ಪ್ರೇರಣೆ ಸಾಧನೆಗೆ ಸ್ಫೂರ್ತಿ

ಮೈಸೂರು:  ಸಮಯ ವನ್ನು ಬಂಡವಾಳವಾಗಿ ಬಳಸಿಕೊಂಡು, ಮಾಡುವ ಕೆಲಸದ ಮೇಲೆ ನಂಬಿಕೆ ಇಟ್ಟು ಕಾರ್ಯನಿರ್ವಹಿಸಿದರೆ ಯಶಸ್ಸು ಸಾಧ್ಯ ಎಂದು ಅಂತರರಾಷ್ಟ್ರೀಯ ಭಾಷಣಕಾರ ಡಾ.ವಿವೇಕ್ ಬಿಂದ್ರಾ ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ರುಪಿಟ್ರೀ ಫೌಂಡೇಷನ್ ಸಂಸ್ಥೆ ವತಿಯಿಂದ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೊರೆತ ಸಮಯ ವ್ಯರ್ಥ ಮಾಡಿ ಕೊಳ್ಳಬಾರದು. ಪ್ರತಿ ವ್ಯಕ್ತಿಗೂ ಪ್ರೇರೇಪಣೆ ನೀಡಬೇಕು. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜು ನನ್ನು ಪ್ರೇರೇಪಿಸುವಂತೆ ಸಾಧನೆ ಮಾಡು ವವರಿಗೆ ಪ್ರೇರಣೆ ಅಗತ್ಯವಾಗಿದೆ ಎಂದರು.

ಪ್ರತಿಯೊಬ್ಬರು ತಾವು ಮಾಡುವ ಕೆಲಸ ದಲ್ಲಿ ನಂಬಿಕೆ ಇರಬೇಕು. ನಮ್ಮ ನಂಬಿಕೆಯೇ ಪರಿಣಾಮಕಾರಿಯಾಗಿ ಕೆಲಸ ಮಾಡಿ ಉತ್ತಮ ಫಲಿತಾಂಶ ಪಡೆಯಲು ಸಹಕಾರಿ ಯಾಗಲಿದೆ. ನಾವು ನಡೆಯುವ ದಾರಿಯಲ್ಲಿ ಏರಿಳಿತಗಳು, ನಕಾರಾತ್ಮಕ ಪ್ರತಿಕ್ರಿಯೆಗಳು ಬರುತ್ತವೆ. ಆದರೆ, ನಾವು ಸಕಾರಾತ್ಮಕವಾಗಿ ಮುನ್ನುಗ್ಗಬೇಕು. ನಕಾರಾತ್ಮಕವಾಗಿ ಕೆಲಸ ಮಾಡುವವರ ಕುರಿತು ತಲೆಕೆಡಿಸಿಕೊಳ್ಳದೆ, ನಮ್ಮ ಕೆಲಸದಲ್ಲಿ ತೊಡಗಿಕೊಳ್ಳಬೇಕು.

ಹಸು ಹಾಲು ನೀಡುವುದು ಸತ್ಯ. ಆದರೆ, ಹಸು ತಾನಾಗಿಯೇ ಹಾಲು ನೀಡು ವುದಿಲ್ಲ. ಹಸುವಿನಿಂದ ಹಾಲನ್ನು ಕರೆದು ಕೊಳ್ಳಬೇಕು. ದುಡ್ಡು ಬರಲಿ ಎಂದು ನಾವು ಸುಮ್ಮನೆ ಕುಳಿತರೆ ಯಾವ ಕಾರಣಕ್ಕೂ ದುಡ್ಡು ನಮ್ಮ ಬಳಿ ಬರಲ್ಲ. ಎದ್ದು ಕೆಲಸ ಮಾಡಿ ದರೆ ಮಾತ್ರ ದುಡ್ಡು ಬರುತ್ತದೆ. ಬದಲಾಗ ಬೇಕೆಂದು ಮನೆಯಲ್ಲಿಯೇ ಕುಳಿತರೆ ಬದಲಾ ವಣೆ ಸಾಧ್ಯವಿಲ್ಲ. ಕೆಲವೊಮ್ಮೆ ನಮಗೆ ಕೆಟ್ಟ ಆಲೋಚನೆಗಳು ಬರುತ್ತಲೇ ಇರುತ್ತವೆ. ಅವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದೆ, ಸೃಜನಾತ್ಮಕವಾಗಿ ಕೆಲಸ ಮಾಡಲು ಮುಂದಾಗಿ. ಕಂಪನಿ ಕಟ್ಟಿ ಬೆಳೆಸಿ ಎಂದು ಅವರು ಹುರಿದುಂಬಿಸಿದರು.

ಹಿಟ್ಲರ್ ತಮ್ಮ ದೇಶದ ಪ್ರತಿ ಪ್ರಜೆಯಲ್ಲೂ ದೇಶಾಭಿಮಾನ ಬೆಳಸಲು ಮುಂದಾದ, ಪ್ರತಿಯೊಬ್ಬರನ್ನು ಹೊಗಳಿ ದೇಶ ಸೇವೆಗೆ ಪ್ರೇರೇಪಿಸಿದ. ಆದ್ದರಿಂದ ಜರ್ಮನ್ ದೇಶದ ಪ್ರತಿ ಪ್ರಜೆಯೂ ದೇಶಾಭಿಮಾನದಿಂದ ಯುದ್ಧದಲ್ಲಿ ಭಾಗವಹಿಸಲು ಸಾಧ್ಯವಾ ಯಿತು. ಅಂತೆಯೇ ಕೆಲಸ ಮಾಡುವ ಸಿಬ್ಬಂದಿ ಗಳಿಗೆ ಅಭಿನಂದನೆ ಸಲ್ಲಿಸಿ, ಇನ್ನಷ್ಟು ಕೆಲಸ ಮಾಡಲು ಪ್ರಚೋದನೆ ನೀಡಬೇಕು ಎಂದು ಸಲಹೆ ನೀಡಿದರು. ಸೇಫ್ ವೀಲ್ ಮುಖ್ಯಸ್ಥ ಪ್ರಶಾಂತ್, ಜಿಎಸ್‍ಎಸ್ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ, ರುಪಿ ಟ್ರೀ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್, ಕ್ರಿಯೇಟಿವ್ ಈವೆಂಟ್‍ನ ಕಿಶೋರ್ ಉಪಸ್ಥಿತರಿದ್ದರು.