ಚನ್ನರಾಯಪಟ್ಟಣದಲ್ಲಿ ಗುಂಪು ಘರ್ಷಣೆ: ಲಾಠಿ ಚಾರ್ಜ್

ಚನ್ನರಾಯಪಟ್ಟಣ: ಪಟ್ಟಣದ ಗಾಣಿಗರ ಬೀದಿಯ ಶನೇಶ್ವರ ದೇವಸ್ಥಾನದ ಗೋಪುರಕ್ಕೆ ಧ್ವಜ ಕಟ್ಟುವ ಸಂಬಂಧ ಭಾನುವಾರ ರಾತ್ರಿ ಎರಡು ಗುಂಪುಗಳ ನಡುವೆ ಆರಂಭವಾದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿದ್ದು, ಪೆÇಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ತಹಬದಿಗೆ ತಂದರು. ಶನೇಶ್ವರ ದೇವಸ್ಥಾನದ ಗೋಪುರಕ್ಕೆ ಇತ್ತೀಚೆಗೆ ನಡೆದ ಈದ್ ಮಿಲಾದ್ ಆಚರಣೆ ವೇಳೆ ಒಂದು ಗುಂಪಿನ ಯುವಕರು ಬಂಡಿಂಗ್ಸ್ ಕಟ್ಟಿದ್ದರು. ಸೋಮ ವಾರ ಕಡೇ ಕಾರ್ತಿಕದ ಹಿನ್ನೆಲೆಯಲ್ಲಿ ಹಳೇ ಬಂಡಿಂಗ್ಸ್ ತೆರವುಗೊಳಿಸಿ ದೇವಸ್ಥಾನದ ಗೋಪುರಕ್ಕೆ ಕೇಸರಿ ಬಂಡಿಂಗ್ಸ್ ಕಟ್ಟಲು ಮತ್ತೊಂದು ಗುಂಪಿನ ಯುವಕರು ಸಿದ್ಧತೆ ನಡೆಸುತ್ತಿದ್ದರು.

ಇದನ್ನು ವಿರೋಧಿಸಿದ ಮತ್ತೊಂದು ಕೋಮಿನ ಯುವಕರು ವಾಗ್ವಾದ ಆರಂಭಿಸುತ್ತಿದ್ದಂತೆ ಕಲ್ಲು ತೂರಾಟ ಶುರುವಾಯಿತು. ಇದರಿಂದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾದರೆ ರಸ್ತೆ ಬದಿ ಇದ್ದ ಆರೇಳು ಬೈಕ್‍ಗಳು, ಒಂದು ಒಮ್ನಿ ಜಖಂಗೊಂಡವು. ಪಟ್ಟಣ ಠಾಣೆ ಪೆÇಲೀಸರು ಸ್ಥಳಕ್ಕೆ ಧಾವಿಸಿದಾಗ ಪೆÇಲೀಸ್ ಜೀಪಿನ ಮೇಲೂ ದುಷ್ಕರ್ಮಿ ಗಳು ಕಲ್ಲು ತೂರಾಟ ಮಾಡಿದರು. ಪರಿಸ್ಥಿತಿ ಉದ್ವಿಗ್ನಗೊಂಡಿದ್ದನ್ನು ಅರಿತ ಇನ್‍ಸ್ಪೆಕ್ಟರ್ ಮಂಜುನಾಥ್ ಹಾಗೂ ಗ್ರಾಮಾಂತರ ವೃತ್ತದ ಇನ್‍ಸ್ಪೆಕ್ಟರ್ ಕಿರಣ್ ಕುಮಾರ್ ಸಿಬ್ಬಂದಿ ಜತೆ ತೆರಳಿ ಕಲ್ಲು ತೂರಾಟದಲ್ಲಿ ನಿರತರಾದವರ ಮೇಲೆ ಲಾಠಿ ಬೀಸಿದರು.