆ ಮೀರಿದ ಕೌಟುಂ ಬಿಕ ಜವಾಬ್ದಾರಿ, ಎಳೆ ವಯಸ್ಸಿನಲ್ಲಿ ಲೈಂಗಿಕ ಸಂಬಂಧದಿಂದ ಮಾನಸಿಕ ಬೆಳವಣಿಗೆಯ ತೊಡಕು, ಹೆರಿಗೆ ಸಮಯದಲ್ಲಿ ತಾಯಿ-ಮಗುವಿನ ಮರಣ ಅಥವಾ ಮಗುವಿನ ಅಸ್ವಸ್ಥತೆ, ಜವಾಬ್ದಾರಿಯನ್ನು ಹೊರುವ ಅಸಮರ್ಥತೆಯಿಂದ ಹೆಚ್ಚುವ ಕೌಟುಂ ಬಿಕ ದೌರ್ಜನ್ಯ, ಗರ್ಭಕೋಶವು ಪೂರ್ಣವಾಗಿ ಬೆಳವಣಿಗೆಯಾಗುವ ಮುನ್ನ ಗರ್ಭಧಾರಣೆ, ಮಾತೃತ್ವದ ಜವಾಬ್ದಾರಿಯಿಂದ ಉಂಟಾಗುವ ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ‘ಮಮತೆಯ ಮಡಿಲು, ಬೇಡವಾದ ಮಗುವಿಗೆ ಸರ್ಕಾರದ ಒಡಲು’ ಎಂಬ ಧ್ಯೇಯದೊಂದಿಗೆ ಮಹಿಳೆಯ ಸಬಲೀಕರಣಕ್ಕೆ ಸರ್ಕಾರ ಕೈಗೊಂಡಿರುವ ಯೋಜನೆಗಳು, ಮಕ್ಕಳ ರಕ್ಷಣೆ, ಅಪರಾಧಗಳಿಗೆ ವಿಧಿಸುವ ಶಿಕ್ಷೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಮಳಿಗೆ ದಸರಾ ವಸ್ತ ಪ್ರದರ್ಶನದ ಆವರಣದಲ್ಲಿ ಸಿದ್ಧವಾಗುತ್ತಿದೆ. ಕಲಾವಿದೆ ರಾಣಿ ರಮೇಶ್ ಮತ್ತು ತಂಡ ಕಳೆದೊಂದು ವಾರದಿಂದ ಮಳಿಗೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದು, ಶೇ.70ರಷ್ಟು ಕೆಲಸ ಮುಗಿದಿದೆ. 30×50 ಅಡಿ ವಿಸ್ತೀ ರ್ಣದ ಮಳಿಗೆಯ ಮುಂದಿನ ಎಡಭಾಗದಲ್ಲಿ 8 ಅಡಿ ಎತ್ತರದ ಗುಡಿಸಲು, ಮಕ್ಕಳ ಸಹಾಯವಾಣಿ, ಅನಾಥ ಮಕ್ಕಳು ಸಮಾಜದಲ್ಲಿ ಹೇಗೆ ಬದುಕುತ್ತಾರೆ ಎಂಬುದನ್ನು ಚಿತ್ರಿಸಿದರೆ, ಬಲ ಭಾಗದಲ್ಲಿಯೂ 8 ಅಡಿ ಎತ್ತರದ ಗುಡಿಸಲು, ತಾಯಿ-ಮಗು ಮತ್ತು ಸುಂದರವಾದ ಕುಟುಂಬ ವನ್ನು ಚಿತ್ರಿಸಲಾಗುತ್ತದೆ. ವಿಶೇಷವಾಗಿ ಮಳಿಗೆಯ ಮಧ್ಯದಲ್ಲಿ 4 ಅಡಿ ಎತ್ತರ ಹಾಗೂ 6 ಅಡಿ ಅಗಲದ ತೊಟ್ಟಿಲಿನ ಜೊತೆಗೆ ಅನಾಥ ಮಕ್ಕಳಿಗೆ ಸರ್ಕಾರ ಆಶ್ರಯವಿದೆ ಎಂಬುದನ್ನು ಸೂಚಿಸುವುದಕ್ಕಾಗಿ ಚಾಚು ತ್ತಿರುವ ಕೈಗಳನ್ನು ನಿರ್ಮಾಣ ಮಾಡಲಾಗುತ್ತದೆ.
5 ಮಳಿಗೆಗಳು: ಮಳಿಗೆಯ ಬಲ ಭಾಗಕ್ಕೆ ಹೊಂದಿಕೊಂಡಂತೆ 5 ಮಳಿಗೆಗಳನ್ನು ನಿರ್ಮಿಸಲಾಗು ತ್ತಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಾಲ ಪಡೆದು ಉದ್ಯಮ ಸ್ಥಾಪಿಸಿರುವ ಮಹಿಳಾ ಉದ್ಯಮಿಗಳಿಗೆ ಹಾಗೂ ಸ್ತ್ರಿ ಶಕ್ತಿ ಸಂಘಗಳ ಮಹಿಳೆ ಯರಿಗೆ ಆದ್ಯತೆಯನ್ನು ನೀಡಲಾಗುವುದು.