ಮೈಸೂರಿನ ವಿವಿಧೆಡೆ ಕಳವು

ಮೈಸೂರು, ಜೂ.26(ಎಸ್‍ಪಿಎನ್)- ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಮೂರು ಮನೆಕಳ್ಳತನ ಪ್ರಕರಣ ದಾಖಲಾಗಿದ್ದು, 107 ಗ್ರಾಂ ತೂಕ ಚಿನ್ನಾಭರಣ ಹಾಗೂ ಮೊಬೈಲ್, 70 ಸಾವಿರ ನಗದು ದೋಚಿರುವ ಬಗ್ಗೆ ದೂರು ದಾಖಲಾಗಿದೆ.

40 ಗ್ರಾಂ ಚಿನ್ನದ ಸರ ಕಳವು: ಮನೆಯಲ್ಲಿ ಯಾರೂ ಇಲ್ಲದ ವೇಳೆ ನಕಲಿ ಕೀ ಬಳಸಿ ಒಳನುಗ್ಗಿ ರುವ ಕಳ್ಳರು ಬೀರುವಿನಲ್ಲಿದ್ದ 40 ಗ್ರಾಂ ಚಿನ್ನದ ಸರ, ಮನೆಯ ದಾಖಲಾತಿ ಪತ್ರಗಳು ಕಳವು ಮಾಡಿ ರುವ ಘಟನೆ ಗಾಂಧಿನಗರದ 2 ಅಡ್ಡರಸ್ತೆಯಲ್ಲಿ ಮಂಗಳವಾರ ನಡೆದಿದೆ. ಕೆ.ಆರ್.ಆಸ್ಪತ್ರೆಯಲ್ಲಿ `ಡಿ’ ಗ್ರೂಪ್ ನೌಕರ ರಾದ ಜಯಮ್ಮ ಅವರು ಜೂ.25 ರಂದು ಎಂದಿ ನಂತೆ ಕೆ.ಆರ್.ಆಸ್ಪತ್ರೆಯಿಂದ ಕೆಲಸ ಮುಗಿಸಿ, ಸಂಜೆ ಮನೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಎನ್.ಆರ್.ಠಾಣೆಯಲ್ಲಿ ದೂರು ದಾಖಲಾಗಿದೆ.

ಮೊಬೈಲ್, 70 ಸಾವಿರ ರೂ. ನಗದು ಕಳವು: ರಾತ್ರಿ ವೇಳೆ ಕಿಟಕಿ ಮೂಲಕ ಕೈ ಹಾಕಿ ಬಾಗಿಲು ತೆರೆದು ಮನೆಯಲ್ಲಿದ್ದ ವಿಮೋ ಮೊಬೈಲ್ ಹಾಗೂ ಬೀರುವಿನಲ್ಲಿದ್ದ 70 ಸಾವಿರೂ ನಗದು ದೋಚಿ ಪರಾರಿಯಾಗಿರುವ ಘಟನೆ ಮಂಡಿ ಮೊಹಲ್ಲಾದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮಂಡಿ ಮೊಹಲ್ಲಾ 3ನೇ ಕ್ರಾಸ್‍ನ ತುರಬಾಲಿ ಸ್ಟ್ರೀಟ್ ನಿವಾಸಿ ಸ್ಮಿತಾ ಎಂಬುವರು ಜೂ.20 ರಂದು ರಾತ್ರಿ ಮಲಗುವ ವೇಳೆ ಒಳಗಡೆಯಿಂದ ಡೋರ್ ಲಾಕ್ ಮಾಡಿ ಕೊಂಡು ಮಲಗಿದ್ದು, ತಡರಾತ್ರಿ ಕಿಟಕಿ ಮೂಲಕ ಕೈ ಹಾಕಿ ಬೋಲ್ಟ್ ತೆರೆದು ಒಳನುಗಿರುವ ಕಳ್ಳರು ವಿಮೋ ಮೋಬೈಲ್ ಹಾಗೂ ಬೀರುವಿನಲ್ಲಿದ್ದ 70 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಮಂಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

67 ಗ್ರಾಂ ಚಿನ್ನಾಭರಣವಿದ್ದ ಪರ್ಸ್ ಕಳವು: ವ್ಯಾನಿಟಿ ಬ್ಯಾಗ್‍ನಲ್ಲಿ 67 ಗ್ರಾಂ ಚಿನ್ನಾಭರಣವಿದ್ದ ಪರ್ಸ್ ಕಳವಾಗಿ ರುವ ಘಟನೆ ಹಿನಕಲ್ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದಿದೆ. ಮೈಸೂರಿನ ನಿವಾಸಿ ದೇವರಾಜ್ ಅವರ ಪತ್ನಿ ಎಂ.ಕೆ.ತಿಲೋ ತ್ತಮ ಎಂಬುವರು ಜೂ.24 ರಂದು ಕೆ.ಆರ್.ನಗರ ದಿಂದ ಮೈಸೂರಿಗೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಪ್ರಯಾಣ ಬೆಳಸಿ ರಾತ್ರಿ 7 ಗಂಟೆ ಮೈಸೂ ರಿನ ಹಿನಕಲ್ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ. ಈ ವೇಳೆ ಮನೆಗೆ ತೆರಳುವ ಮುನ್ನ ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಚಿನ್ನಾಭರಣವಿದ್ದ ಪರ್ಸ್ ಪರಿಶೀಲಿಸಿ ಕೊಂಡಾಗ ಯಾರೋ ಖದೀಮರು ವ್ಯಾನಿಟಿ ಬ್ಯಾಗ್ ಜಿಪ್ ತೆರೆದು ಚಿನ್ನಾಭರಣವಿದ್ದ ಪರ್ಸ್ ಕಳುವು ಮಾಡಿರುವ ಬಗ್ಗೆ ತಿಲೋತ್ತಮ ಅವರ ಗಮನಕ್ಕೆ ಬಂದಿದ್ದು, ಈ ಸಂಬಂಧ ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.