ನೀವು ಕರೆದಲ್ಲಿಗೆ ಬರುತ್ತೇನೆ: ವಿಶ್ವನಾಥ್‍ಗೆ ಮಾಜಿ ಸಚಿವ ಸಾ.ರಾ.ಮಹೇಶ್ ಬಹಿರಂಗ ಆಹ್ವಾನ
ಮೈಸೂರು,ಆ.5(ಆರ್‍ಕೆಬಿ)-ನಾನು ವಿಧಾನ ಸೌಧದಲ್ಲಿ ಏನು ಹೇಳಿದ್ದೇನೋ, ಆ ಮಾತಿಗೆ ಇಂದಿಗೂ ಬದ್ಧನಾಗಿದ್ದೇನೆ. ಹಕ್ಕುಚ್ಯುತಿಯೋ, ಮಾನನಷ್ಟ ಮೊಕದ್ದಮೆಯೋ, ದೇವಸ್ಥಾನದಲ್ಲಿ ಆಣೆ-ಪ್ರಮಾಣವೋ ಮಾಡಿದರೆ ಅದಕ್ಕೂ ನಾನು ಬದ್ಧ. ದಿನಾಂಕ ಗೊತ್ತುಪಡಿಸಿ, ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಇಂದಿಲ್ಲಿ ಬಹಿರಂಗ ಆಹ್ವಾನ ನೀಡುವ ಮೂಲಕ ಸವಾಲೆಸೆದಿದ್ದಾರೆ.
ಭಾನುವಾರ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿ ವೇಳೆ ನನ್ನನ್ನು ಚರ್ಚೆಗೆ ಕರೆಯುತ್ತಾರೆ ಎಂದು ಕಾದಿದ್ದೆ. ಆದರೆ ಹಾಗಾಗಲಿಲ್ಲ. ನಿಮ್ಮ ಎಲ್ಲಾ ಷರತ್ತಿಗೂ ನಾನು ಸಿದ್ಧನಾಗಿದ್ದೇನೆ ಎಂದು ಹೇಳಿದರು.
ನಾನು ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲ. ಪಕ್ಷ ದ್ರೋಹ, ವಿಷ ಹಾಕುವ ಕೆಲಸ ಮಾಡಿಲ್ಲ ಎಂದು ವಿಶ್ವನಾಥ್ ಚಾಮುಂಡೇಶ್ವರಿ ದೇವ ಸ್ಥಾನದಲ್ಲಿ ಆಣೆ ಮಾಡಿ, ಸಾಬೀತು ಪಡಿಸಿದರೆ ನಾನು ರಾಜಕಾರಣವನ್ನೇ ಬಿಟ್ಟು ಹೋಗಲು ಸಿದ್ಧ ಎಂದು ಬಹಿರಂಗ ಸವಾಲು ಹಾಕಿದರು.
ಹೆಚ್.ವಿಶ್ವನಾಥ್ ಅವರೇ, ಒಮ್ಮೆ ದೇವರ ಮನೆಯಲ್ಲಿ ಒಬ್ಬರೇ ಕುಳಿತು, ನಾವೆಲ್ಲರೂ ಹೆಚ್.ಡಿ.ದೇವೇಗೌಡರ ಮನೆಯಲ್ಲಿ ಕುಳಿತಿದ್ದಾಗ, ದೇವೇಗೌಡರು, ವಿಶ್ವನಾಥ್.. ನೀನು ಲೋಕಸಭೆ ಅಭ್ಯರ್ಥಿಯಾಗು ಅಂದರು. ಆಗ ನೀವು, ಇಲ್ಲ ಸಿದ್ದರಾಮಯ್ಯರಿಂದ ಸಾಕಷ್ಟು ನೋವು ಅನುಭವಿ ಸಿದ್ದೇನೆ. ನನಗೆ ಯಾವ ಆಸೆಯೂ ಇಲ್ಲ. ನನಗೆ ಶಾಸಕ ಮಾಡಿ ಸಾಕು ಎಂದು ನೀವು ಹೇಳಿರ ಲಿಲ್ಲವೇ? ನಾನು ಕಷ್ಟದಲ್ಲಿದ್ದೇನೆ ಎಂದು ಹೇಳಿ, ಇಂತಹ ಕಡೆ ಹೇಳು, ನನ್ನ ಮಗ ಬರುತ್ತಾನೆ ತಲುಪಿಸು ಎಂದು ನೀವು ಹೇಳಿಲ್ಲವೇ? ನೀವೇ ನಂಬಿರುವ ದೇವಸ್ಥಾನಕ್ಕೆ ಬನ್ನಿ, ಸತ್ಯ ಹೇಳಿಬಿಡಿ. ಏನಿದು ಅನ್ಯಾಯ? ಜನರನ್ನು ಎಷ್ಟು ನಂಬಿಸು ತ್ತೀರಿ? ಎಷ್ಟು ಸುಳ್ಳು ಹೇಳುತ್ತಿದ್ದೀರಿ? ನಿಮಗೆ ಮನಸ್ಸಾಕ್ಷಿ ಇಲ್ಲವೇ? ದೇವನೊಬ್ಬ ಇದ್ದಾನೆ. ನಾವು ದೇವರನ್ನು ನಂಬಿದವರು ಎಂದು ಹೇಳಿದರು..
