ಮೈಸೂರು: ಚಿನ್ನಾಭರಣ ಕದ್ದ ಪ್ರಕರಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ ಹೆಚ್.ಡಿ.ಕೋಟೆ ಮೂಲದ ಮಹಿಳೆ ಕಳವು ಮಾಡಿದ್ದು ಬಾಲಿವುಡ್‍ನ ಹೆಸರಾಂತ ಖಳನಟ ಅಮರಿಶ್ ಪುರಿ ಅವರ ಸೋದರ ಸಂಬಂಧಿ ನಿವೃತ್ತ ಕರ್ನಲ್ ಕೆ.ಕೆ.ಪುರಿ ಅವರ ಮಗಳ ಮನೆಯಲ್ಲಿ. ಮುಂಬೈನ ಕೊಲಬಾ ನಿವಾಸಿಯಾಗಿ ರುವ ನಿವೃತ್ತ ಕರ್ನಲ್ ಕೆ.ಕೆ.ಪುರಿ ಅವರ ಪುತ್ರಿ ಕಾಂಚನ್ ಪುರಿ, ಮನೆಯಲ್ಲಿ ಕಳೆದ ಎರಡು ತಿಂಗಳಿಂದ ಪಾರ್ಟ್‍ಟೈಮ್‍ನಲ್ಲಿ ಮನೆ ಕೆಲಸ ಮಾಡುತ್ತಿದ್ದ ತುಳಸಿ, ಈ ವೇಳೆ ಸನ್ನಡತೆ ತೋರಿದ್ದಳು. ತುಳಸಿಯನ್ನು ನಂಬಿದ್ದ ಮನೆ ಮಾಲೀಕರು ಖಾಯಂ…