ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ, ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ

ತಾಯಿ, ಶಿಶು ಮರಣ ತಡೆಗಟ್ಟಲು ಕ್ರಮಕ್ಕೆ ಸೂಚನೆ
ಹಾಸನ: ತಾಯಿ ಮತ್ತು ಶಿಶು ಮರಣ ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತ ನಾಡಿದ ಅವರು, ಗರ್ಭಿಣಿ, ಸ್ತ್ರೀಯರು ಸತ್ವಯುತ ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡುವಂತೆ ಅರಿವು ಮೂಡಿಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಗರ್ಭಿಣಿ ಸ್ತ್ರೀಯರು ಮಾತೃಪೂರ್ಣ ಯೋಜ ನೆಯ ಸೌಲಭ್ಯ ಸಂಪೂರ್ಣವಾಗಿ ಬಳಸಿಕೊಳ್ಳು ವಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರು ಗಮನಿಸ ಬೇಕು ಎಂದು ತಿಳಿಸಿದ ಅವರು, ಗರ್ಭಿಣಿ ಸ್ತ್ರೀಯ ರನ್ನು ಹೆರಿಗೆಗೆ ಆಸ್ಪತ್ರೆಗೆ ಕರೆತರುವಲ್ಲಿ ಆಶಾ ಕಾರ್ಯ ಕರ್ತೆಯರು ಕಾಳಜಿ ವಹಿಸಬೇಕು ಎಂದರು.

ಹೆರಿಗೆ ಸಂದರ್ಭದಲ್ಲಿ ಅಗತ್ಯವಿರುವ ರಕ್ತ ಮತ್ತಿ ತರ ಪೂರ್ವ ಸಿದ್ದತೆಗಳಿಗೆ ಹೆಚ್ಚಿನ ಗಮನ ಹರಿಸು ವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು, ಹೆರಿಗೆ ಸಂದರ್ಭದಲ್ಲಿ ಮತ್ತು ನಂತರದಲ್ಲಿ ತಾಯಿ ಮರಣ ತಪ್ಪಿಸಲು ಹಾಗೂ ನಿಗದಿತ ಅವಧಿಗೆ ಮುನ್ನ ಹೆರಿಗೆ, ಕಡಿಮೆ ತೂಕದ ಶಿಶು ಜನನ ದಿಂದ ಸಂಭವಿಸಬಹುದಾದ ಸಾವುಗಳನ್ನು ತಡೆ ಗಟ್ಟಲು ಮುಂಜಾಗ್ರತೆ ವಹಿಸಿ ಎಂದು ತಿಳಿಸಿದರು.

ಕೆಲಸವನ್ನರಸಿ ಜಿಲ್ಲೆಗೆ ವಲಸೆ ಬಂದಿರುವ ಕುಟುಂಬಗಳ ಗರ್ಭಿಣಿ ಸ್ತ್ರೀಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಎಸ್ಟೇಟ್ ಮಾಲೀಕರೊಂದಿಗೆ ಉಪವಿಭಾಗಾಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿ, ತಹಸೀಲ್ದಾರ್, ಕಾರ್ಮಿಕ ಅಧಿಕಾರಿಗಳು ಸಭೆ ನಡೆಸಬೇಕು. ತಾಯಿ ಮತ್ತು ಶಿಶು ಮರಣಕ್ಕೆ ಕಾರಣವಾದ ಬಾಲ್ಯ ವಿವಾಹ ತಡೆಗಟ್ಟುವ ಬಗ್ಗೆಯೂ ಕೂಡ ಗಮನ ಹರಿಸಬೇಕು ಎಂದರು.

ವೈದ್ಯರು ಖಾಯಿಲೆಗೆ ಮದ್ದು ಕೊಡುವುದರ ಜೊತೆಗೆ ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸ ಬೇಕು. ಅನೈರ್ಮಲ್ಯದಿಂದ ರೋಗ ರುಜಿನಗಳು ಬರುತ್ತವೆ ಎಂಬುದರ ಬಗ್ಗೆಯೂ ಜನರಿಗೆ ಮನ ವರಿಕೆ ಮಾಡಬೇಕು ಎಂದು ತಿಳಿಸಿದರು.
ಕಿಶೋರಿಯರು ಋತುಮತಿಯಾದಾಗ ಮತ್ತು ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಆದ ಸಂದರ್ಭದಲ್ಲಿ ಊರಿನಿಂದ ಹೊರಗೆ ಗುಡಿಸಲುಗಳಲ್ಲಿ ಪ್ರತ್ಯೇಕ ವಾಗಿರಿಸುವುದು ತಪ್ಪು ಎಂಬುದನ್ನು ಗೊಲ್ಲರ ಹಟ್ಟಿಯ ಜನತೆಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮನದಟ್ಟು ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಗರ್ಭಿಣಿ ಸ್ತ್ರೀಯರನ್ನು ಆಸ್ಪತ್ರೆಗೆ ತೋರಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ್ಯಿಸಿ ಅವಳ ಅಸ್ವಾಭಾವಿಕ ಮರಣಕ್ಕೆ ಕಾರಣರಾಗುವ ಕುಟುಂಬದವರ ಮೇಲೆ ಪ್ರಕರಣ ದಾಖಲಿಸ ಬಹುದು ಎಂದರು.

ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೆ.ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಆರ್‍ಸಿ.ಹೆಚ್.ಅಧಿಕಾರಿ ಡಾ.ಜನಾರ್ಧನ್, ತಾಲೂಕು ಆರೋಗ್ಯಾಧಿಕಾರಿ ಹಾಗೂ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸೂಚನೆ
ಹಾಸನ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತುಗಳನ್ನು ವೈಜ್ಞಾನಿಕ ವಾಗಿ ಬೇರ್ಪಡಿಸಿ ನಿರ್ವಹಣೆಗೆ ಕ್ರಮವಹಿಸ ಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಘನತ್ಯಾಜ್ಯ ವಸ್ತುಗಳ ನಿರ್ವಹಣೆಗೆ ಸಂಬಂಧಿಸಿ ದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಹಸಿಕಸವನ್ನು ಪ್ರತಿದಿನ ಹಾಗೂ ಒಣಕಸವನ್ನು ವಾರಕ್ಕೊಮ್ಮೆ ಸಂಗ್ರಹಿಸಲು ಸೂಚಿಸಿದ ಅವರು ಹಸಿಕಸ ಮತ್ತು ಒಣಕಸವನ್ನು ಮನೆಗಳಲ್ಲಿಯೇ ಪ್ರತ್ಯೇಕಿಸಿ ನೀಡುವಂತೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಪ್ಲಾಸ್ಟಿಕ್ ಬಾಟಲ್, ಹಳೆಯ ಬಟ್ಟೆಗಳು ಹಾಗೂ ಮತ್ತಿತರ ಒಣಕಸವನ್ನು ಸ್ವಚ್ಛವಾಗಿ ಸಂಗ್ರಹಿಸಿದಲ್ಲಿ ಎರಡನೇ ಹಂತದ ಕಚ್ಚಾ ಪದಾರ್ಥವಾಗಿ ಬಳಸಲು ಬೇಡಿಕೆ ಬರುತ್ತದೆ ಎಂದರು.

ಸಂಗ್ರಹಿಸಿದ ಹಸಿಕಸವನ್ನು ಯಂತ್ರಗಳ ಮೂಲಕ ವೈಜ್ಞಾನಿಕವಾಗಿ ಪುಡಿ ಮಾಡಿ ಗೊಬ್ಬರವನ್ನಾಗಿಸಿ ಕೃಷಿ ಚಟುವಟಿಕೆಯಲ್ಲಿ ಬಳಕೆ ಮಾಡಲು ಕ್ರಮ ವಹಿಸಬೇಕು. ಕಸ ಸಂಗ್ರಹಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸುವುದರ ಮೂಲಕ ಅದರ ಕಾರ್ಯವೈಖರಿಯನ್ನು ಕಚೇರಿಯಿಂದಲೇ ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಒಣಕಸವನ್ನು ಸಂಗ್ರಹಿಸಲು ನಗರ ವ್ಯಾಪ್ತಿಯಲ್ಲಿ ರುವ ಬಳಕೆ ಮಾಡದೆ ಇರುವ ಸರ್ಕಾರಿ ಹಳೇ ಕಟ್ಟಡಗಳನ್ನು ಗುರುತಿಸಿ ಅದರಲ್ಲಿ ಒಣಕಸ ವಿಲೇ ವಾರಿಗೆ ಕ್ರಮವಹಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಕಸ ನಿರ್ವಹಣಾ ಘಟಕ ಗಳಿಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಸೂಚಿಸಿದರು.

ದೊಡ್ಡ ದೊಡ್ಡ ಕಟ್ಟಡಗಳನ್ನು ತೆರವುಗೊಳಿಸಿದ ಸಂದರ್ಭದಲ್ಲಿ ಕಟ್ಟಡದ ನಿರುಪಯುಕ್ತ ತ್ಯಾಜ್ಯ ಕೆರೆಗಳಿಗೆ ಹಾಕದಂತೆ ಎಚ್ಚರವಹಿಸಿ ಹಸಿಕಸ ಸಂಗ್ರಹಣೆಗೆ ಗುರುತಿಸಿರುವ ಪ್ರದೇಶದಲ್ಲಿಯೇ ಪ್ರತ್ಯೇಕವಾಗಿ ಕಟ್ಟಡದ ನಿರುಪಯುಕ್ತ ತ್ಯಾಜ್ಯ ವಿಲೇವಾರಿಗೆ ಕ್ರಮವಹಿಸಿ ಅದನ್ನು ಮರುಬಳಕೆ ಮಾಡಬಹುದಾಗಿದೆ ಎಂದರು.

ಹಾಸನ ನಗರವನ್ನು ನಾಲ್ಕು ವಲಯವಾಗಿ ವಿಂಗಡಿಸಿ ಕಸ ಸಂಗ್ರಹಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರಲ್ಲದೆ, ಪ್ರಾಯೋಗಿಕವಾಗಿ ಒಣಕಸವನ್ನು ಸಾರ್ವಜನಿಕರು ತಂದು ನೀಡಲು ಕಿಯೋಸ್ಕೋ ವ್ಯವಸ್ಥೆಯನ್ನು ಪ್ರಾರಂಭಿಸಬೇಕು. ನಗರಸಭೆ ಆವರಣ ಅಥವಾ ಸಾರ್ವಜನಿಕರಿಗೆ ಅನುಕೂಲ ವಾಗುವ ಸ್ಥಳದಲ್ಲಿ ಕಿಯೋಸ್ಕೋ ಅನ್ನು ಸ್ಥಾಪಿಸಿ ಮಳಿಗೆ ನಿರ್ವಹಣೆಗೆ ನಗರಸಭೆಯಿಂದ ಒಬ್ಬ ರನ್ನು ನೇಮಿಸಬೇಕು. ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಹೋಟೆಲ್ ಮತ್ತು ಕಲ್ಯಾಣಮಂಟಪಗಳ ತ್ಯಾಜ್ಯ ವನ್ನು ಸ್ವತಃ ತಾವೇ ನಿರ್ವಹಿಸಲು ಮನವರಿಕೆ ಮಾಡಿಕೊಡಲು ಹೋಟೆಲ್ ಮತ್ತು ಕಲ್ಯಾಣ ಮಂಟಪಗಳ ಮಾಲೀಕರೊಂದಿಗೆ ಸಭೆ ನಡೆಸಿ ತ್ಯಾಜ್ಯ ನಿರ್ವಹಣೆಗೆ ಮನವರಿಕೆ ಮಾಡಿಕೊಡು ವಂತೆ ಅಧಿಕಾರಿಗಳಿಗೆ ತಿಳಿಸಿದರು.

ವಾರ್ಡ್‍ವಾರು ಹಿರಿಯ ನಾಗರಿಕರು, ಯುವ ಕರು, ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿ ಗಳನ್ನು ಸಭೆ ಕರೆದು ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಕಸ ವಿಂಗಡಣೆ ಬಗ್ಗೆ ಜಾಗೃತಿ ಮೂಡಿ ಸಲು ಉತ್ತೇಜನ ನೀಡಬೇಕು ಎಂದು ಅಧಿಕಾರಿ ಗಳಿಗೆ ಸೂಚಿಸಿದರು.
ಪೌರ ಕಾರ್ಮಿಕರಿಗೆ ಅಗತ್ಯ ಪರಿಕರಗಳನ್ನು ಒದಗಿಸಬೇಕು. ಇಎಸ್‍ಐ ಮತ್ತು ಪಿಎಫ್, ವಂತಿಕೆಯನ್ನು ಪಾವತಿ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸುವಂತೆ ತಿಳಿಸಿದರಲ್ಲದೆ ಕಾಲ ಕಾಲಕ್ಕೆ ಪೌರಕಾರ್ಮಿಕರಿಗೆ ಚುಚ್ಚುಮದ್ದು ಹಾಕಿ ಸಲು ಕ್ರಮವಹಿಸಬೇಕು ಹಾಗೂ ಅವರ ದಿನ ನಿತ್ಯದ ಹಾಜರಾತಿಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಯನ್ನು ಅನುಷ್ಠಾನ ಮಾಡಬೇಕು ಎಂದು ಅಧಿ ಕಾರಿಗಳಿಗೆ ನಿರ್ದೇಶಿಸಿದರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹೆಚ್.ಪಿ.ಪ್ರಮೋದ್, ನಗರಸಭೆ ಆಯುಕ್ತೆ ರೂಪಾಶೆಟ್ಟಿ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಮುಖ್ಯ ಅಧಿಕಾರಿಗಳು ಹಾಜರಿದ್ದರು.