ನಾನು ಬಿಜೆಪಿ ಸೇರಲ್ಲ, ನನ್ನ ಗೆಲುವಿಗಾಗಿ ಬಿಜೆಪಿಯೇ ಬೇಷರತ್ ಬೆಂಬಲ ನೀಡಿದೆ

ಮಂಡ್ಯ: `ನಾನು ಬಿಜೆಪಿ ಸೇರಲ್ಲ’, ಮಂಡ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿ ನನ್ನ ಗೆಲುವಿಗಾಗಿ ಬಿಜೆಪಿಯೇ ಬೇಷರತ್ ಬೆಂಬಲ ನೀಡಿದೆ ಅಷ್ಟೆ. ಮುಂದೆ ಏನೇ ನಿರ್ಧಾರವಾದರೂ ಮಂಡ್ಯದ ಎಲ್ಲಾ ಜನರ ಅಭಿಪ್ರಾಯದಂತೆಯೇ ತೆಗೆದುಕೊಳ್ಳುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸ್ಪಷ್ಟಪಡಿಸಿದರು.

ನಗರದ ಗುತ್ತಲಿನಲ್ಲಿಂದು ಮುಸ್ಲಿಂ ಮುಖಂಡರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು,ನಾನು ಬಿಜೆಪಿ ಸೇರ್ಪಡೆ ವಿಚಾರ ಕೇವಲ ಊಹಾಪೋಹ. ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಪಕ್ಷೇತರ ವಾಗಿ ಸ್ಪರ್ಧೆ ಮಾಡಿದ್ದೇನೆ. ನನಗೆ ಯಾವುದೇ ಅಧಿ ಕಾರದ ಆಸೆ ಇಲ್ಲ. ಹಾಗಿದ್ದರೆ ಅವರು (ಕಾಂಗ್ರೆಸ್, ಜೆಡಿಎಸ್ ನಾಯಕರು) ಕೊಟ್ಟ ಆಫರ್‍ಗಳನ್ನೇ ಒಪ್ಪಿ ಕೊಳ್ತಿದ್ದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಉಳಿಸಿಕೊಳ್ಳೊ ದಕ್ಕಷ್ಟೇ ಈ ನನ್ನ ಸ್ಪರ್ಧೆ, ಮುಂದೆ ಏನೇ ನಿರ್ಧಾರ ಮಾಡಿದರೂ ನಿಮ್ಮನ್ನು ಕೇಳಿ ಮಾಡ್ತೀನಿ ಎಂದು ಸುಮಲತಾ ಉರ್ದುವಿನಲ್ಲೇ ಮುಸ್ಲಿಂ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು.

ಪತ್ರಿಕೆಯಲ್ಲಿ ಬಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ ಬಗ್ಗೆ ದಾಖಲಾತಿ ಸಹಿತ ಮಾತನಾಡಿದ ಸುಮಲತಾ ಅವರು, ಬಿಜೆಪಿ ಸೇರಿ ಎಂದು ಸುಮಲತಾರನ್ನ ಒತ್ತಾಯಿಸಿಲ್ಲ ಎಂದು ಬಿಎಸ್‍ವೈ ಹೇಳಿದ್ದಾರೆ. ಗೆದ್ದ ಮೇಲೆ ಬಿಜೆಪಿ ಸೇರೋದು ಬಿಡೋದು ಅವರ ವಿವೇಚನೆಗೆ ಬಿಟ್ಟಿದ್ದು ಅಂತಲೂ ಅವರೇ ಹೇಳಿ ದ್ದಾರೆ. ಮಂಡ್ಯದ ರಾಜಕೀಯ ಬೆಳವಣಿಗೆಗಳನ್ನು ನೋಡಿ ಬಿಜೆಪಿ ನನಗೆ ಬೇಷರತ್ ಬೆಂಬಲ ನೀಡಿದೆ. ಬಿಜೆಪಿಗೆ ಹೋಗಬೇಕಿದ್ರೆ ಈಗಲೇ ಹೋಗುತ್ತಿದ್ದೆ. ಇಲ್ಲ ನನಗೆ ಬೇಕಾದಷ್ಟು ಆಫರ್‍ಗಳು ಬಂದಿದ್ದವು. ಆದರೆ ನಾನು ಅದೆಲ್ಲವನ್ನೂ ತಳ್ಳಿಹಾಕಿದ್ದೇನೆ. ಮಂಡ್ಯ ಜನರ ಒತ್ತಾಯದಂತೆ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ದ್ದೇನೆ. ನಿಮಗೆಲ್ಲಾ ತಿಳಿದಿರುವಂತೆಯೇ ಮಂಡ್ಯದ ಎಲ್ಲಾ ಜನರನ್ನು ಮಾತಾಡಿಸಿ, ಅಭಿಪ್ರಾಯ ಪಡೆ ಯಲು ಈ ಮೊದಲು ಬಂದಿದ್ದೆ. ಈಗ ಮತ ಕೇಳಲು ಬಂದಿದ್ದೇನೆ. ಯಾರೇನೇ ಹೇಳಿದರೂ ಅದನ್ನೆಲ್ಲಾ ನಂಬಬೇಡಿ, ನನಗೂ ಒಂದು ಅವಕಾಶ ಕೊಡಿ ನಿಮ್ಮೆಲ್ಲರ ಆಶಯದಂತೆಯೇ ನಡೆಯುತ್ತೇನೆ ಎಂದು ಸುಮಲತಾ ಅಂಬರೀಶ್ ಮನವಿ ಮಾಡಿದರು.

ಯಶ್, ದರ್ಶನ್ ಮತ್ತೆ ಬರ್ತಾರೆ. ಮಧ್ಯದ ಲ್ಲೊಂದು ಬ್ರೇಕ್ ಅಷ್ಟೇ. ಮತ್ತೆ ಏ. 8ರಿಂದ ಪ್ರಚಾರಕ್ಕೆ ಅವರೆಲ್ಲಾ ಬರ್ತಾರೆ. ಕೊನೆವರೆಗೂ ಪ್ರಚಾರದಲ್ಲಿ ಇರ್ತಾರೆ. ಸದ್ಯಕ್ಕೆ ಜನ ಉತ್ತಮ ರೀತಿಯಲ್ಲಿ ಸ್ಪಂದಿ ಸುತ್ತಿದ್ದಾರೆ. ಈ ಬಾರಿ ಬದಲಾವಣೆ ಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಅಂಬರೀಶ್ ಇದ್ದಾಗ ಒಮ್ಮೆಯೂ ಮಂಡ್ಯಕ್ಕೆ ಬರಲಿಲ್ಲ ಎಂಬ ಸಚಿವ ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿದ ಅವರು, ಏನು ಬೇಕಾದರೂ ಹೇಳಲಿ. ಅವರಿಗೆ ರಿಪ್ಲೈ ಮಾಡೋ ಅಗತ್ಯ ನನಗೆ ಇಲ್ಲ. ನಮ್ಮ ಮನೆಯಲ್ಲಿ ಯಾರಾದರೂ ಅನಾ ರೋಗ್ಯಕ್ಕೆ ತುತ್ತಾದಾಗ ಅವರನ್ನು ನೋಡಿಕೊಳ್ಳೋದು ನಮ್ಮ ಮನೆ ಸಂಸ್ಕೃತಿ. ಅವರ ಮನೆಯಲ್ಲಿ ಹೇಗಿ ದೆಯೋ ಗೊತ್ತಿಲ್ಲ. ಅವರ ಮನೆಯವರು ಅನಾ ರೋಗ್ಯದಲ್ಲಿದ್ದಾಗ ಅವರು ರಾಜಕೀಯ ಮಾಡ್ತಾ ರೇನೋ. ಪತ್ನಿಯಾಗಿ ನನ್ನ ಕರ್ತವ್ಯ ಪತಿಯನ್ನು ನೋಡಿಕೊಳ್ಳಬೇಕಿತ್ತು. ಅದನ್ನೇ ನಾನು ಮಾಡಿದ್ದೀನಿ ಎಂದು ಹೇಳಿದರು.

ಈ ವೇಳೆ ಚಿತ್ರ ನಟರಾದ ದೊಡ್ಡಣ್ಣ, ರಾಕ್‍ಲೈನ್ ವೆಂಕಟೇಶ್, ಬಿ.ವಿವೇಕಾನಂದ, ಅರವಿಂದ್, ಬೇಲೂರು ಸೋಮಶೇಖರ್ ಮತ್ತಿತರರು ಇದ್ದರು.