ಹೆಚ್.ಡಿ.ದೇವೇಗೌಡರಿಗೆ ಪೂಜಿಸುತ್ತೇನೆ ಅಂತೀರಿ. ಒಟ್ಟಿಗೆ ಊಟ ಮಾಡುತ್ತಾ, ದೇವೇ ಗೌಡರು ನಿಮಗೆ ಕೈಮುಗಿದು ಇಂತಹ ವಯಸ್ಸಿ ನಲ್ಲಿ ನೋವು ಕೊಡಬೇಡಿ ಎಂದು ಅವರು ಹೇಳಲಿಲ್ಲವೇ? ಸತ್ಯ ಸಾಬೀತು ಪಡಿಸಲು ನಾನು ಎಲ್ಲಿಗೆ ಬೇಕಾದರೂ ಬರಲು ಸಿದ್ಧ. ನಿಮ್ಮ ಎಲ್ಲಾ ಸವಾಲನ್ನೂ ಶಿರಸ್ಸಾವಹಿಸಿ ಸ್ವಾಗತಿಸುತ್ತೇನೆ. ನೀವೇ ದಿನಾಂಕ ಗೊತ್ತು ಮಾಡಿ. ನಾನೇ ಬರುತ್ತೇನೆ ಎಂದರು.
ನಿಮ್ಮ ಗೋಮುಖ ವ್ಯಾಘ್ರತನ ತಿಳಿಯಲಿ: ರಾಜ್ಯದಲ್ಲಿ 18 ವರ್ಷ ನಿಯತ್ತಿನಿಂದ ಅಧಿಕಾರ ಇಲ್ಲದಿದ್ದರೂ ಕೆಲಸ ಮಾಡಿದ್ದೇನೆ. ಹೆಚ್.ಡಿ. ಕುಮಾರಸ್ವಾಮಿ ಜೊತೆಗೆ ಕೊನೆ ಉಸಿರಿರುವ ವರೆಗೆ ಇರುತ್ತೇನೆ. ಕೆಲ ವಿಚಾರದಲ್ಲಿ ನನ್ನನ್ನು ವಿಚ ಲಿತನನ್ನಾಗಿ ಮಾಡಲು ಹೊರಟಿದ್ದೀರಿ. ರಾಜ್ಯದ ಜನರಿಗ ನಿಮ್ಮ ಗೋಮುಖ ವ್ಯಾಘ್ರತನ ಗೊತ್ತಾಗ ಬೇಕು. ಇಡೀ ರಾಜ್ಯದ ರಾಜಕಾರಣದ ದಿಕ್ಕನ್ನೇ ಬದಲಾಯಿಸಲು ಹೊರಟವರು ನೀವು. ದೇವನೊಬ್ಬ ಇದ್ದಾನೆ, ನೋಡಿಕೊಳ್ಳುತ್ತಾನೆ ಎಂದು ಹೇಳಿದರು.
