ನೌಕರರಿಗೆ ಕಡ್ಡಾಯ ಮತದಾನಕ್ಕೆ ಅನುವು  ಮಾಡಿಕೊಡಲು ಹೊಟೇಲು ಮಾಲೀಕರ ಸಂಘ ಸೂಚನೆ

Mysuru City Corporation

ಮೈಸೂರು: ನಾಳೆ (ಶುಕ್ರವಾರ) ನಡೆಯಲಿರುವ ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ನೌಕರರಿಗೆ ಕಡ್ಡಾಯವಾಗಿ ಮತ ಚಲಾಯಿ ಸಲು ಅನುವು ಮಾಡಿಕೊಟ್ಟು, ಮತದಾನದ ಬಗ್ಗೆ ಅರಿವು ಮೂಡಿಸಲು ಗಮ್ ಸ್ಟಿಕ್ಕರ್ ಅನ್ನು ಹೊಟೇಲುಗಳ ಮುಂದೆ ಎಲ್ಲರಿಗೂ ಕಾಣುವ ರೀತಿಯಲ್ಲಿ ಪ್ರದ ರ್ಶಿಸುವಂತೆ ಹೊಟೇಲು ಮಾಲೀಕರ ಸಂಘ ತನ್ನ ಸದಸ್ಯರಿಗೆ ತಿಳಿಸಿದೆ.

ಮತದಾನ ದಿನದಂದು ಎಲ್ಲಾ ನೌಕರರಿಗೆ ಕಡ್ಡಾಯವಾಗಿ ಮತ ಚಲಾಯಿಸುವುದಕ್ಕೆ ಅನುವು ಮಾಡಿಕೊಡಲು ಸರ್ಕಾರದ ಚುನಾವಣಾ ಆಯೋಗವು ಕಾರ್ಮಿಕ ಇಲಾಖೆಯ ವತಿಯಿಂದ ಸುತ್ತೋಲೆ ಹೊರಡಿಸಿದ್ದು, ಅದನ್ನು ಎಲ್ಲಾ ಹೊಟೇಲ್ ಮಾಲೀಕರಿಗೂ ಕಳುಹಿಸಲಾಗಿದೆ. ಅದನ್ನು ತಮ್ಮ ತಮ್ಮ ಹೊಟೇಲ್‍ಗಳಲ್ಲಿ ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಅದೇ ರೀತಿ ಚುನಾವಣೆಯ ದಿನದಂದು ಎಲ್ಲಾ ನೌಕರರಿಗೂ ಮತ ಚಲಾಯಿಸಲು ಅವಕಾಶ ಮಾಡಿಕೊಡಬೇಕು ಎಂದು ಮೈಸೂರಿನ ಎಲ್ಲಾ ಹೊಟೇಲ್, ಬೇಕರಿ, ಸ್ವೀಟ್ಸ್, ಉಪಹಾರ ಗೃಹಗಳು, ದರ್ಶಿನಿಗಳಿಗೆ ಸೂಚಿಸಿರುವುದಾಗಿ ಮೈಸೂರು ಹೊಟೇಲು ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.