ಮಡಿಕೇರಿ: ಮಡಿಕೇರಿ ಹೈಟೆಕ್ ಮಾರುಕಟ್ಟೆ ಕಾಮಗಾರಿ ಕಳಪೆ ಗುಣ ಮಟ್ಟದಿಂದ ಕೂಡಿದ್ದು, ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಆಗಿರುವ ಕಾಮ ಗಾರಿಗೆ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಬಾರದೆಂದು ಒತ್ತಾಯಿಸಿ ಮಾರು ಕಟ್ಟೆ ವ್ಯಾಪಾರಿಗಳು ಮತ್ತು ಎಸ್‍ಡಿಪಿಐ ಕಾರ್ಯಕರ್ತರು ನಗರಸಭಾ ಅಧ್ಯಕ್ಷರ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಿಂದ ಆಮೆ ಗತಿಯಲ್ಲಿ ಸಾಗುತ್ತಿರುವ ಸುಮಾರು 3 ಕೋಟಿ ರೂ. ವೆಚ್ಚದ ಮಾರುಕಟ್ಟೆ ಕಾಮ ಗಾರಿ, ಆರಂಭದಿಂದಲೂ ಕಳಪೆ ಗುಣಮ ಟ್ಟದ ಆರೋಪವನ್ನು ಎದುರಿಸುತ್ತಲೇ ಬಂದಿದೆ. ಮಳೆÉಗಾಲದಲ್ಲಿ ಕಾಮಗಾರಿ ಕಳಪೆಯಾಗಿದೆ ಎನ್ನುವುದು ನೂತನ ಕಟ್ಟಡ ತುಂಬಾ ನೀರು ತುಂಬಿದಾಗ ಸಾಬೀತಾ ಯಿತು. ಇದೀಗ ಅಂತಿಮ ಹಂತದ ಕಾಮ ಗಾರಿ ತರಾತುರಿಯಲ್ಲಿ ನಡೆಸಲಾಗುತ್ತಿದ್ದು, ಮೇಲ್ಛಾವಣಿಯ ಶೀಟ್ ಅಳವಡಿಕೆಗೆ ಅತ್ಯಂತ ಕಳಪೆ ಗುಣಮಟ್ಟದ ಸರಳುಗಳನ್ನು ಬಳಸ ಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಳಪೆ ಗುಣಮಟ್ಟದ ಕಾಮಗಾರಿ ಬಗ್ಗೆ ಆರಂಭದಿಂದಲೂ ದೂರು ತ್ತಿದ್ದರೂ ನಗರಸಭಾ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸುತ್ತಲೆ ಬಂದಿದೆ. ಇದೀಗ ಆಗಿರುವ ಕಾಮಗಾರಿಗೆ ಬಿಲ್ ಪಾವತಿ ಮಾಡಲು ನಗರಸಭೆ ಒಪ್ಪಿಗೆ ಸೂಚಿಸಿ ರುವ ಬಗ್ಗೆ ಮಾಹಿತಿ ಲಭಿಸಿದೆ. ಕಾಮ ಗಾರಿ ಸಂಪೂರ್ಣ ಕಳಪೆಯಾಗಿರುವುದು ಸಾಕ್ಷಿ ಸಹಿತ ಸಾಬೀತಾಗಿದ್ದರು ಬಿಲ್ ಪಾವತಿಗೆ ಮುಂದಾಗಿರುವ ನಗರಸಭೆÉಯ ಕ್ರಮ ಖಂಡನೀಯವೆಂದು ನಗರಸಭೆÉಯ ಎಸ್‍ಡಿಪಿಐ ಸದಸ್ಯ ಅಮಿನ್ ಮೊಹಿಸಿನ್ ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷರು ಸ್ಥಳ ಪರಿಶೀಲನೆ ನಡೆಸ ಬೇಕು, ಕಾಮಗಾರಿಯನ್ನು ಸ್ಥಗಿತಗೊಳಿ ಸಬೇಕು ಮತ್ತು ಬಿಲ್‍ನ್ನು ತಡೆಹಿಡಿಯ ಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಸ್ಥಳಕ್ಕೆ ಬಂದ ನಗರಸಭಾ ಅಧ್ಯಕ್ಷೆ ಕಾವೇ ರಮ್ಮ ಸೋಮಣ್ಣ ಹಾಗೂ ಕಾಂಗ್ರೆಸ್ ಸದಸ್ಯ ಹೆಚ್.ಎಂ. ನಂದ ಕುಮಾರ್, ಪ್ರತಿಭಟ ನಾಕಾರರನ್ನು ಸಮಾಧಾನಪಡಿಸಲೆತ್ನಿಸಿದರು.
