`ಮನೆ ಬಾಗಿಲಿಗೆ ತಾಲೂಕು ಆಡಳಿತ’ ವಿಶೇಷ ಕಾರ್ಯಕ್ರಮಕ್ಕೆ ಶಾಸಕ ಹೆಚ್.ಪಿ.ಮಂಜುನಾಥ್ ಚಾಲನೆ

ಹುಣಸೂರು, ಜ.20(ಕೆಕೆ)- ಸರ್ವರ್ ಸಮಸ್ಯೆಯಿಂದ ಸರ್ಕಾರಿ ಸೌಲಭ್ಯ ಪಡೆ ಯಲಾಗದೇ ಸಾರ್ವಜನಿಕರು ಕಂಗಾಲಾ ಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಭರವಸೆ ನೀಡಿದರು.

ಹುಣಸೂರು ತಾಲೂಕು ಕಟ್ಟೆಮಳಲ ವಾಡಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಮನೆ ಬಾಗಿಲಿಗೆ ತಾಲೂಕು ಆಡಳಿತ’ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪಚುನಾವಣೆಯ ಸಂದರ್ಭದಲ್ಲಿ ತಾಲೂಕು ಆಡಳಿತವನ್ನು ನಿಮ್ಮ ಮನೆಯ ಬಾಗಿಲಿಗೆ ಕರೆ ತರುತ್ತೇನೆ ಎಂದು ಭರವಸೆ ನೀಡಿದ್ದೆ. ಅದರಂತೆ ಇಂದು ನಡೆದು ಕೊಳ್ಳುತ್ತಿದ್ದೇನೆ. ಈ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಬೇಡಿಕೆ ಈಡೇರಿ ಸಲು ಪ್ರಮಾಣ ಕವಾಗಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಪ್ರಮುಖವಾಗಿದ್ದು, ಸರ್ವರ್ ಸಮಸ್ಯೆ ಯಿಂದ ಆಧಾರ್ ನೋಂದಣ , ತಿದ್ದುಪಡಿ ಸೇರಿದಂತೆ ಅಗತ್ಯ ದಾಖಲೆ ಪಡೆಯಲು ರೈತರು, ಸಾರ್ವಜನಿಕರು ಪರದಾಡುತ್ತಿ ದ್ದಾರೆ ಎಂದು ವಿಷಾದಿಸಿದರು.

ಬೆಳಿಗ್ಗೆ 8ರಿಂದ 11 ಗಂಟೆ ವರೆಗೆ ಮಾತ್ರ ಸರ್ವರ್ ಸಮಸ್ಯೆ ಇಲ್ಲದೆ ಕೆಲಸ ಕಾರ್ಯ ಗಳು ನಡೆಯಲಿದೆ. ಹಾಗಾಗಿ ವೃದ್ಧರು, ವಿಕಲಚೇತನರ ಕೆಲಸ ಕಾರ್ಯಗಳಿಗೆ ಪ್ರಾಮುಖ್ಯತೆ ನೀಡಲಾಗುವುದು. ಯಾವುದೇ ಒಂದು ಸೇವಾ ಕೇಂದ್ರದಲ್ಲಿ ದಿನಕ್ಕೆ 150 ಜನರಿಗೆ ಮಾತ್ರ ಪ್ರಯೋಜನ ಸಿಗಲಿದ್ದು, ಯಾರೂ ಅನ್ಯತಾ ಭಾವಿಸಬಾರದು. ತಾಲೂಕಿನ ಆಧಾರ್ ಕೇಂದ್ರಗಳು ಸೇರಿ ದಂತೆ ಸಾರ್ವಜನಿಕ ಸೇವಾ ಕೇಂದ್ರಗಳ ಲ್ಲಿನ ಸರ್ವರ್ ಸಮಸ್ಯೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

`ಮನೆ ಬಾಗಿಲಿಗೆ ತಾಲೂಕು ಆಡಳಿತ’ ವಿಶೇಷ ಕಾರ್ಯಕ್ರಮದಲ್ಲಿ ಆಧಾರ್ ತಿದ್ದುಪಡಿ, ಜಾತಿ-ಆದಾಯ ದೃಢೀ ಕರಣಕ್ಕೆ ಅರ್ಜಿ ಸ್ವೀಕಾರ ಸೇರಿದಂತೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಂಚಾಯ್ತಿ, ಕಟ್ಟಡ ಕಾರ್ಮಿಕ ಇಲಾಖೆ, ಮೀನುಗಾರಿಕೆ ಇಲಾಖೆ, ಕೃಷಿ, ವಿದ್ಯುತ್, ಅರಣ್ಯ ಇಲಾಖೆ ಸಂಬಂಧಿಸಿ ದಂತೆ 16 ಕೌಂಟರ್‍ಗಳನ್ನು ತೆರೆಯ ಲಾಗಿತ್ತು. ಆದರೆ ಆಧಾರ್ ತಿದ್ದುಪಡಿ ಕೌಂಟರ್‍ನಲ್ಲಿ ಮಾತ್ರ ಬೆಳಿಗ್ಗೆಯಿಂದ ಸಂಜೆವರೆಗೂ ನೂಕು ನುಗ್ಗಲಿನಲ್ಲೇ ಕೆಲಸ ಕಾರ್ಯಗಳು ನಡೆದವು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಪದ್ಮಮ್ಮ ಬಸವರಾಜು, ಜಿಪಂ ಸದಸ್ಯೆ ಸಾವಿತ್ರಮ್ಮ ಮಂಜು, ತಾಪಂ ಸದಸ್ಯರಾದ ಗಣಪತಿ ಇಂಡೊಲ್ಕರ್, ರವಿ, ಗ್ರಾಪಂ ಅಧ್ಯಕ್ಷೆ ಚೆಲುವಮ್ಮ, ಉಪಾಧ್ಯಕ್ಷೆ ಸಿಂಗಮ್ಮ, ಮಾಜಿ ಅಧ್ಯಕ್ಷೆ ಗಾಯಿತ್ರಿ, ತಹಸೀಲ್ದಾರ್ ಬಸವರಾಜು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮೋಹನ್, ಇಓ ಗಿರೀಶ್, ಬಿಇಓ ನಾಗರಾಜು, ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ, ಕೆಇಬಿ ಎಇಇ ಸಿದ್ದಪ್ಪ, ಗಾವಡಗೆರೆ ಉಪತಹಸೀಲ್ದಾರ್ ವೆಂಕಟೇಶ್, ರಾಜಸ್ವ ನಿರೀಕ್ಷಕ ಭಾಸ್ಕರ್ ಸೇರಿದಂತೆ ತಾಲೂಕು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಹೋಬಳಿ ವ್ಯಾಪ್ತಿಯ ಎಲ್ಲಾ ಪಿಡಿಓ ಕಾರ್ಯದರ್ಶಿ ಸಿಬ್ಬಂದಿ ಇದ್ದರು.