ಐಟಿ ಹೆಸರಿನಲ್ಲಿ ಅಪರಿಚಿತರಿಂದ ಅರ್ಚಕರ ಮನೆ ಪರಿಶೀಲನೆ: ದೂರು

ಹೊಳೆನರಸೀಪುರ: ತಾಲೂಕಿನ ಹರದನಹಳ್ಳಿಯ ದೇವೇಶ್ವರ ದೇಗುಲದ ಅರ್ಚಕರ ನಿವಾಸದಲ್ಲಿ ಶುಕ್ರವಾರ ಐಟಿ ಅಧಿಕಾರಿಗಳ ಹೆಸರಿನಲ್ಲಿ ಇಬ್ಬರು ಅಪರಿ ಚಿತರು ತಪಾಸಣೆ ನಡೆಸಿದ ಘಟನೆ ನಡೆದಿದ್ದು, ಈ ಸಂಬಂಧ ಅರ್ಚಕ ಪ್ರಕಾಶ್ ಭಟ್ಟ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ಆಧರಿಸಿ ಪೆÇಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಏ. 12ರಂದು ಬೆಳಿಗ್ಗೆ 11 ಗಂಟೆಯಲ್ಲಿ ನಮ್ಮ ಮನೆಗೆ ಬಂದ ಇಬ್ಬರು ಅಪರಿಚಿತರು, ತಾವು ಐಟಿ ಹಾಗೂ ಚುನಾವಣಾ ಅಧಿಕಾರಿಗಳು ಎಂದು ಹೇಳಿದರು. ಬಳಿಕ, ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಬಂದಿದೆ. ಈ ಹಿನೆÀ್ನಲೆಯಲ್ಲಿ ದೇಗುಲ ಹಾಗೂ ಮನೆಯಲ್ಲಿ ತಪಾಸಣೆ ನಡೆಸಬೇಕು ಎಂದು ಹೇಳಿದರು. ಇಬ್ಬರಲ್ಲಿ ಒಬ್ಬರು ಕನ್ನಡ ಮತ್ತು ಮತ್ತೊಬ್ಬರು ಹಿಂದಿಯಲ್ಲಿ ಮಾತನಾಡಿದರು. ಮೊಬೈಲ್ ಸಹ ಕಸಿದುಕೊಂಡಿದ್ದರು.

ನಾವು ಯಾವುದೇ ಅಕ್ರಮ ಹಣ ಇರಿಸಿಕೊಂಡಿಲ್ಲ ಎಂದರೂ, ಅವರಿಬ್ಬರೂ ದೇವಾಲಯ, ನಮ್ಮ ಮನೆ ಹಾಗೂ ಮತ್ತೊಬ್ಬ ಅರ್ಚಕ ರೇವಣ್ಣ ಅವರ ಮನೆಯಲ್ಲಿಯೂ ತಪಾಸಣೆ ನಡೆಸಿದರು. ಆದರೆ, ಎಲ್ಲಿಯೂ ಹಣ ದೊರಕದ್ದರಿಂದ ಆಚೆ ಬಂದ ಅವರು ಸಿಲ್ವರ್ ಬಣ್ಣದ ಇನ್ನೊವಾ ಕಾರಿನಲ್ಲಿ ತೆರಳಿದರು. ನಮ್ಮ ಮನೆಗೆ ಬಂದವರು ಐಟಿ ಅಧಿಕಾರಿಗಳಲ್ಲ ಎಂದು ಆ ನಂತರ ತಿಳಿಯಿತು. ನಮ್ಮ ಮನೆ, ದೇಗುಲಗಳಿಗೆ ಪ್ರವೇಶಿಸಿದ ಇಬ್ಬರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು ಎಂದು ಪ್ರಕಾಶ್‍ಭಟ್ಟ ದೂರು ನೀಡಿದ್ದಾರೆ.