ವಿದ್ಯಾರ್ಥಿಗಳಿಗೆ ಗಣಿತದ ಒಡನಾಟವಿರಲಿ

ಮೈಸೂರು, ಜ.3(ಎಂಕೆ)- ಪ್ರತಿಯೊಂದಕ್ಕೂ ಗಣಿತದ ಲೆಕ್ಕಾಚಾರ ಅಗತ್ಯವಿರುವುದ ರಿಂದ ವಿದ್ಯಾರ್ಥಿಗಳು ಗಣಿತದ ಜತೆ ಹೆಚ್ಚು ಒಡನಾಟ ಬೆಳೆಸಿಕೊಳ್ಳಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಕಿವಿಮಾತು ಹೇಳಿದರು.

ಮೈಸೂರಿನ ಅಕ್ಕನಬಳಗ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತಾಶ್ರಯದಲ್ಲಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿ ಅಂಗವಾಗಿ ಆಯೋಜಿಸಿದ್ದ ‘ರಾಷ್ಟ್ರೀಯ ಗಣಿತ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಕೇವಲ 32 ವರ್ಷ ಬದುಕಿದ್ದರೂ ಜಗತ್ತಿನ ಗಣಿತಲೋಕದಲ್ಲಿ ಯಾರೂ ಮುರಿಯದಂತಹ ದಾಖಲೆ ಬರೆದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. 3900 ಗಣಿತ ಸೂತ್ರಗಳನ್ನು ರಚಿಸಿದ್ದಾರೆ. ‘ಪೈ’ನ ನಿರ್ದಿಷ್ಟ ಮೌಲ್ಯ ನಿರ್ಧರಿಸಲು ರಾಮಾನುಜನ್ ಬರೆದಿದ್ದ ವಿಶೇಷ ಸೂತ್ರ ಗಣಿತದ ಮಹತ್ವದ ಮೈಲು ಗಲ್ಲುಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದರು. ಗಣಿತ ರಸಪ್ರಶ್ನೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೊ.ಸು.ನರಸಿಂಹಮೂರ್ತಿ, ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಮ್ಮ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಶ್ರೀಕಂಠೇಶ್, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಅಕ್ಕನ ಬಳಗ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಗುಣಾವತಿ, ಶಿಕ್ಷಕ ವಿ.ನಾರಾ ಯಣರಾವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.