ತಮ್ಮ ಮಾತಿನ ನಡುವೆ ಸಾ.ರಾ.ಮಹೇಶ್ ಅವರು ವಿಶ್ವನಾಥ್‍ರನ್ನು ಏಕವಚನದಲ್ಲಿ ಸಂಬೋ ಧಿಸಿ, ವಿಶ್ವನಾಥ್.. ನೀನೊಬ್ಬ ರಾಜಕಾರಣದ ವ್ಯಭಿಚಾರಿ.. ನನ್ನ ಬಗ್ಗೆ ಮಾತನಾಡಲು ನೈತಿಕ ಹಕ್ಕಿದೆಯೇ? ಎಂದು ಹೇಳುವ ಮೂಲಕ ಆಕ್ರೋಶವನ್ನು ಹೊರ ಹಾಕಿದರು. ವಿಶ್ವನಾಥ್‍ಗೆ ರಾಜಕೀಯ ಪುನರ್ಜನ್ಮ ಕೊಟ್ಟವರು ಜೆಡಿಎಸ್ ಕಾರ್ಯಕರ್ತರು ಮತ್ತು ಹುಣಸೂರು ಜನತೆ. ಬನ್ನಿ. ರಾಜ್ಯದ ಜನತೆಗೆ ಸತ್ಯ ಗೊತ್ತಾಗಲಿ. ನೀವಾ.. ನಾನಾ ಎಂದು ಜನರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಎಸ್‍ಬಿಎಂ ಮಂಜು, ಪ್ರಕಾಶ್, ಸಂಪತ್, ಸೋಮು, ಲೋಕೇಶ್ ಉಪಸ್ಥಿತರಿದ್ದರು.
ವಿಶ್ವನಾಥ್ ಎಂಬ ಕಾರ್ಕೋಟಕ ವಿಷ: ಸಾ.ರಾ.ಮಹೇಶ್ ವಾಗ್ದಾಳಿ
ಮೈಸೂರು,ಆ.5(ಆರ್‍ಕೆಬಿ)- ಹೆಚ್.ಡಿ. ದೇವೇಗೌಡರ ಕುಟುಂಬಕ್ಕೆ, ಜೆಡಿಎಸ್‍ಗೆ ವಿಷ ಹಾಕಿದ್ದು ನಾನೇ.. ಆದರೆ ಅದು ಹೆಚ್.ವಿಶ್ವ ನಾಥ್ ಎಂಬ ಕಾರ್ಕೋಟಕ ವಿಷವನ್ನೇ ನಾನು ಹಾಕಿದ್ದು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಇಂದಿಲ್ಲಿ ಸ್ಪಷ್ಟಪಡಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಭಾನುವಾರ ವಿಶ್ವನಾಥ್ ಅವರು ಜೆಡಿಎಸ್‍ಗೆ ಸಾ.ರಾ.ಮಹೇಶ್ ವಿಷ ಹಾಕಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರಿಂದ ತಿರಸ್ಕರಿಸಲ್ಪಟ್ಟವರನ್ನು ನಮ್ಮ ಪಕ್ಷದವರೇ ವಿರೋ ಧಿಸಿದರೂ ಹಿರಿಯರೊಬ್ಬರನ್ನು ಪಕ್ಷಕ್ಕೆ ಸೇರಿಸಿದ್ದೇ ನನ್ನ ತಪ್ಪು ಎಂದು ಬೇಸರದಿಂದ ನುಡಿದರು.
ನನ್ನ ರಾಜಕೀಯ ಜೀವನದಲ್ಲಿ ಇಲ್ಲಿಯ ವರೆಗೆ ಯಾವುದೇ ವೈಯಕ್ತಿಕವಾಗಿ ನಿಂದನೆ ಮಾಡಿದವನಲ್ಲ. ನಾನು ಶಾಸಕನಾಗಿ, ಮಂತ್ರಿ ಯಾಗಿ ಕೆಲಸ ಮಾಡಿದ್ದೇನೆ. ನನಗೆ ರಾಜಕಾ ರಣದಲ್ಲಿ ಯಾವ ಆಸೆಯೂ ಇಲ್ಲ. ಆದರೆ ಮೂಲೆಗುಂಪಾಗಿದ್ದ ವ್ಯಕ್ತಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿದ ತಪ್ಪಿಗೆ ನನ್ನ ವಿಚಾರ ಜನರಿಗೆ ಗೊತ್ತಾಗಬೇಕು ಎಂದು ವಿಧಾನ ಸಭೆಯಲ್ಲಿ ತಿಳಿಸಿದ್ದಾಗಿ ಹೇಳಿದರು.
ನನ್ನ ರಾಜಕೀಯ ಜೀವನದಲ್ಲಿ ಯಾವುದೇ ವರ್ಗಾವಣೆ ಅಥವಾ ಗುತ್ತಿಗೆದಾರನ ಬಳಿ ಹಣ ಪಡೆದಿದ್ದೇನೆಯೇ? ಇದೇ ಅವಧಿಯಲ್ಲಿ ನಿಮ್ಮ ಜೊತೆ ಮಾತನಾಡಿ ನೀವು ಹೇಳಿದ ಕಡೆಗೇ ಹಣ ಕೊಡಿಸಿಕೊಡಲಿಲ್ಲವೇ? ನನ್ನ ವ್ಯವಹಾರ, ಬದುಕು. ಆದರೆ ಯಾರಿಗೂ ಮೋಸ ಮಾಡಿಲ್ಲ. ನಿಮಗೆ ವೋಟ್ ಹಾಕಿದ ಕಾರ್ಯಕರ್ತರು, ನಿಮ್ಮೆದುರು ಇರುವಾಗ ಒಂದು ವರ್ಷದಲ್ಲೇ ರಾಜೀನಾಮೆ ಕೊಟ್ಟು ಮುಂಬೈಗೆ ಹೋಗಿ ಕುಳಿತುಕೊಳ್ಳುತ್ತೀರಿ ಎಂದು ಕಿಡಿ ಕಾರಿದರು.
ಇದು ಧರ್ಮ-ಅಧರ್ಮಗಳ ನಡುವೆ ನಡೆ ಯುತ್ತಿರುವ ವಾಗ್ವಾದ. ರಾಜ್ಯದ ಜನರಿಗೆ ಗೊತ್ತಾ ಗಲಿ. ಅದಕ್ಕೇ ನಾನು ಬಹಿರಂಗ ಆಹ್ವಾನ ನೀಡು ತ್ತಿದ್ದೇನೆ ಬನ್ನಿ ದೇವಸ್ಥಾನಕ್ಕೆ, ಸತ್ಯ ಮಾಡಿ. ನಿಮ್ಮ ಆತ್ಮಸಾಕ್ಷಿಗೆ ಸುಳ್ಳು ಹೇಳಬೇಡಿ. ನನ್ನ ಪ್ರಾಮಾಣಿ ಕತೆ, ಜೀವನದ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತಿದೆ. ಆದರೆ ನೀವು ಮುಂಬೈಗೆ ಹೋದ ಉದ್ದೇಶ ಏನು ಎಂಬುದನ್ನು ಬಹಿರಂಗಪಡಿಸಿ ಎಂದು ಆಹ್ವಾನಿಸಿದರು.
ನಂಬಿಕೆ, ವಿಶ್ವಾಸಕ್ಕೆ ಅರ್ಹವಾದ ಕೆ.ಆರ್.ನಗರ ತಾಲೂಕಿಗೆ ಕಳಂಕ ತಂದಿದ್ದೀರಿ. ವಿಧಾನಸೌಧ ದಲ್ಲಿ ಹೇಳಿದ್ದೇನೆ. ನೀವು ಎಷ್ಟಕ್ಕೆ ಮಾರಾಟವಾಗಿ ದ್ದೀರಿ ಹೇಳಿ. ಮುಂಬೈಗೆ ಯಾವ ಕಾರಣಕ್ಕೆ ಹೋಗಿ ಕುಳಿತುಕೊಂಡಿರಿ. ಯಾವ ಆಮಿಷಕ್ಕೆ ಒಳಗಾಗಿದ್ದೀರಿ ಎಂಬುದನ್ನು ಬಹಿರಂಗಪಡಿಸಿ ಎಂದು ಸವಾಲು ಹಾಕಿದರು. ಇವೆಲ್ಲ ಉತ್ತರಗಳಿಗೆ ಸ್ವಲ್ಪ ದಿನ ಕಾದರೆ ಅವೆಲ್ಲವೂ ಹೊರ ಬೀಳುತ್ತವೆ ಎಂದೂ ಹೇಳಿದರು.
ಒಬ್ಬ ರಾಜ್ಯಾಧ್ಯಕ್ಷರಾಗಿ ಬಿ.ಫಾರಂಗೋಸ್ಕರ ನನ್ನನ್ನು ಏಕವಚನದಲ್ಲಿ ನಿಂದಿಸಿದ್ದೀರಿ. ನೀವು ನಿಮ್ಮ ಬೇಳೆ ಬೇಯಿಸಿಕೊಳ್ಳಲು ಜಾತ್ಯತೀತ ಜನತಾದಳ, ನಾಯಕರು ಮತ್ತು ಕಾರ್ಯ ಕರ್ತರೇ ಬೇಕಿದೆಯೇ? ನನ್ನನ್ನೇಕೆ ಟಾರ್ಗೆಟ್ ಮಾಡುತ್ತಿದ್ದೀರಿ? ನಾನು ಯಾರ್ಯಾರನ್ನು ಭೇಟಿ ಮಾಡಿಸಿದೆ ಎಂಬುದನ್ನು ನಿಮ್ಮೆದುರೇ ಹೇಳಲು ತುದಿಗಾಲಲ್ಲಿ ನಿಂತಿದ್ದೇನೆ.
ಕೆಲಸ ಮಾಡಲು ಮಂತ್ರಿ ಸ್ಥಾನವೇ ಬೇಕಿಲ್ಲ: ಕೆಲಸ ಮಾಡಲು ಮಂತ್ರಿ ಸ್ಥಾನವೇ ಬೇಕಿಲ್ಲ. ನಾವು ರಾಜಕೀಯಕ್ಕೆ ಬಂದಿದ್ದು ನಮ್ಮ ಜೀವನ ನಿರ್ವಹಣೆ ಮಾಡಲು ಅಲ್ಲ. ಜನರ ಸೇವೆ ಮಾಡಲು. ನಮಗೆ ಸ್ವಾಮಿ ನಿಷ್ಠೆ ಇದೆ. ನಾವೆಲ್ಲಿ ರುತ್ತೇವೋ ಅವರೇ ದೇವರು. ಹೆಚ್.ವಿಶ್ವನಾಥ್ ರನ್ನು ಕರೆ ತಂದ ಸಂದರ್ಭ ನನಗಾದ ರಾಜ ಕೀಯ ಅನುಭವ, ನನ್ನನ್ನು ಸೋಲಿಸಲು ನಮ್ಮ ಪಕ್ಷದವರೇ ನಡೆಸಿದ ಸಂಚು. ಆಗ ಹೆಚ್.ಡಿ. ಕುಮಾರಸ್ವಾಮಿ ಅವರೇ ಕೆ.ಆರ್.ನಗರಕ್ಕೆ ಬಂದು ನಾಮಪತ್ರ ಸಲ್ಲಿಸಿದರು. ನನಗೆ ಅವರ ಮೇಲೆ ಪ್ರೀತಿ, ಗೌರವವಿದೆ. ಅಂತವರನ್ನೇ ಬಿಟ್ಟು ಪಕ್ಷ ತೊರೆದಿದ್ದೀರಿ. ನಾನು ಬದುಕಿರು ವವರೆಗೂ ಅಂತಹ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಪಪಡಿಸಿದರು.
ಗೂಡಿಂದ ಗೂಡಿಗೆ ಸೇರುವ ಹಕ್ಕಿ
ವಿಶ್ವನಾಥ್ ಹಿರಿಯರು, ವೈಯಕ್ತಿಕ ಟೀಕೆ ಮಾಡಿದ್ದಾರೆ. ಅವರಂತೆ ನಾನು ಮಾತನಾಡುವು ದಿಲ್ಲ. ಅವರು ಹಳ್ಳಿ ಹಕ್ಕಿ, ಹಕ್ಕಿಗಳು ಹೇಗೆಂದರೆ ಒಂದೊಂದು ಕಾಲದಲ್ಲಿ ಒಂದೊಂದು ಗೂಡು ಸೇರುತ್ತವೆ. ವಲಸೆ ಹೋಗುತ್ತವೆ. ಕಾಂಗ್ರೆಸ್, ಜೆಡಿಎಸ್ ಆಯಿತು. ಈಗ ಯಾವ ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಹಳ್ಳಿ ಹಕ್ಕಿ ವಿಶ್ವನಾಥ್ ಅವರು ಗೂಡಿಂದ ಗೂಡಿಗೆ ಸೇರುವ ಹಕ್ಕಿ. ಚಳಿಗಾಲ, ಬೇಸಿಗೆ ಕಾಲ, ಮಳೆಗಾಲ ಹೀಗೆ ಯಾವ್ಯಾವ ಕಾಲದಲ್ಲಿ ಯಾವ ಗೂಡು ಸೇರಬೇಕು ಎಂಬುದನ್ನು ಹಳ್ಳಿ ಹಕ್ಕಿಯೇ ಹೇಳ ಬೇಕು ಎಂದು ಸಾ.ರಾ.ಮಹೇಶ್ ವ್ಯಂಗ್ಯವಾಗಿ ಹೇಳಿದರು.