ಚನ್ನಕೇಶವನಗರ ನಿವಾಸಿಗಳಿಗೆ ಶೀಘ್ರವೇ ಹಕ್ಕುಪತ್ರ

ಬೇಲೂರು: ಪಟ್ಟಣದ ಚನ್ನಕೇಶವನಗರ ಬಡಾವಣೆಯ ನಿವಾಸಿ ಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿ ಯಿಂದ ಹಕ್ಕುಪತ್ರ ವಿತರಿಸುವುದಾಗಿ ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದ್ದಾರೆ.

ಇಲ್ಲಿನ ನಿವಾಸಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಚನ್ನಕೇಶವ ನಗರ ಬಡಾವಣೆಯಲ್ಲಿ ಪುರಸಭೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಎರಡೂ ಜನತೆಗೆ ಕಡೆಯಿಂದ ವಸತಿ ನೀಡಲಾಗಿದೆ. ಆದರೆ ನಿವಾಸಿಗಳಿಗೆ ಹಕ್ಕುಪತ್ರ ಇದುವ ರೆಗೂ ನೀಡಿಲ್ಲ. ನಿಯಮದ ಪ್ರಕಾರ ಹಣ ಪಾವತಿಸಿಕೊಂಡು ಮನೆ ಗಳನ್ನು ನೀಡ ಲಾಗಿದ್ದರೂ ಹಕ್ಕುಪತ್ರ ಕೊಡದೆ ಇರು ವುದು ಸರಿಯಲ್ಲ. ಈ ಬಗ್ಗೆ ಸಂಬಂಧ ಪಟ್ಟರೊಂದಿಗೆ ಚರ್ಚಿಸಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಹೇಳಿದರು.

ಬಡಾವಣೆಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ನಿವಾಸಿಗಳು ಕೋರಿ ದ್ದಾರೆ. ಒಂದು ನ್ಯಾಯಬೆಲೆ ಅಂಗಡಿಗೆ 800 ಗ್ರಾಹಕರು ಇರಬೇಕು. ಚನ್ನಕೇಶವ ನಗರ ಬಡಾವಣೆಯಲ್ಲಿ ಅಂಗಡಿ ತೆರೆಯ ಬೇಕೆಂದರೆ ಕನಿಷ್ಠ 500 ಗ್ರಾಹಕರಾದರೂ ಇರಬೇಕು. ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ. ಉಳಿದಂತೆ ಇರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕ್ಕೆ ಸೂಚಿಸಲಾಗುವುದು ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ಬಿ.ಡಿ. ಚಂದ್ರೇ ಗೌಡ, ಮಾಜಿ ಅಧ್ಯಕ್ಷ ಹೆಚ್.ಎಂ. ದಯಾನಂದ್, ಪುರಸಭಾಧ್ಯಕ್ಷೆ ಭಾರತಿ ಅರುಣಕುಮಾರ್, ನಾಮಿನಿ ಸದಸ್ಯ ಪೈಂಟ್ ರವಿ ಮಾತನಾಡಿದರು. ತಾಪಂ ಉಪಾ ಧ್ಯಕ್ಷೆ ಕಮಲಾ ಚಿಕ್ಕಣ್ಣ, ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಎಂ.ಜಿ.ನಿಂಗರಾಜು ಪ್ರಮುಖರಾದ ಪಿ.ಎಂ.ದೇವರಾಜು, ಎಂ.ಡಿ.ಬಸವರಾಜು, ನಿವಾಸಿಗಳಾದ ಸಿದ್ದೇಶ್, ರಾಜು, ಮುರುಗೇಶ್, ಕುಮಾರ್, ನಾಗೇಂದ್ರ, ನಾರಾಯಣಸ್ವಾಮಿ, ಪುಟ್ಟ ಸ್ವಾಮಿ, ಮಹೇಶ್, ರವಿ ಇತರರಿದ್ದರು.