ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯೊಂದಿಗೆ ಜರುಗಿದ ಹನುಮ ಜಯಂತಿ

ಕುಶಾಲನಗರ:  ಪಟ್ಟಣದ ರಥಬೀದಿಯಲ್ಲಿರುವ ಶ್ರೀ ಆಂಜನೇಯ ದೇವ ಸ್ಥಾನದಲ್ಲಿ ಶ್ರೀ ಆಂಜನೇಯ ಸೇವಾ ಸಮಿತಿ ಹಾಗೂ ಶ್ರೀ ರಾಮಾಂಜನೇಯ ಯುವಕ ಸಂಘದ ವತಿಯಿಂದ ಏರ್ಪಡಿಸಿದ್ದ 33ನೇ ವರ್ಷದ ಹನುಮ ಜಯಂತಿ ಗುರುವಾರ ಶ್ರದ್ಧಾಭಕ್ತಿ ಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದಲೇ ಅರ್ಚಕ ರಾಧಕೃಷ್ಣ ಮತ್ತು ಮಯೂರ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಗಳು ನೆರ ವೇರಿದವು. ಜಯಂತಿ ಅಂಗವಾಗಿ ಶ್ರೀ ಆಂಜನೇಯ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಶೃಂಗ ರಿಸಲಾಗಿತ್ತು. ದೇವಸ್ಥಾನವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗಿತ್ತು. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ವರ್ತಕರು ಭಕ್ತರಿಗೆ ಪಾನಕ ವಿತರಣೆ ಮಾಡಿದರು. ದೇವಸ್ಥಾನ ಸಮಿತಿ ವತಿಯಿಂದ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಎಚ್.ಪ್ರಶಾಂತ್, ಉಪಾಧ್ಯಕ್ಷ ಅನುದೀಪ್, ಕಾರ್ಯದರ್ಶಿ ನವನೀತ್, ಸಹ ಕಾರ್ಯದರ್ಶಿ ಟಿ.ವಿನು, ಖಜಾಂಚಿ ಪ್ರವೀಣ್, ಮುಖಂಡ ರಾದ ಪ್ರಸಾದ್, ಪರಮೇಶ್, ರಘು, ಜನಾರ್ಧನ್, ಮಹೇಶ್, ಹರೀಶ್, ಚಂದ್ರಶೇಖರ್, ಸತೀಶ್, ಮಾಜಿ ಅಧ್ಯಕ್ಷ ಪುಂಡರೀಕಾಕ್ಷ, ಮಾಜಿ ಕಾರ್ಯದರ್ಶಿ ರಾಜೀವ್, ಯುವಕ ಸಂಘದ ಮಾಜಿ ಅಧ್ಯಕ್ಷ ಜಗದೀಶ್ ಹಾಜರಿದ್ದರು.

ಸಂಜೆ ವಿದ್ಯತ್ ಅಲಂಕೃತ ಮಂಟಪದಲ್ಲಿ ಶ್ರೀ ಆಂಜನೇಯ ಸ್ವಾಮಿಯನ್ನು ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಸಿ.ಐ. ಕ್ಯಾತೇಗೌಡ, ವೃತ್ತ ನಿರೀಕ್ಷಕ ಜಗದೀಶ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.