ಹೆಚ್.ಡಿ.ಕೋಟೆ ಕಳ್ಳಿ ಮುಂಬೈನಲ್ಲಿ ಚಿನ್ನಾಭರಣ ಕದ್ದಿದ್ದು ಬಾಲಿವುಡ್ ನಟ ದಿವಂಗತ ಅಮರಿಶ್‍ಪುರಿ ಸಂಬಂಧಿ ಮನೆಯಲ್ಲಿ!

ಮೈಸೂರು: ಚಿನ್ನಾಭರಣ ಕದ್ದ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ ಹೆಚ್.ಡಿ.ಕೋಟೆ ಮೂಲದ ಮಹಿಳೆ ಕಳವು ಮಾಡಿದ್ದು ಬಾಲಿವುಡ್‍ನ ಹೆಸರಾಂತ ಖಳನಟ ಅಮರಿಶ್ ಪುರಿ ಅವರ ಸೋದರ ಸಂಬಂಧಿ ನಿವೃತ್ತ ಕರ್ನಲ್ ಕೆ.ಕೆ.ಪುರಿ ಅವರ ಮಗಳ ಮನೆಯಲ್ಲಿ.

ಮುಂಬೈನ ಕೊಲಬಾ ನಿವಾಸಿಯಾಗಿ ರುವ ನಿವೃತ್ತ ಕರ್ನಲ್ ಕೆ.ಕೆ.ಪುರಿ ಅವರ ಪುತ್ರಿ ಕಾಂಚನ್ ಪುರಿ, ಮನೆಯಲ್ಲಿ ಕಳೆದ ಎರಡು ತಿಂಗಳಿಂದ ಪಾರ್ಟ್‍ಟೈಮ್‍ನಲ್ಲಿ ಮನೆ ಕೆಲಸ ಮಾಡುತ್ತಿದ್ದ ತುಳಸಿ, ಈ ವೇಳೆ ಸನ್ನಡತೆ ತೋರಿದ್ದಳು. ತುಳಸಿಯನ್ನು ನಂಬಿದ್ದ ಮನೆ ಮಾಲೀಕರು ಖಾಯಂ ಆಗಿ ನಿಯೋಜನೆ ಮಾಡಿದ ಒಂದೇ ವಾರದಲ್ಲಿ ತನ್ನ ಕೈಚಳಕ ತೋರಿಸಿದ್ದಾಳೆ ಎಂದು ತಿಳಿದು ಬಂದಿದೆ. ಕಾಂಚನ್ ಪುರಿ ಹಾಗೂ ಅವರ ಪತಿ ವಾಸ್ತುಶಿಲ್ಪಿಗಳಾಗಿದ್ದು, ತಿಂಗಳಿಗೆ 10 ದಿನ ಮಾತ್ರ ಮುಂಬೈ ಕೊಲಬಾದಲ್ಲಿನ ತಮ್ಮ ನಿವಾಸದಲ್ಲಿರುತ್ತಿ ದ್ದರು. ಉಳಿದ 20 ದಿನ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದರು. ಮನೆಯಲ್ಲಿದ್ದ ವಯಸ್ಸಾದ ಅಜ್ಜಿಯನ್ನು ನೋಡಿಕೊಳ್ಳ ಲೆಂದು ಕೆಲಸದವ ರನ್ನು ನೇಮಿಸಿಕೊಂಡಿ ದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದವರನ್ನು ತೆಗೆದು, ತುಳಸಿಯನ್ನು ನೇಮಕ ಮಾಡಿ ಕೊಂಡ ಒಂದೇ ವಾರದಲ್ಲಿ ಈಕೆ 30 ಲಕ್ಷ ರೂ ಮೌಲ್ಯದ ಆಭರಣ ದೋಚಿಕೊಂಡು ಬಂದಿದ್ದಳು ಎಂದು ಹೆಚ್.ಡಿ.ಕೋಟೆ ಪೊಲೀಸರು ತಿಳಿಸಿದ್ದಾರೆ.

