ಮಕ್ಕಳು ವ್ಯಸನಮುಕ್ತರಾಗಬೇಕಿದ್ದರೆ ಸಜ್ಜನರ ಸಹವಾಸದಿಂದ ಸಾಧ್ಯ

ಹೆಚ್.ಡಿ.ಕೋಟೆ: ಮಾದಕ ವ್ಯಸನಗಳನ್ನು ಬಿಡಿಸಬೇಕಾದರೆ ಕುಟುಂಬ ದಲ್ಲಿ ಒಳ್ಳೆ ವಾತಾವರಣವಿರಬೇಕು. ಸಜ್ಜನರ ಸಹವಾಸದಿಂದ ಮಾತ್ರ ಇದು ಸಾಧ್ಯ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಘಟಕ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಹಾಗೂ ತಾಲೂಕಿನ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳ ವಾರ ಪಟ್ಟಣದಲ್ಲಿ ನಡೆದ ಮಾದಕ ವಸ್ತು ವಿರೋಧಿ ಜನ ಜಾಗೃತಿ ಜಾಥಾ ಕಾರ್ಯ ಕ್ರಮದಲ್ಲಿ ಅಶಿರ್ವಚನ ನೀಡಿದರು.

ಶಿಕ್ಷಿತರೇ ಇಂದಿನ ದಿನಮಾನಗಳಲ್ಲಿ ಹೆಚ್ಚಾಗಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವುದು ಅಘಾತಕಾರಿ ಬೆಳವಣಿಗೆಯಾಗಿದೆ. ಯುವ ಜನತೆ ಜೀವನ ಮಟ್ಟ ಉತ್ತಮವಾಗಿಸಲು ನೈತಿಕ ಶಿಕ್ಷಣ ಕೊಡಿಸಿ, ಸಂಸ್ಕಾರ ಕಲಿಸಿ, ಶಿಕ್ಷಿತರನ್ನಾಗಿ ಮಾಡಬೇಕು. ಭವ್ಯ ಭಾರತದ ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಚಿಂತಿಸಿ. ಯಾವುದೇ ಜಾತಿ, ಧರ್ಮ ಎನ್ನದೇ ಒಟ್ಟಾಗಿ ಬದುಕಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು. ಮದ್ಯಪಾನ, ದೂಮಪಾನ ಹಾಗೂ ಇನ್ನಿತರ ಮಾದಕ ವಸ್ತುಗಳ ವ್ಯಸನಕ್ಕೆ ತುತ್ತಾದ ವ್ಯಕ್ತಿ ತನ್ನ ಜೀವನ ಹಾಳು ಮಾಡುವುದರ ಜತೆಗೆ ನಾಡಿನ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದ್ದಾರೆ ಎಂದರು.

ಪಡುವಲ ವಿರಕ್ತ ಮಠದ ಮಹದೇವ ಸ್ವಾಮೀಜಿ ಮಾತನಾಡಿ ಕುಡಿತದಿಂದ ಜೀವನ ಮತ್ತು ಆರೋಗ್ಯ ಹಾಳಾಗುತ್ತದೆ. ಧರ್ಮಸ್ಥಳ ಸಂಸ್ಥೆ ಆಯೋಜಿಸುವ ಮದ್ಯ ವರ್ಜನ ಶಿಬಿರಗಳ ಪ್ರಯೋಜನ ಪಡೆದು ಉತ್ತಮ ವ್ಯಕ್ತಿಗಳಾಗಿ ಬದುಕಲು ಸಾಧ್ಯ ಎಂದರು.

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜ ನೆಯ ತಾಲೂಕು ಯೋಜನಾಧಿಕಾರಿ ಎಂ.ಶಶಿಧರ್ ಪ್ರ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಕ್ಷೇತ್ರ ಯೋಜನೆಯು ತಾಲೂಕಿನಲ್ಲಿ 6 ವರ್ಷ ಪೂರೈಸಿದ್ದು, ದುಡಿದ ಹಣದಲ್ಲಿ ಶೇ,10 ರಷ್ಟು ಹಣ ಉಳಿತಾಯ ಮಾಡಿದರೇ ನಮ್ಮ ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮೊದಲು ಆದಿಚುಂಚ ನಗಿರಿ ಶಿಕ್ಷಣ ಸಂಸ್ಥೆಯ ಆವರಣದಿಂದ ಜಾಗೃತಿ ಜಾಥಾಕ್ಕೆ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಗಿರಿಗೌಡ ಚಾಲನೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನುಕಸ್ತೂರಿ ಜನನಿ ಸಂಸ್ಥೆ ಸಂಸ್ಥಾಪಕ ಸತೀಶ್ ಬಿ.ಆರಾಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಮಂಜುಳಾ ಗೋವಿಂದಚಾರಿ, ಲಯನ್ಸ್ ಅಧ್ಯಕ್ಷ ಬಿ.ಪಿ.ಭಾಸ್ಕರ್, ಸಂಪ ನ್ಮೂಲ ವ್ಯಕ್ತಿ ಸೋಮಶೇಖರ್, ಕಸಾಪ ಅಧ್ಯಕ್ಷ ಕನ್ನಡ ಪ್ರಮೋದ, ರೋಟರಿ ಅಧ್ಯಕ್ಷ ಜಿ.ರವಿ. ಲಯನ್ಸ್ ಸಂಸ್ಥೆ ಅಧ್ಯಕ್ಷ ಬಿ.ಪಿ.ಭಾಸ್ಕರ್, ಕಾವೇರಿ ಗೂಡ್ಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ರವಿಚಂದ್ರ, ಜೈಹಿಂದ್ ಆಟೋ ಚಾಲಕರ ಸಂಘದ ಅಧ್ಯಕ್ಷ ಚಲುವರಾಜು,ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣಯ್ಯ, ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸ್ವಾಮಿ, ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರವಿಗೌಡ, ಉಪನ್ಯಾಸಕ ಬೈರೇಗೌಡ, ಎಸ್.ಪಿ. ಪ್ರಕಾಶ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ದಿ ಸಂಸ್ಥೆಯ ವಲಯ ಮೇಲ್ವಿಚಾರ ಕರಾದ ರೇಣುಕಾ, ರಾಜೇಶ್, ಅಣ್ಣಪ್ಪ, ಜ್ಯೋತಿ, ಜಯರಾಮ್ ಸಂಘ- ಸಂಸ್ಥೆ ಗಳ ಮಹಿಳಾ ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು.