ಟಿಪ್ಪು ಕಾಲದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಅಬ್ದುಲ್ ಸಿದ್ದರಾಮಯ್ಯ ಆಗುತ್ತಿದ್ದರು!

ಬೆಂಗಳೂರು,ಅ.31(ಕೆಎಂಶಿ)-ಟಿಪ್ಪು ಸುಲ್ತಾನ್ ಆಡಳಿತದ ಸಂದರ್ಭದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಇವರನ್ನು ಮತಾಂತರಗೊಳಿಸಿ ಇವರಿಗೆ ಅಬ್ದುಲ್ ಸಿದ್ದರಾಮಯ್ಯ ಎಂಬ ಹೆಸರು ನಾಮಕರಣವಾಗುತ್ತಿತ್ತೆಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯ ವಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ಎಂಬುದನ್ನು ಹೊರತುಪಡಿಸಿದರೆ ಉಳಿದ ಎಲ್ಲವೂ ಅಕ್ರಮ. ಅಂಥವರನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಏಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮೈಸೂರು ಭಾಗ ಇಂದು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ದಿಯಾಗಿದ್ದರೆ ಅದಕ್ಕೆ ಮೈಸೂರು ಮಹಾರಾಜರ ಕೊಡುಗೆ ಅಪಾರ. ಅಂತಹ ಮನೆತನದ ವಿರುದ್ಧವೇ ಹೋರಾಟ ಮಾಡಿದ ಟಿಪ್ಪು ಸುಲ್ತಾನ್ ಸಿದ್ದರಾಮಯ್ಯನವರಿಗೆ ಮಾತ್ರ ಪ್ರೇರೇಪಣೆ ಯಾಗಿರಬಹುದು ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಕಾಗುಣಿತ ಪಾಠ ಮಾಡುತ್ತಿದ್ದರು. ಈಗ ನಮಗೆ ಪಾಠ ಮಾಡುವ ಅಗತ್ಯವೂ ಇಲ್ಲ. ಹಿಂದೂಗಳನ್ನು