ಕಷ್ಟವಾಗಿತ್ತು: ಕಳವು ಪ್ರಕರಣದ ಆರೋ ಪಿಯ ಪತ್ತೆಗೆ ಮುಂಬೈ ಹಾಗೂ ಹೆಚ್.ಡಿ. ಕೋಟೆ ಪೊಲೀಸರು ಹರ ಸಾಹಸಪಟ್ಟು ಪತ್ತೆ ಮಾಡುವುದರೊಂದಿಗೆ ಕಳವು ಮಾಡಿದ್ದ ಆಭರಣಗಳನ್ನು ವಶಕ್ಕೆ ಪಡೆದಿರುವುದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿ ಸಿದ್ದಾರೆ. ಮೊಬೈಲ್ ಸಿಗ್ನಲ್ ಜಾಡು ಹಿಡಿದು ತನಿಖೆ ಆರಂಭಿಸಿದ ಪೊಲೀಸರಿಗೆ ಮೊದಲು ಹೆಚ್.ಡಿ.ಕೋಟೆಯ ಶಿರಮಳ್ಳಿ ಗ್ರಾಮದವ ಳಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಆ ಗ್ರಾಮದಲ್ಲಿ ಕಳ್ಳಿಯ ಸುಳಿವು ದೊರೆಯದೆ ಇದ್ದಾಗ ಸುತ್ತಮುತ್ತಲ ಗ್ರಾಮಗಳಲ್ಲಿ ಪರಿಶೀಲನೆ ನಡೆಸಿದಾಗ ಹಾದ ನೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ರುವ ಒಂಟಿ ಮಹಿಳೆ ರಾತ್ರಿ ವೇಳೆ ಮಾತ್ರ ಮನೆಯಿಂದ ಹೊರಗೆ ಬರುತ್ತಾಳೆಂಬ ಮಾಹಿತಿ ಪಡೆದು, ದಾಳಿ ನಡೆಸಿ ಬಂಧಿ ಸುವ ಮೂಲಕ ಪ್ರಕರಣ ಭೇದಿಸಿದ್ದಾರೆ.

ಅಲ್ಪ ಮೊತ್ತಕ್ಕೆ ಗಿರಿವಿ: ಮನುಗಳ್ಳಿ ತುಳಸಿ ತಾನು ಕದ್ದು ತಂದಿದ್ದ ವಜ್ರಖಚಿತ ಆಭರಣಗಳನ್ನು ಒಂದೊಂದಾಗಿ ಬೇರೆ ಬೇರೆ ಹೆಸರಿನಲ್ಲಿ ಹ್ಯಾಂಡ್‍ಪೋಸ್ಟ್‍ನಲ್ಲಿ ರುವ ಮಹಾವೀರ್ ಪಾನ್ ಬ್ರೋಕರ್ಸ್ ಅಂಗಡಿಯಲ್ಲಿ ಒಂದೊಂದನ್ನು ಕೇವಲ 30 ರಿಂದ 50 ಸಾವಿರ ರೂ.ಗಳಿಗೆ ಗಿರಿವಿ ಇಟ್ಟಿದ್ದಳು ಎಂಬುದು ತನಿಖೆ ವೇಳೆ ಮಾಹಿತಿ ಪಡೆದ ಪೊಲೀಸರು ಕೆಲವೇ ನಿಮಿಷದಲ್ಲಿ ಗಿರಿವಿ ಅಂಗಡಿಯಿಂದ ಎಲ್ಲಾ ಆಭರಣ ಗಳನ್ನು ವಶಪಡಿಸಿಕೊಂಡು ಸಾಕ್ಷಿದಾರ ನಾಗಿ ಅಂಗಡಿ ಮಾಲೀಕನ ಸಹಿ ಪಡೆದು ವಾಪಸ್ಸಾಗಿದ್ದಾರೆ. ತಮಗೆ ಸಹಕರಿಸಿದ ಹೆಚ್.ಡಿ. ಕೋಟೆ ಠಾಣೆಯ ಮುಖ್ಯಪೇದೆ ನಾರಾಯಣ ಹಾಗೂ ಪೇದೆ ಶ್ರೀನಿವಾಸ್ ಅವರನ್ನು ಮುಂಬೈ ಪೊಲೀಸರು ಅಭಿನಂದಿಸಿದ್ದಾರೆ.