ತೆರಕಣಾಂಬಿಯಲ್ಲಿ ಹಿಂದಿ ದಿವಸ್ ಆಚರಣೆ

ಗುಂಡ್ಲುಪೇಟೆ:  ತಾಲೂಕಿನ ತೆರಕಣಾಂಬಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ರಾಷ್ಟ್ರೀಯ ಹಿಂದಿ ದಿವಸವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಅಂತರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿ ವಿಜೇತ ಆರ್.ಕೆ. ಮಧು ಮಾತನಾಡಿ, ಹಿಂದಿ ಭಾಷೆಯು ದೇಶದ ಬಹುತೇಕ ರಾಜ್ಯಗಳಲ್ಲಿ ಬಳಕೆಯಲ್ಲಿದ್ದು, ಭಾರತದ ಸಂಪರ್ಕ ಭಾಷೆಯಾಗಬೇಕಾದ ಜರೂರು ಇದೆ. ಇದು ಹೆÀಚ್ಚಿನ ಭಾರತೀಯರ ಸಂವಹನ ಭಾಷೆಯಾಗಿದ್ದು, ಇಂಗ್ಲಿಷ್ ವ್ಯಾಮೋಹ ಬಿಟ್ಟು ಹಿಂದಿಯನ್ನು ನಮ್ಮ ಸಂವಹನ ಭಾಷೆಯಾಗಿ ಸ್ವೀಕರಿಸಿ, ಮಕ್ಕಳು ಇದನ್ನು ಅನುಸರಿಸಬೇಕು ಎಂದರು.

ಗ್ರಾಮದ ಸರ್ಕಾರಿ ಪ್ರೌಢಶಾಲಾ ಹಿಂದಿ ಶಿಕ್ಷಕ ನಾಗರಾಜ ಶರ್ಮನ್ ಮಾತನಾಡಿ, ರಾಷ್ಟ್ರ ಭಾಷೆಯಾದ ಹಿಂದಿ ಭಾಷೆ ಸರಳತೆಯಿಂದ ಕೂಡಿದ್ದರೂ ಹಲವಾರು ಹಿರಿಮೆಗಳನ್ನು ಹೊಂದಿ ಪ್ರೌಢಿಮೆ ಮೆರೆಯುತ್ತಿದೆ. ಪ್ರತಿ ದಿನ ಕನಿಷ್ಟ ಒಂದು ಹಿಂದಿ ಶಬ್ದವನ್ನು ಕಲಿತರೆ ಭಾಷೆ ಕಲಿಕೆ ಸುಲಭವಾಗಲಿದೆ ಎಂದರು. ಈ ಸಂದರ್ಭದಲ್ಲಿ ಪ್ರಾಂಶುಪಾಲೆ ಸವಿತಾ, ಸಹ ಶಿಕ್ಷಕಿ ಜಯಲಕ್ಷ್ಮಿ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.