ಈ ಸಂದರ್ಭ ಮಾತನಾಡಿದ ನಂದ ಕುಮಾರ್, ಕಾಮಗಾರಿ ಸ್ಥಗಿತಕ್ಕೆ ಮತ್ತು ಬಿಲ್ ತಡೆ ಹಿಡಿಯುವುದಕ್ಕೆ ಲಿಖಿತ ರೂಪ ದಲ್ಲಿ ದೂರು ನೀಡಿ. ಪ್ರತಿಭಟನೆ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು. ಇದ ರಿಂದ ಅಸಮಾಧಾನಗೊಂಡ ಅಮಿನ್ ಮೊಹಿಸಿನ್, ನಾವು ನಿಮಗೆ ಬೆಂಬಲ ನೀಡು ವಾಗ ಲಿಖಿತ ರೂಪದಲ್ಲಿ ಏನಾದರೂ ಬರೆದುಕೊಟ್ಟಿದ್ದೀರ ಎಂದು ಪ್ರಶ್ನಿಸಿದರು. ಅಧ್ಯಕ್ಷರು ಮೌನ ವಹಿಸಿರುವುದನ್ನು ಖಂಡಿ ಸಿದ ಪ್ರತಿಭಟನಾಕಾರರು, ನಂದ ಕುಮಾರ್ ಅವರು ಮಾತನಾಡುವುದು ಬೇಡ, ಅಧ್ಯ ಕ್ಷರು ಮಾತನಾಡಲಿ ಎಂದು ಒತ್ತಾಯಿಸಿ ದರು. ಅಲ್ಲದೆ, ಇಬ್ಬರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಪ್ರತಿಭಟನಾಕಾರರು, ಅಧ್ಯಕ್ಷರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ನಗರಸಭೆಗೆ ಅಧ್ಯ ಕ್ಷರೇ ಇಲ್ಲ. ಉಪಾಧ್ಯಕ್ಷರ ಬಳಿ ಮನವಿ ಮಾಡಿಕೊಳ್ಳೋಣವೆಂದು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡರು. ಇದರಿಂದ ಮುಜುಗ ರಕ್ಕೆ ಒಳಗಾದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಸದಸ್ಯ ನಂದಕುಮಾರ್ ಅವರು ಅಧ್ಯಕ್ಷರ ಕಛೇರಿ ಒಳಗೆ ತೆರಳಿದರು.
ನಂತರ ಉಪಾಧ್ಯಕ್ಷ ಪ್ರಕಾಶ್ ಮಾತ ನಾಡಿ, ಇಂಜಿನಿಯರ್‍ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರ ಅಭಿ ಪ್ರಾಯಗಳನ್ನು ಕ್ರೋಢೀಕರಿಸಿ ಕಾಮಗಾರಿ ಸ್ಥಗಿತ ಗೊಳಿಸುವ ಕುರಿತು ಸ್ಥಳದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಎಸ್‍ಡಿಪಿಐ ಸದಸ್ಯ ಕೆ.ಜಿ. ಪೀಟರ್, ಮಾರುಕಟ್ಟೆ ವ್ಯಾಪಾರಿಗಳ ಸಂಘದ ಪ್ರಮುಖ ರಜಾಕ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂ ಡಿದ್ದರು. ಇದಕ್ಕೂ ಮೊದಲು ಬೆಳಗ್ಗಿ ನಿಂದಲೇ ವ್ಯಾಪಾರಿಗಳು ಹಾಗೂ ಎಸ್‍ಡಿ ಪಿಐ ಸದಸ್ಯರು ಮಾರುಕಟ್ಟೆ ಬಳಿ ಪ್ರತಿ ಭಟನೆ ನಡೆಸಿ ನಗರಸಭೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷರು ಸ್ಥಳಕ್ಕೆ ಆಗಮಿಸಲಿಲ್ಲವೆಂದು ನಗರಸಭೆಯ ಎದುರು ಪ್ರತಿಭಟನೆಯನ್ನು ಮುಂದುವರಿಸಿದ್ದರು.